ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರದಲ್ಲಿ ಶಿಂಧೆ ಸರ್ಕಾರ ಸೇರಲು ಫಡ್ನವೀಸ್‌ ಒಪ್ಪಿಗೆ; ಡೆಪ್ಯೂಟಿ ಸಿಎಂ ಸ್ಥಾನ - ದೇವೇಂದ್ರ ಫಡ್ನವೀಸ್​ ಬಗ್ಗೆ ಅಮಿತ್​ ಶಾ ಮಾಹಿತಿ

ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ಅವರು ಏಕನಾಥ್​ ಶಿಂಧೆ ಸರ್ಕಾರದ ಭಾಗವಾಗಿರಲು ಒಪ್ಪಿಕೊಂಡಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್​ ಶಾ ಟ್ವೀಟ್​ ಮಾಡಿದ್ದಾರೆ.

ಏಕನಾಥ್​ ಶಿಂಧೆ ಸರ್ಕಾರ ಸೇರಲು ದೇವೇಂದ್ರ ಫಡ್ನವೀಸ್ ಒಪ್ಪಿಗೆ
ಏಕನಾಥ್​ ಶಿಂಧೆ ಸರ್ಕಾರ ಸೇರಲು ದೇವೇಂದ್ರ ಫಡ್ನವೀಸ್ ಒಪ್ಪಿಗೆ

By

Published : Jun 30, 2022, 7:31 PM IST

ಮುಂಬೈ:ತಾವು ಹೊಸ ಸರ್ಕಾರದ ಭಾಗವಾಗಿ ಇರುವುದಿಲ್ಲ ಎಂದುಹೇಳಿದ್ದ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್​ ಅವರನ್ನು ಬಿಜೆಪಿ ಹೈಕಮಾಂಡ್‌ ಮನವೊಲಿಸಿದ್ದು, ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ.

ಈ ಬಗ್ಗೆ ಟ್ವೀಟ್​ ಮಾಡಿರುವ ಕೇಂದ್ರ ಗೃಹ ಸಚಿವ ಅಮಿತ್​ ಶಾ, ದೇವೇಂದ್ರ ಫಡ್ನವೀಸ್​ ಅವರು ಜನರ ಹಿತಕ್ಕಾಗಿ ಮುಂದಿನ ಮಹಾರಾಷ್ಟ್ರ ಸರ್ಕಾರದಲ್ಲಿರಲಿದ್ದಾರೆ. ಸರ್ಕಾರದ ಭಾಗವಾಗಿ ಇರುವಂತೆ ಜೆ.ಪಿ.ನಡ್ಡಾ ಸಲ್ಲಿಸಿದ ಕೋರಿಕೆಯನ್ನು ಅವರು​ ಮನ್ನಿಸಿದ್ದಾರೆ. ಇದು ಅವರ ಜನಪರ ಕಾಳಜಿಯನ್ನು ತೋರಿಸುತ್ತದೆ ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು ದೇವೇಂದ್ರ ಫಡ್ನವೀಸ್​ ಅವರು ಏಕನಾಥ್​ ಶಿಂಧೆ ಅವರನ್ನು ಮೈತ್ರಿ ಸರ್ಕಾರದ ಮುಖ್ಯಮಂತ್ರಿ ಎಂದು ಘೋಷಿಸಿದ್ದರು. ಬಳಿಕ ತಾವು ಸರ್ಕಾರದ ಭಾಗವಾಗಿರುವುದಿಲ್ಲ ಎಂದೂ ತಿಳಿಸಿದ್ದರು.

ಇದನ್ನೂ ಓದಿ:ಮಹಾರಾಷ್ಟ್ರ ಮುಂದಿನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಆಯ್ಕೆ!

ABOUT THE AUTHOR

...view details