ಸೂರತ್ (ಗುಜರಾತ್): ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ನವವಧು ಒಬ್ಬರು ಪಾಲ್ಗೊಂಡು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಎಂಬಿಎ ಪ್ರಥಮ ವರ್ಷ ಅಧ್ಯಯನ ಮಾಡುತ್ತಿರುವ ಪ್ರೀತಿ ಚೌಧರಿ ಸಾಂಪ್ರದಾಯಿಕ ಉಡುಗೆಯಲ್ಲಿಯೇ ಮತಗಟ್ಟೆಗೆ ಆಗಮಿಸಿದ್ದಾರೆ.
ನಂತರ ಈ ಬಗ್ಗೆ ಮಾತನಾಡಿದ ಅವರು, ಮೊದಲ ಬಾರಿಗೆ ಮತದಾನ ಮಾಡಿರುವುದು ನನಗೆ ಸಂತಸವಿದೆ. ದೇಶದ ವಿಕಾಸದ ಹಿನ್ನೆಲೆ ನಾನು ನನ್ನ ಹಕ್ಕನ್ನು ಚಲಾಯಿಸಿದ್ದೇನೆ. ವಿವಾಹಕ್ಕೆ 10 ನಿಮಿಷ ಸಮಯ ಇದ್ದಿದ್ದರಿಂದ ಮತಗಟ್ಟೆಗೆ ಬಂದು ಮತದಾನ ಮಾಡಿದ್ದೇನೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.