ಕರ್ನಾಟಕ

karnataka

ETV Bharat / bharat

ಹಳಿ ತಪ್ಪಿದ ಸರಕು ತುಂಬಿದ ಗೂಡ್ಸ್​ ರೈಲು : ಪ್ಯಾಸೆಂಜರ್​ ರೈಲುಗಳ ಸಂಚಾರ ಅಸ್ತವ್ಯಸ್ತ

ಸರಕು ತುಂಬಿದ್ದ ಗೂಡ್ಸ್​ ರೈಲು ಹಳಿ ತಪ್ಪಿದ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಹಳಿ ತಪ್ಪಿದ ಸರಕು ತುಂಬಿದ ಗೂಡ್ಸ್​ ರೈಲು
ಹಳಿ ತಪ್ಪಿದ ಸರಕು ತುಂಬಿದ ಗೂಡ್ಸ್​ ರೈಲು

By PTI

Published : Dec 11, 2023, 8:54 AM IST

ಥಾಣೆ:ಮುಂಬೈನಿಂದ 100 ಕಿಲೋಮೀಟರ್‌ ದೂರದಲ್ಲಿರುವ ಕಸರಾ ಎಂಬಲ್ಲಿ ಗೂಡ್ಸ್ ರೈಲೊಂದು ಹಳಿ ತಪ್ಪಿರುವ ಘಟನೆ ಭಾನುವಾರ ನಡೆದಿದೆ.

ರೈಲ್ವೇ ಅಧಿಕಾರಿ ಹೇಳಿರುವ ಪ್ರಕಾರ, ನಿನ್ನೆ ಸಂಜೆ 6.30ರ ಸುಮಾರಿಗೆ ಸರಕು ತುಂಬಿದ್ದ ಗೂಡ್ಸ್​ ರೈಲಿನ ಒಟ್ಟು ಏಳು ವ್ಯಾಗನ್‌ಗಳು ಹಳಿ ತಪ್ಪಿವೆ. ಇದರ ಪರಿಣಾಮ ಕಾಸರದಿಂದ ಇಗತ್‌ಪುರಿ ಡೈನ್ ಲೈನ್ ವಿಭಾಗ ಮತ್ತು ಮಿಡ್ಲ್ ಲೈನ್ ವಿಭಾಗದ ನಡುವಿನ ಮೇಲ್ ಎಕ್ಸ್‌ಪ್ರೆಸ್ ಸಂಚಾರಕ್ಕೆ ತೊಂದರೆಯಾಗಿದೆ. ಆದರೆ, ಇಗತ್‌ಪುರಿ ಮತ್ತು ಕಾಸರ ಅಪ್‌ಲೈನ್‌ ಸಂಚಾರದ ಮೇಲೆ ಯಾವುದೇ ಪರಿಣಾಮ ಬೀರಿಲ್ಲ ಎಂದು ತಿಳಿಸಿದ್ದಾರೆ. 12261 ಮುಂಬೈ ಸಿಎಸ್‌ಎಂಟಿ-ಹೌರಾ ಎಕ್ಸ್‌ಪ್ರೆಸ್, 11401 ಸಿಎಸ್‌ಎಂಟಿ-ಅದಿಲಾಬಾದ್ ನಂದಿಗ್ರಾಮ್ ಎಕ್ಸ್‌ಪ್ರೆಸ್, 12105 ಸಿಎಸ್‌ಎಂಟಿ-ಗೊಂಡಿಯಾ ವಿದರ್ಭ ಎಕ್ಸ್‌ಪ್ರೆಸ್ ಸೇರಿದಂತೆ ಇತರೆ ರೈಲುಗಳ ಸಂಚಾರ ಅಸ್ತವ್ಯಸ್ತವಾಗಿದೆ.

ಉಳಿದಂತೆ ಕೆಲ ರೈಲುಗಳ ಸಂಚಾರ ಮಾರ್ಗವನ್ನು ಬೇರೆಡೆಗೆ ಬದಲಾಯಿಸಲಾಗಿದೆ. ಭಾನುವಾರ ಪ್ರಯಾಣವನ್ನು ಪ್ರಾರಂಭಿಸಬೇಕಿದ್ದ ಮೇಲ್ ಎಕ್ಸ್‌ಪ್ರೆಸ್​ ರೈಲುಗಳಾದ, 17612 ಸಿಎಸ್‌ಎಂಟಿ ನಾಂದೇಡ್ ಎಕ್ಸ್‌ಪ್ರೆಸ್ ಅನ್ನು ಕಲ್ಯಾಣ್-ಕರ್ಜತ್-ಪುಣೆ-ದೌಂಡ್-ಲಾತೂರ್ ಮಾರ್ಗವಾಗಿ, 12105 ಸಿಎಸ್‌ಎಂಟಿ ಗೊಂಡಿಯಾ ಎಕ್ಸ್‌ಪ್ರೆಸ್ ಕಲ್ಯಾಣ್-ಪುಣೆ-ದೌಂಡ್-ಮನ್ಮದ್ ಮಾರ್ಗ, 12137 CSMT-ಫಿರೋಜ್‌ಪುರ ಪಂಜಾಬ್ ಮೇಲ್ ಅನ್ನು ದಿವಾ-ವಸಾಯಿ-ಉಧಾನ-ಜಲಗಾಂವ್ ಮಾರ್ಗ, 12289 CSMT ನಾಗ್ಪುರ ದುರಂತೋ ಎಕ್ಸ್‌ಪ್ರೆಸ್ ಅನ್ನು ದಿವಾ-ವಸಾಯಿ-ಉಧಾನ-ಜಲಗಾಂವ್ ಮಾರ್ಗ, 12111 ಸಿಎಸ್‌ಎಂಟಿ ಅಮರಾವತಿ ಎಕ್ಸ್‌ಪ್ರೆಸ್ ಕಲ್ಯಾಣ್-ಪುಣೆ-ದೌಂಡ್-ಮನ್ಮಾಡ್, 12809 ಸಿಎಸ್‌ಎಂಟಿ ಹೌರಾ ಎಕ್ಸ್‌ಪ್ರೆಸ್ ದಿವಾ-ವಸಾಯಿ-ಉಧಾನ-ಜಲ್ಗೋನ್ ಮಾರ್ಗ, 17057 ಸಿಎಸ್‌ಎಂಟಿ- ಸಿಕಂದರಾಬಾದ್ ಎಕ್ಸ್‌ಪ್ರೆಸ್ ಕಲ್ಯಾಣ್- ಕರ್ಜಾತ್-ಪುಣೆ ಮಾರ್ಗ, 12322 CSMT ಹೌರಾ ಎಕ್ಸ್‌ಪ್ರೆಸ್ ದಿವಾ-ವಸಾಯಿ-ಉಧಾನ- ಜಲಗಾಂವ್ ಮಾರ್ಗ, 18029 LTT ಶಾಲಿಮಾರ್ ಎಕ್ಸ್‌ಪ್ರೆಸ್ ದಿವಾ-ವಸಾಯಿ-ಉಧಾನ-ಜಲಗಾಂವ್ ಮಾರ್ಗ, 12167 LTT ವಾರಣಾಸಿ ಎಕ್ಸ್‌ಪ್ರೆಸ್ ದಿವಾ-ವಸಾಯಿ-ಉಧಾನ-ಜಲಗಾಂವ್ ಮಾರ್ಗಗಳಿಗೆ ಬದಲಾಯಿಸಲಾಗಿದೆ.

ಹಿಂದಿನ ಘಟನೆಗಳು:ಇತ್ತೀಚೆಗೆ ಒಡಿಶಾದ ಸಂಬಲ್‌ಪುರ ಜಿಲ್ಲೆಯಲ್ಲಿ ಮೆಮು (MEMU) ಪ್ಯಾಸೆಂಜರ್​ ರೈಲು ಕೋಣಕ್ಕೆ ಗುದ್ದಿ ಹಳಿತಪ್ಪಿತ್ತು. ಸಂಜೆ ಸಮಯ ರೈಲು ಝಾರ್ಸುಗುಡದಿಂದ ಸಂಬಲ್ಪುರಕ್ಕೆ ತೆರಳುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿತ್ತು. ಉಳಿದಂತೆ ಈ ವರ್ಷ ಹಲವೆಡೆ ರೈಲು ಅಪಘಾತಗಳು ಸಂಭವಿಸಿವೆ. ಒಡಿಶಾ ರೈಲು ಅಪಘಾತ, ಆಂಧ್ರಪ್ರದೇಶ ವಿಶಾಖಪಟ್ಟಣ ರೈಲು ಅಪಘಾತ ನಡೆದಿತ್ತು. ಜೂನ್ 2ರಂದು ಒಡಿಶಾದಲ್ಲಿ ನಡೆದ ಅಪಘಾತದಲ್ಲಿ 290ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡಿದ್ದರು. ಅಕ್ಟೋಬರ್ 29ರಂದು ಆಂಧ್ರಪ್ರದೇಶದಲ್ಲಿ ಮತ್ತೊಂದು ಭೀಕರ ರೈಲು ಅವಘಡ ಸಂಭವಿಸಿ, 13 ಮಂದಿ ಸಾವನ್ನಪ್ಪಿದ್ದು, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಇದನ್ನೂ ಓದಿ:ಹಳಿ ತಪ್ಪಿದ ಕಾರಟಗಿ - ಯಶವಂತಪುರ ರೈಲು: ಗಂಗಾವತಿ-ಕಾರಟಗಿ ನಡುವೆ ಸಂಚರಿಸುವ ರೈಲುಗಳ ಭಾಗಶಃ ರದ್ದು

ABOUT THE AUTHOR

...view details