ನವದೆಹಲಿ: ಉತ್ತರ ಭಾರತದಲ್ಲಿ ಮುಂದಿನ ಐದು ದಿನಗಳ ಕಾಲ ದಟ್ಟವಾದ ಮಂಜಿನ ವಾತಾವರಣ ಇದ್ದು, ಚಳಿ ಹೆಚ್ಚರಲಿದೆ ಎಂದು ಐಎಂಡಿ ತಿಳಿಸಿದ್ದು, ರೆಡ್ ಅಲರ್ಟ್ ಘೋಷಣೆ ಮಾಡಿದೆ. ಅಲ್ಲದೇ ಮುಂದಿನ ಮೂರು ದಿನಗಳು ಉತ್ತರ ಭಾರತದ ಮಂದಿ ಭಾರೀ ಚಳಿಗೆ ನಡುಗಲಿದ್ದಾರೆ ಎಂದಿದೆ.
ಉತ್ತರ ಭಾರತದ ಜೆಟ್ ಸ್ಟ್ರೀಮ್ ವಿಂಡ್ ವೇಗ ಸಮುದ್ರ ಮಟ್ಟದಿಂದ 12.6 ಕಿ.ಮೀ ಎತ್ತರದಲ್ಲಿ 130-140 ನಾಟ್ನಲ್ಲಿ ವೇಗವಾಗಿ ಬೀಸಲಿದ್ದು, ಇದು ಚಳಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಇದು ಇನ್ನಷ್ಟು ಶೀತ ಗಾಳಿಯ ತೀವ್ರತೆಗೆ ಕಾರಣವಾಗುತ್ತದೆ. ಈ ಜೆಟ್ ಸ್ಟ್ರೀಮ್ ಗಾಳಿ ಮುಂದಿನ 3-4 ದಿನಗಳ ಕಾಲ ಮಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.
ಈ ಶೀತದ ವಾತಾವರಣ ಹಿನ್ನೆಲೆ ಉತ್ತರ ರಾಜಸ್ಥಾನ, ದಕ್ಷಿಣ ಹರಿಯಾಣದಲ್ಲಿ ಕನಿಷ್ಠ ತಾಪಮಾನ 2 ರಿಂದ 5 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಪಂಜಾಬ್, ಚಂಡೀಗಢ, ದೆಹಲಿ, ಉತ್ತರ ಪ್ರದೇಶ ಮತ್ತು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲ ಭಾಗದಲ್ಲಿ 6 ರಿಂದ 10 ಡಿಗ್ರಿ ಸೆಲ್ಸಿಯಸ್ ಇರಲಿದೆ.
ಹರಿಯಾಣದ ಕೆಲ ಪ್ರದೇಶ, ದಕ್ಷಿಣ ಉತ್ತರ ಪ್ರದೇಶ ಮತ್ತು ಉತ್ತರ ರಾಜಸ್ಥಾನದಲ್ಲಿ 2 - 4 ಡಿಗ್ರಿ ಸೆಲ್ಸಿಯಸ್ಗಿಂತ ಕಡಿಮೆ ತಾಪಮಾನ ಇರಲಿದೆ. ಇಂದು ಪಶ್ಚಿಮ ರಾಜಸ್ಥಾನ್ ಬಿಕಾನೇರ್, ಪೂರ್ವ ಉತ್ತರ ಪ್ರದೇಶ ಕಾನ್ಫುರ್ನಲ್ಲಿ ತಾಪಮಾನ 2.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ಐಎಂಡಿ ತಿಳಿಸಿದೆ.