ನವದೆಹಲಿ:ದೆಹಲಿಯಲ್ಲಿ ಡೆಂಘೀ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕಳೆದ ವಾರ ಒಟ್ಟು 283 ಹೊಸ ಡೆಂಘೀ ಪ್ರಕರಣಗಳು ವರದಿಯಾಗಿವೆ. ದೆಹಲಿಯಲ್ಲಿ ಇಲ್ಲಿವರೆಗೆ 1006 ಡೆಂಘೀ ಪ್ರಕರಣಗಳು ಪತ್ತೆಯಾಗಿವೆ.
ರಾಜಧಾನಿಯಲ್ಲಿ ಇಲ್ಲಿಯವರೆಗೆ ಒಟ್ಟು 1006 ಡೆಂಘೀ ಪ್ರಕರಣಗಳು ವರದಿಯಾಗಿದ್ದು, ಆದರೆ ಇಲ್ಲಿಯವರೆಗೆ 597 ಪ್ರಕರಣಗಳು ಅಂದರೆ ಸುಮಾರು ಶೇ 60ರಷ್ಟು ಪ್ರಕರಣಗಳನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ.
ದೆಹಲಿಯಲ್ಲಿ ಈ ಮಧ್ಯೆ ನಿಧಾನವಾಗಿ ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ಹರಡುತ್ತಿರುವುದು ಪತ್ತೆಯಾಗಿದೆ. ಕಳೆದ ವಾರ ಹೊಸ ಪ್ರಕರಣಗಳು ಬಂದ ನಂತರ, ರಾಜಧಾನಿಯಲ್ಲಿ ಮಲೇರಿಯಾ ಪ್ರಕರಣಗಳ ಸಂಖ್ಯೆ 154 ಮತ್ತು ಚಿಕೂನ್ ಗುನ್ಯಾ 73ಕ್ಕೆ ಏರಿದೆ.
ರಾಜಧಾನಿಯಲ್ಲಿ ಡೆಂಘೀ ಪ್ರಕರಣಗಳು ಹೆಚ್ಚುತ್ತಿರುವುದು ಆರೋಗ್ಯ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ:ಒಂಬತ್ತನೇ ಬಾರಿಗೆ ಟಿಆರ್‌ಎಸ್ ಪಕ್ಷದ ಅಧ್ಯಕ್ಷರಾಗಿ ಸಿಎಂ ಕೆಸಿಆರ್ ಮರು ಆಯ್ಕೆ