ನವದೆಹಲಿ: ರಾಷ್ಟ್ರೀಯ ವೈಮಾನಿಕ ಮತ್ತು ಬಾಹ್ಯಾಕಾಶ ಆಡಳಿತದ (ನಾಸಾ) ಮುಖ್ಯಸ್ಥರು ಮಾಡಿದ ಆರೋಪಗಳಿಗೆ ಚೀನಾ ಟೀಕಾ ಪ್ರಹಾರ ನಡೆಸಿದೆ. ಮಿಲಿಟರಿ ಬಾಹ್ಯಾಕಾಶ ಕಾರ್ಯಕ್ರಮದ ಭಾಗವಾಗಿ ಚೀನಾ ಚಂದ್ರನನ್ನು ಸ್ವಾಧೀನಪಡಿಸಿಕೊಳ್ಳಬಹುದು ಎಂದು ನಾಸಾ ಮುಖ್ಯಸ್ಥರು ಹೇಳಿದ್ದರು.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್ ಸುದ್ದಿಗಾರರೊಂದಿಗೆ ಮಾತನಾಡಿ, ನಾಸಾ ನಿರ್ವಾಹಕ ಬಿಲ್ ನೆಲ್ಸನ್ ಅವರ ಬೇಜವಾಬ್ದಾರಿ ಟೀಕೆಗಳನ್ನು ಚೀನಾ ದೃಢವಾಗಿ ವಿರೋಧಿಸಿದೆ ಎಂದಿದ್ದಾರೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಮುಖ್ಯಸ್ಥರಾಗಿರುವ ನೆಲ್ಸನ್ ಅವರು ಶನಿವಾರ ಪ್ರಕಟವಾದ ಜರ್ಮನ್ ಪತ್ರಿಕೆ ಬಿಲ್ಡ್‌ಗೆ ನೀಡಿದ ಸಂದರ್ಶನದಲ್ಲಿ ಚೀನಾದ ಬಾಹ್ಯಾಕಾಶ ಮಹತ್ವಾಕಾಂಕ್ಷೆಗಳ ಬಗ್ಗೆ ಚಿಂತಿತರಾಗಿದ್ದೇವೆ ಎಂದು ಹೇಳಿದ್ದರು. ಚೀನಾ ಚಂದ್ರನ ಮೇಲೆ ಇಳಿಯುತ್ತಿದೆ 'ಇದು ಈಗ ನಮ್ಮದು ನೀವು ಹೊರಗಿರಿ' ಎಂದು ಬೀಜಿಂಗ್‌ನ ಚಂದ್ರನ ಪರಿಶೋಧನಾ ಯೋಜನೆಗಳನ್ನು ಉಲ್ಲೇಖಿಸಿ ಹೇಳಿದ್ದರು.
ಕಳೆದ ದಶಕದಲ್ಲಿ ತನ್ನ ಬಾಹ್ಯಾಕಾಶ ಕಾರ್ಯಕ್ರಮದ ವೇಗವನ್ನು ಹೆಚ್ಚಿಸಿರುವ ಚೀನಾ, ಚಂದ್ರನ ಅನ್ವೇಷಣೆಯ ಕಡೆ ಹೆಚ್ಚು ಕೇಂದ್ರೀಕರಿಸಿದೆ. ಇದು 2013 ರಲ್ಲಿ ತನ್ನ ಮೊದಲ ಚಂದ್ರನ ಅನ್ಕ್ರೂಡ್ ಲ್ಯಾಂಡಿಂಗ್ ಅನ್ನು ಮಾಡಿತ್ತು. ಈಗ ಚಂದ್ರನ ದಕ್ಷಿಣ ಧ್ರುವಕ್ಕೆ ಸಿಬ್ಬಂದಿ ರಹಿತ ಕಾರ್ಯಾಚರಣೆಗಳನ್ನು ಯೋಜಿಸುತ್ತಿದೆ.
ಯುಎಸ್ ಕಡೆಯವರು ಚೀನಾದ ಸಾಮಾನ್ಯ ಮತ್ತು ಸಮಂಜಸವಾದ ಬಾಹ್ಯಾಕಾಶ ಪ್ರಯತ್ನಗಳ ವಿರುದ್ಧ ನಿರಂತರವಾಗಿ ಅಭಿಯಾನ ನಡೆಸುತ್ತಿದ್ದಾರೆ. ಚೀನಾ ಅಂತಹ ಬೇಜವಾಬ್ದಾರಿ ಟೀಕೆಗಳನ್ನು ದೃಢವಾಗಿ ವಿರೋಧಿಸುತ್ತದೆ ಎಂದು ಝಾವೋ ಹೇಳಿದ್ದಾರೆ.