ಕರ್ನಾಟಕ

karnataka

ETV Bharat / bharat

ಯಾವುದೇ ಕಾರಣವಿಲ್ಲದೇ ದೀರ್ಘಕಾಲ ಸಂಗಾತಿಯ ಲೈಂಗಿಕ ಕ್ರಿಯೆಗೆ ನಿರಾಕರಣೆ... ಮಾನಸಿಕ ಕ್ರೌರ್ಯಕ್ಕೆ ಸಮ: ಹೈಕೋರ್ಟ್​

ವಿಚ್ಛೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

Etv Bharat
Etv Bharat

By

Published : May 26, 2023, 4:07 PM IST

ಲಖನೌ (ಉತ್ತರ ಪ್ರದೇಶ): ಯಾವುದೇ ಕಾರಣವಿಲ್ಲದೇ ದೀರ್ಘಕಾಲ ಸಂಗಾತಿಯೊಂದಿಗೆ ಲೈಂಗಿಕ ಕ್ರಿಯೆಗೆ ಅವಕಾಶ ನೀಡದಿರುವುದು ಮಾನಸಿಕ ಕ್ರೌರ್ಯಕ್ಕೆ ಸಮ ಎಂದು ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ ಗುರುವಾರ ತನ್ನ ಮಹತ್ವದ ಆದೇಶದಲ್ಲಿ ತಿಳಿಸಿದೆ. ಇದನ್ನೇ ಆಧಾರವಾಗಿ ಪರಿಗಣಿಸಿದ ಉಚ್ಛ ನ್ಯಾಯಾಲಯವು ವಾರಾಣಾಸಿಯ ವ್ಯಕ್ತಿಯೊಬ್ಬರಿಗೆ ವಿಚ್ಛೇದನಕ್ಕೆ ಅನುಮತಿ ನೀಡಿದೆ.

ಪತ್ನಿಯೊಂದಿಗೆ ವಿಚ್ಛೇದನಕ್ಕಾಗಿ ವಾರಾಣಸಿಯ ನಿವಾಸಿ ರವೀಂದ್ರ ಪ್ರತಾಪ್ ಯಾದವ್ ಎಂಬುವರು ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿ ಸುನೀತ್ ಕುಮಾರ್ ಮತ್ತು ನ್ಯಾಯಮೂರ್ತಿ ರಾಜೇಂದ್ರ ಕುಮಾರ್ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ಈ ತೀರ್ಪು ನೀಡಿದೆ. ಈ ಹಿಂದೆ ರವೀಂದ್ರ ಪ್ರತಾಪ್ ಅವರ ವಿಚ್ಛೇದನ ಅರ್ಜಿಯನ್ನು ವಾರಾಣಸಿ ಕೌಟುಂಬಿಕ ನ್ಯಾಯಾಲಯ ತಿರಸ್ಕರಿಸಿತ್ತು. ಇದರಿಂದ ಅವರು ಹೈಕೋರ್ಟ್‌ ಮೊರೆ ಹೋಗಿದ್ದರು.

ಪ್ರಕರಣದ ವಿವರ: ಅರ್ಜಿದಾರ ರವೀಂದ್ರ ಪ್ರತಾಪ್ ಯಾದವ್ ಅವರಿಗೆ 1979ರಲ್ಲಿ ಮಹಿಳೆಯೊಬ್ಬರನ್ನು ವಿವಾಹವಾಗಿದ್ದರು. ಮದುವೆಯಾದ ಸ್ವಲ್ಪ ಸಮಯದ ನಂತರ ತನ್ನ ಹೆಂಡತಿಯ ನಡವಳಿಕೆಯಲ್ಲಿ ನಾಟಕೀಯವಾಗಿ ಉಂಟಾಗಿ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಪ್ರಾರಂಭವಾದವು. ಪತಿ - ಪತ್ನಿ ಒಂದೇ ಸೂರಿನಡಿ ವಾಸಿಸುತ್ತಿದ್ದರೂ ಹೆಂಡತಿಯಾಗಿ ತನ್ನ ಕರ್ತವ್ಯಗಳನ್ನು ಪೂರೈಸಲು ನಿರಾಕರಿಸುತ್ತಿದ್ದಳು ಎಂದು ಯಾದವ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದರು.

ನಮ್ಮ ಪರಸ್ಪರ ಸಂಬಂಧವನ್ನು ಸಮನ್ವಯಗೊಳಿಸಲು ಮತ್ತು ಮರುಸ್ಥಾಪಿಸಲು ಹೆಂಡತಿ ಬಳಿ ಪದೇ ಪದೇ ಬೇಡಿಕೊಂಡೆ. ಆದರೆ, ಎಲ್ಲ ಪ್ರಯತ್ನಗಳನ್ನು ಮಾಡಿದರೂ ಅವುಗಳ ವ್ಯರ್ಥವಾದವು. ಪತ್ನಿ ತನ್ನ ದೈಹಿಕ ಮತ್ತು ಭಾವನಾತ್ಮಕ ಅಂತರವನ್ನು ಕಾಯ್ದುಕೊಳ್ಳಲು ಪಟ್ಟುಹಿಡಿದಿದ್ದಳು. ಇದರಿಂದ ತನ್ನ ವೈವಾಹಿಕ ಜೀವನ ನರಳುತ್ತಲೇ ಇತ್ತು. ಹೆಂಡತಿ ಅಂತಿಮವಾಗಿ ನಮ್ಮ ಮನೆಯನ್ನು ತೊರೆದು ತನ್ನ ತಾಯಿಯ ಮನೆಗೆ ಮರಳಲು ನಿರ್ಧರಿಸಿದ್ದಳು. ಆಗ ವಿಷಯ ಮತ್ತಷ್ಟು ಬಿಗಡಾಯಿಸಿತ್ತು ಎಂದು ವಿವರಿಸಿದ್ದರು.

ಇದನ್ನೂ ಓದಿ:ವಿಚ್ಛೇದನ ಸಂಭ್ರಮಿಸಲು ಬಂಗೀ ಜಂಪ್ ಮಾಡಿದ.. ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿದ!

ಮದುವೆಯಾದ ಸರಿ ಸುಮಾರು ಆರು ತಿಂಗಳಲ್ಲಿ ಆರಂಭವಾದ ಈ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಯತ್ನಿಸಿದರೂ ಇನ್ನಷ್ಟು ಉಲ್ಬಣಗೊಳಿಸಿತ್ತು. ನಮ್ಮ ಮನೆಗೆ ಮರಳಲು ಮತ್ತು ವಿವಾಹಿತ ಮಹಿಳೆಯಾಗಿ ತನ್ನ ಜವಾಬ್ದಾರಿಗಳನ್ನು ಪೂರೈಸಲು ಮನವೊಲಿಸಲು ಸಾಕಷ್ಟು ಪ್ರಯತ್ನಗಳು ಮಾಡಲಾಯಿತು. ನಮ್ಮ ವಿವಾಹ ಮತ್ತು ಪರಸ್ಪರರ ಬದ್ಧತೆಯನ್ನು ಗೌರವಿಸುವಂತೆ ಮನವಿ ಮಾಡಿಕೊಳ್ಳಲಾಯಿತು. ದುರದೃಷ್ಟವಶಾತ್ ಯಾವುದು ಕೂಡ ಪತ್ನಿಗೆ ಕಿವಿಗೆ ಬೀಳಲಿಲ್ಲ. ಮನೆಗೂ ಆಕೆ ಹಿಂತಿರುಗಲು ಹಿಂದೇಟು ಹಾಕುತ್ತಿದ್ದಳು ಎಂದು ತಮ್ಮ ಅರ್ಜಿ ಉಲ್ಲೇಖಿಸಿದ್ದರು.

1994ರವರೆಗೂ ವರ್ಷಗಳ ಕಾಲ ರಾಜಿ ಪ್ರಯತ್ನ ಮಾಡಲಾಗಿತ್ತು. ಕೊನೆಗೆ ಎರಡು ಕುಟುಂಬಗಳು ತಮ್ಮ ಹಳ್ಳಿಯಲ್ಲಿ ನಡೆದ ಪಂಚಾಯತ್ ಸಮಯದಲ್ಲಿ ಪರಸ್ಪರ ದೂರ ಉಳಿದುಕೊಳ್ಳಲು ಒಪ್ಪಿಕೊಂಡವು. ಈ ಒಪ್ಪಂದದ ಭಾಗವಾಗಿ ಪತ್ನಿಗೆ 22,000 ರೂ.ಗಳ ಶಾಶ್ವತ ಜೀವನಾಂಶ ನೀಡಲು ನಾನು ಒಪ್ಪಿಕೊಂಡಿದ್ದೆ. ನಂತರದಲ್ಲಿ ಆಕೆ ಮರು ಮದುವೆಯಾಗಲು ಮುಂದಾಗಿದ್ದಳು. ಹೀಗಾಗಿ ನಮ್ಮ ಮದುವೆ ಸಂಬಂಧವನ್ನು ಕಾನೂನು ಬದ್ಧವಾಗಿ ಕೊನೆಗೊಳಿಸಲು ತೀರ್ಮಾನಿಸಲಾಗಿತ್ತು. ವಿಚ್ಛೇದನ ಪ್ರಕ್ರಿಯೆಗಳನ್ನೂ ಪ್ರಾರಂಭಿಸಲಾಗಿತ್ತು. ಆದರೆ, ನ್ಯಾಯಾಲಯಕ್ಕೆ ಪತ್ನಿ ಹಾಜರು ಆಗಲೇ ಇಲ್ಲ. ಪರಿಣಾಮ ವಾರಾಣಸಿ ಕೌಟುಂಬಿಕ ನ್ಯಾಯಾಲಯವು ತನ್ನ ವಿಚ್ಛೇದನದ ಅರ್ಜಿ ತಿರಸ್ಕರಿಸಿದೆ ಎಂದು ರವೀಂದ್ರ ಪ್ರತಾಪ್ ಯಾದವ್ ಹೈಕೋರ್ಟ್​ಗೆ ಸಲ್ಲಿಸಿದ ಮೇಲ್ಮನವಿಯಲ್ಲಿ ಮಾಹಿತಿ ನೀಡಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ವಿಭಾಗೀಯ ಪೀಠವು, ಯಾವುದೇ ಕಾರಣವಿಲ್ಲದೆ ಸಂಗಾತಿಯೊಂದಿಗೆ ಲೈಂಗಿಕ ಸಂಭೋಗಕ್ಕೆ ದೀರ್ಘಕಾಲದವರೆಗೆ ಅವಕಾಶ ನೀಡದಿರುವುದು ಮಾನಸಿಕ ಕ್ರೌರ್ಯಕ್ಕೆ ಸಮಾನವಾಗಿದೆ. ಏಕೆಂದರೆ ಸಂಗಾತಿಯನ್ನು ಒತ್ತಾಯಿಸಲು ಯಾವುದೇ ಸ್ವೀಕಾರಾರ್ಹ ಅಲ್ಲ ಎಂದು ಹೇಳಿದೆ. ರವೀಂದ್ರ ಪ್ರತಾಪ್ ಯಾದವ್ ಅವರ ವಿಚ್ಛೇದನಕ್ಕೆ ನ್ಯಾಯ ಪೀಠ ಆದೇಶಿಸಿದೆ.

ಇದನ್ನೂ ಓದಿ:ಮ್ಯಾಟ್ರಿಮೋನಿ ನಂಟು, 2 ವರ್ಷದಿಂದ ಸಂಬಂಧ: ಯುವಕನ ವಿರುದ್ಧ ಯುವತಿ ದೂರು

ABOUT THE AUTHOR

...view details