ಹೈದರಾಬಾದ್(ತೆಲಂಗಾಣ): ಬಿಜೆಪಿ ಮುಖಂಡ ಮತ್ತು ಉಪ್ಪಲ್ ಮಾಜಿ ಶಾಸಕ ಎನ್‌ವಿಎಸ್‌ಎಸ್ ಪ್ರಭಾಕರ್ ಅವರು ಬುಧವಾರ ಹೈದರಾಬಾದ್‌ನ ತಮ್ಮ ಕೃಷಿ ತೋಟದಲ್ಲಿ ಹುಲ್ಲು ಕತ್ತರಿಸುವ ವೇಳೆ ನವರತ್ನದ ಉಂಗುರ ಕಳೆದುಕೊಂಡಿದ್ದಾರೆ. ಈ ವಿಚಾರ ತಿಳಿದು ಸ್ಥಳಕ್ಕಾಗಮಿಸಿದ ಪೊಲೀಸ್ ತಂಡದ ಸಿಬ್ಬಂದಿ ಕೆಲವೇ ನಿಮಿಷಗಳಲ್ಲಿ ಉಂಗುರ ಪತ್ತೆ ಹಚ್ಚಿದ್ದಾರೆ.
ಉಂಗುರ ಕಳೆದುಕೊಂಡಿರುವ ಬಗ್ಗೆ ರಾಚಕೊಂಡ ಪೊಲೀಸ್ ಕಮಿಷನರೆಟ್‌ಗೆ ಮಾಹಿತಿ ನೀಡಲಾಗಿದ್ದು, ತಕ್ಷಣವೇ ಪೊಲೀಸ್ ತುಕಡಿಯನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಲೋಹದ ಶೋಧಕಗಳೊಂದಿಗೆ ಸಂಪೂರ್ಣ ಶೋಧ ಕಾರ್ಯಾಚರಣೆ ನಡೆಸಿದ ತಂಡ ಕೆಲವೇ ನಿಮಿಷಗಳಲ್ಲಿ ಉಂಗುರವನ್ನು ಪತ್ತೆ ಮಾಡಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ರಾಚಕೊಂಡ ಪೊಲೀಸರ ಸಹಾಯಕ್ಕೆ ಎನ್‌ವಿಎಸ್‌ಎಸ್ ಪ್ರಭಾಕರ್ ಕೃತಜ್ಞತೆ ಸಲ್ಲಿಸಿರುವ ಬಿಜೆಪಿ ಮುಖಂಡ ಎನ್‌ವಿಎಸ್‌ಎಸ್ ಪ್ರಭಾಕರ್, ಜಮೀನು ಕೆಲಸಗಾರ ಬಂದಿರಲಿಲ್ಲ. ಹಾಗಾಗಿ ಹಸುಗಳಿಗೆ ಹುಲ್ಲು ತರಲು ಬಂದಿದ್ದೆ. ಈ ವೇಳೆ ಅಮೂಲ್ಯವಾದ ನವರತ್ನದ ಉಂಗುರ ಕೈಯಿಂದ ಜಾರಿಬಿದ್ದಿತ್ತು. ಇದು ಸ್ವಾಮೀಜಿಯೊಬ್ಬರು ನನಗೆ ಕೊಟ್ಟಿರುವ ಉಂಗುರವಾಗಿದೆ. ಹಾಗಾಗಿ ಇದನ್ನು ಕಳೆದುಕೊಂಡಾಗ ಬೇಸರವಾಗಿತ್ತು. ಉಂಗುರ ಕಳೆದ ಬಗ್ಗೆ ರಾಚಕೊಂಡ ಪೊಲೀಸ್ ಕಮೀಷನರ್ಗೆ ಹುಡುಕಿಕೊಡುವಂತೆ ಮನವಿ ಮಾಡಿದ್ದೆ. ಅದರಂತೆ ಅವರು ತಮ್ಮ ಸಿಬ್ಬಂದಿಯನ್ನು ಕಳುಹಿಸಿದರು. ಅವರು ಸ್ಥಳಕ್ಕೆ ಮೆಟಲ್ ಡಿಟೆಕ್ಟರ್ ಸೇರಿದಂತೆ ಇನ್ನಿತರ ತಾಂತ್ರಿಕ ಸಾಧನಗಳೊಂದಿಗೆ ಜಮೀನಿಗೆ ಆಗಮಿಸಿ, ಕೆಲವೇ ನಿಮಿಷಗಳಲ್ಲಿ ನನ್ನ ಉಂಗುವರನ್ನು ಹುಡುಕಿಕೊಟ್ಟಿದ್ದಾರೆ. ಇದರಿಂದ ನನಗೆ ಖುಷಿಯಾಗಿದೆ ಎಂದು ತಿಳಿಸಿದ್ದಾರೆ.
ಆದ್ರೆ ಈ ಉಂಗುರದ ಬೆಲೆ ಎಷ್ಟು ಎಂಬುದರ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ:ಸುಬ್ರಮಣಿಯನ್ ಸ್ವಾಮಿಗೆ ಸೂಕ್ತ ಭದ್ರತೆ: ದೆಹಲಿ ಹೈಕೋರ್ಟ್‌ಗೆ ಕೇಂದ್ರದ ವಿವರಣೆ