ಕರ್ನಾಟಕ

karnataka

ETV Bharat / bharat

ಶಾಸಕರಾಗಿ ಪ್ರಮಾಣ ಸ್ವೀಕರಿಸಿದ ಬಾಬುಲ್​ ಸುಪ್ರಿಯೋ: ರಾಜ್ಯಪಾಲರು ನಮ್ಮನ್ನು ವಿಭಜಿಸುತ್ತಿದ್ದಾರೆ ಎಂದ ಡೆಪ್ಯೂಟಿ ಸ್ಪೀಕರ್​ - ರಾಜ್ಯಪಾಲರು ನಮ್ಮನ್ನು ವಿಭಜಿಸುತ್ತಿದ್ದಾರೆ ಎಂದ ಡೆಪ್ಯೂಟಿ ಸ್ಪೀಕರ್​ ಆಶಿಶ್ ಬಂಡೋಪಾಧ್ಯಾಯ

ರಾಜ್ಯಪಾಲರು ನಮ್ಮ ನಡುವೆ ಬಿರುಕು ಮೂಡಿಸಲು ಎಷ್ಟೇ ಪ್ರಯತ್ನಪಟ್ಟರೂ ಅದು ಸಾಧ್ಯವಿಲ್ಲ ಎಂದು ಆಶಿಶ್ ಬಂಡೋಪಾಧ್ಯಾಯ ಸ್ಪಷ್ಟಪಡಿಸಿದ್ದಾರೆ. ರಾಜಭವನದಿಂದ ಎಷ್ಟೇ ಪ್ರಯತ್ನ ಪಟ್ಟರೂ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಉಪಸಭಾಧ್ಯಕ್ಷರು, ರಾಜ್ಯಪಾಲರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

Deputy Speaker trains guns at Governor at Babul Supriyo's swearing-in ceremony
ಶಾಸಕರಾಗಿ ಪ್ರಮಾಣ ಸ್ವೀಕರಿಸಿದ ಬಾಬುಲ್​ ಸುಪ್ರಿಯೋ: ರಾಜ್ಯಪಾಲರು ನಮ್ಮನ್ನು ವಿಭಜಿಸುತ್ತಿದ್ದಾರೆ ಎಂದ ಡೆಪ್ಯೂಟಿ ಸ್ಪೀಕರ್

By

Published : May 11, 2022, 10:59 PM IST

ಕೋಲ್ಕತ್ತಾ: ಸಚಿವ ಪಾರ್ಥ ಚಟರ್ಜಿ ಅವರ ಸಮ್ಮುಖದಲ್ಲಿ ಉಪ ಸಭಾಧ್ಯಕ್ಷ ಆಶಿಶ್​ ಬಂಡೋಪಾಧ್ಯಾಯ, ಶಾಸಕ ಬಾಬುಲ್ ಸುಪ್ರಿಯಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ನಡುವೆ, ಬಾಬುಲ್ ಸುಪ್ರಿಯೋ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಜಗದೀಪ್ ಧಂಖರ್ ಅವರು 'ವಿಭಜನೆ' ಸೃಷ್ಟಿಸಿದ್ದಾರೆ ಎಂದು ಪಶ್ಚಿಮ ಬಂಗಾಳ ವಿಧಾನಸಭೆ ಉಪಸಭಾಪತಿ ಆಶಿಶ್ ಬಂಡೋಪಾಧ್ಯಾಯ ಆರೋಪಿಸಿದ್ದಾರೆ.

ರಾಜ್ಯಪಾಲರು ನಮ್ಮ ನಡುವೆ ಬಿರುಕು ಮೂಡಿಸಲು ಎಷ್ಟೇ ಪ್ರಯತ್ನಪಟ್ಟರೂ ಅದು ಸಾಧ್ಯವಿಲ್ಲ ಎಂದು ಆಶಿಶ್ ಬಂಡೋಪಾಧ್ಯಾಯ ಸ್ಪಷ್ಟಪಡಿಸಿದ್ದಾರೆ. ರಾಜಭವನದಿಂದ ಎಷ್ಟೇ ಪ್ರಯತ್ನ ಪಟ್ಟರೂ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂದು ಉಪಸಭಾಪತಿ ರಾಜ್ಯಪಾಲರ ಹೆಸರು ಹೇಳದೇ ವಾಗ್ದಾಳಿ ನಡೆಸಿದರು.

ಆದರೆ, ಬಲಿಗುಂಗೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ತೃಣಮೂಲ ನಾಯಕ ಬಾಬುಲ್ ಸುಪ್ರಿಯೋ, ಪ್ರಮಾಣ ವಚನ ಸ್ವೀಕರಿಸಿದ ಬಳಿಕ ರಾಜ್ಯಪಾಲ ಜಗದೀಪ್ ಧಂಖರ್ ಅವರಿಗೆ ಧನ್ಯವಾದ ಅರ್ಪಿಸಿದರು. ನಾನು ಬಹಳ ಹಿಂದೆಯೇ ಶಾಸಕನಾಗಿ ಕೆಲಸ ಮಾಡಲು ಪ್ರಾರಂಭಿಸಿದ್ದೇನೆ. ಆದರೆ, ಅಧಿಕೃತವಾಗಿ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸುವುದು ಮಾತ್ರ ಉಳಿದಿತ್ತು. ಕೆಲವು ತೊಡಕುಗಳ ನಡುವೆಯೂ ಇಂದು ಪ್ರಮಾಣ ವಚನ ಸ್ವೀಕಾರ ಸಮಾರಂಭ ಮುಗಿದಿದೆ ಎಂದರು.

ಬಾಳಿಗಂಗೆ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 12ರಂದು ಉಪಚುನಾವಣೆ ನಡೆದಿತ್ತು. ಏಪ್ರಿಲ್ 16ರಂದು ಫಲಿತಾಂಶ ಪ್ರಕಟವಾಗಿದ್ದು, 25 ದಿನಗಳ ಬಳಿಕ ಶಾಸಕರು ಪ್ರಮಾಣ ವಚನ ಸ್ವೀಕರಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಇದನ್ನು ಓದಿ:ಕುದುರೆ ಏರಿ ಬಂದ ವಧು.. ಕ್ಲೀನ್​ ಬೌಲ್ಡ್​ ಆದ ವರ!.. ವಿಡಿಯೋ!

For All Latest Updates

TAGGED:

ABOUT THE AUTHOR

...view details