ನವದೆಹಲಿ:ಹೊಸ ವರ್ಷಾರಂಭದಿಂದಲೂ ಶೀತಗಾಳಿ, ಮೈ ಕೊರೆಯುವ ಚಳಿಯಿಂದಾಗಿ ಉತ್ತರ ಭಾರತ ತತ್ತರಿಸುತ್ತಿದೆ. ಪಂಜಾಬ್, ರಾಜಸ್ಥಾನ, ಜಮ್ಮು, ಹರಿಯಾಣ, ಚಂಡೀಗಢ ಮತ್ತು ದೆಹಲಿ, ಉತ್ತರ ಪ್ರದೇಶ, ಬಿಹಾರ ಮತ್ತು ತ್ರಿಪುರದ ಕೆಲವು ಭಾಗಗಳಲ್ಲಿ ದಟ್ಟವಾದ ಮಂಜು ಆವರಿಸಿದೆ. ಹೀಗಾಗಿ, ರಸ್ತೆ ಸಂಚಾರ, ವಾಯುಯಾನ ಹಾಗು ರೈಲು ಸೇವೆಗಳಿಗೆ ಅಡಚಣೆ ಉಂಟಾಗುತ್ತಿದೆ.
ಗೋಚರತೆ ಲೆಕ್ಕ ಮೀಟರ್ಗಳಲ್ಲಿ..:ಇಂದು ಅತ್ಯಂತ ದಟ್ಟವಾದ ಮಂಜು ಪಂಜಾಬ್‌ನಿಂದ ಹರಿಯಾಣ, ದೆಹಲಿ ಮತ್ತು ಉತ್ತರ ಪ್ರದೇಶದಾದ್ಯಂತ ಬಿಹಾರಕ್ಕೆ ವಿಸ್ತರಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ ಟ್ವೀಟ್ ಮಾಡಿದೆ. ಭಟಿಂಡಾ ಮತ್ತು ಆಗ್ರಾ - ತಲಾ 0. ಜಮ್ಮು ವಿಭಾಗ, ಗಂಗಾನಗರ, ಚಂಡೀಗಢ, ಅಂಬಾಲಾ, ಪಟಿಯಾಲ, ಬರೇಲಿ, ಲಕ್ನೋ, ಸುಲ್ತಾನ್‌ಪುರ, ಗೋರಖ್‌ಪುರ ಮತ್ತು ಭಾಗಲ್‌ಪುರ - ತಲಾ 25. ಹಿಸ್ಸಾರ್, ದೆಹಲಿ-ಪಾಲಮ್, ಬಹರೈಚ್, ಗಯಾ, ಪುರ್ನಿಯಾ ಮತ್ತು ಕೈಲಾಶಹರ್ - 50 ಮೀ. ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಟ್ವೀಟ್ ಮಾಡಿದೆ.