ರಾಯ್ಪುರ(ಛತ್ತೀಸ್ಗಢ) :ಜಂಜಗೀರ್ - ಚಂಪಾ ಜಿಲ್ಲೆಯಲ್ಲಿ ಶ್ರೀರಾಮ ಪರಿವಾರವಿರುವ ಸೀರೆ ನೇಯ್ಗೆ ಮಾಡಲಾಗಿದೆ. ಇಲ್ಲಿ ಶ್ರೀರಾಮನ ಆಸ್ಥಾನದ ಒಂದು ನೋಟ ಗೋಚರಿಸುತ್ತಿದ್ದು, ‘ರಾಮಾಯಣ ಸೀರೆ’ ಹೆಸರಿನಲ್ಲಿ ಬಿಡುಗಡೆ ಮಾಡಲಾಗಿದೆ.
ರಾಯ್ಪುರದಲ್ಲಿ ‘ರಾಮಾಯಣ ಸೀರೆ’ ತಯಾರಿ - ಛತ್ತಿಸ್ಗಢದಲ್ಲಿ ರಾಯ್ಪುರದಲ್ಲಿ ‘ರಾಮಾಯಣ ಸೀರೆ’ ತಯಾರಿ
ಕೈಮಗ್ಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಚಂದ್ರಪುರ ಪರಮೇಶ್ವರಿ ವೀವರ್ಸ್ ಕೋ ಆಪರೇಟಿವ್ ಸೊಸೈಟಿ ರಾಮಾಯಣ ಸೀರೆಯನ್ನು ಸಿದ್ಧಪಡಿಸುತ್ತಿದೆ..
ಛತ್ತೀಸ್ಗಢ ಸರ್ಕಾರ ರಾಮ್ ವ್ಯಾನ್ ಗಮನ್ ಮಾರ್ಗವನ್ನು ರಾಷ್ಟ್ರೀಯ ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸುತ್ತಿದೆ. ಕೈಮಗ್ಗಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಚಂದ್ರಪುರ ಪರಮೇಶ್ವರಿ ವೀವರ್ಸ್ ಕೋ ಆಪರೇಟಿವ್ ಸೊಸೈಟಿ ರಾಮಾಯಣ ಸೀರೆಯನ್ನು ಸಿದ್ಧಪಡಿಸುತ್ತಿದೆ ಎಂದು ಅಪೆಕ್ಸ್ ಕೈಮಗ್ಗ ಒಕ್ಕೂಟದ ಜನರಲ್ ಮ್ಯಾನೇಜರ್ ಎ.ಅಯಾಸ್ ಹೇಳಿದರು. ಈ ಸೀರೆಯ ಬೆಲೆ 15,316 ರೂಪಾಯಿಯಾಗಿದೆ.
ಇಬ್ಬರು ನೇಕಾರರು 12 ದಿನಗಳಲ್ಲಿ ಈ ವಿಭಿನ್ನ ವಿನ್ಯಾಸದ ಸೀರೆ ತಯಾರಿಸಿದ್ದಾರೆ. ಈ ಸೀರೆ ಗ್ರಾಹಕರನ್ನು ತುಂಬಾ ಆಕರ್ಷಿಸುತ್ತಿದೆ. ಪೂಜಾ ಪಠಣ ಮಾಡುವ ಸಂದರ್ಭದಲ್ಲಿ ಧರಿಸಬಹುದಾಗಿದೆ. ಚಾಂದಕುರಿಯಲ್ಲಿರುವ ಮಾತಾ ಕೌಶಲ್ಯ ದೇವಾಲಯದ ವಾಸ್ತುಶಿಲ್ಪದ ವಿನ್ಯಾಸ, ದುಧಧಾರಿ ಮಠದ ವಿನ್ಯಾಸದ ಸೀರೆಗಳನ್ನೂ ತಯಾರಿಸಲಾಗಿದೆ.