ನವದೆಹಲಿ:ದಂಪತಿ ವಿಚ್ಛೇದನ ಪಡೆಯಬೇಕಾದರೆ ಕನಿಷ್ಠ ಒಂದು ವರ್ಷ ದಾಂಪತ್ಯ ಜೀವನ ನಡೆಸಿರಬೇಕು. ಆದರೆ ಇನ್ನೂ ಕೆಲವು ಪ್ರಕರಣಗಳಲ್ಲಿ ಒಂದು ವರ್ಷ ಪೂರೈಸುವುದು ಅವಶ್ಯಕತೆ ಇರುವುದಿಲ್ಲ. ಕಿರುಕುಳ ಅಥವಾ ಮುಂತಾದ ಗಂಭೀರ ಪ್ರಕರಣಗಳಲ್ಲಿ ಒಂದು ವರ್ಷ ಪೂರೈಸುವ ಅಗತ್ಯತೆ ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ದಂಪತಿ ವಿಚ್ಛೇದನ ಪಡೆಯಲು ಸಲ್ಲಿಸಲಾಗಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ನಿರಾಕರಿಸಿದೆ. ಒಂದು ವರ್ಷದ ದಾಂಪತ್ಯ ಜೀವನ ಕಡ್ಡಾಯ ಎಂದು ಹೈಕೋರ್ಟ್ ಹೇಳಿದೆ.
ಉತ್ತರಾಖಂಡ ದಂಪತಿ ವಿಚ್ಛೇದನಕ್ಕಾಗಿ ಕೌಟುಂಬಿಕ ನ್ಯಾಯಾಲಯವೊಂದರಲ್ಲಿ ಅರ್ಜಿಯನ್ನು ಸಲ್ಲಿಕೆ ಮಾಡಿತ್ತು. ಆದರೆ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನಿರಾಕರಿಸಿದ ಕಾರಣದಿಂದಾಗಿ ಇಬ್ಬರೂ ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರ ಪ್ರಕಾರ ಅವರಿಬ್ಬರೂ ಏಪ್ರಿಲ್ 4, 2021ರಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾಗಿದ್ದು, ಕೆಲವೇ ಕೆಲವು ದಿನಗಳಲ್ಲಿ ಕೆಲವೊಂದು ಸಮಸ್ಯೆಗಳ ಕಾರಣದಿಂದ ಬೇರೆ ಬೇರೆಯಾಗಿದ್ದರು. ಏಪ್ರಿಲ್ 14, 2021ರಿಂದ ಬೇರೆ ಬೇರೆಯಾಗಿ ವಾಸಿಸಲು ಆರಂಭಿಸಿದ್ದರು. ಜುಲೈ 2021ರಂದು ಪತ್ನಿ ತನ್ನ ತವರು ಮನೆಗೆ ತೆರಳಿದ್ದರು.