ಮುಂಬೈ (ಮಹಾರಾಷ್ಟ್ರ): ಮುಂಬೈನ ಮಧ್ ಮಾಲ್ವಾನಿ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಶೂಟಿಂಗ್ ಸ್ಟುಡಿಯೋ ಸಂಕೀರ್ಣದ ತೆರವು ಕಾರ್ಯಾಚರಣೆಯನ್ನು ಮುಂಬೈ ಮಹಾನಗರ ಪಾಲಿಕೆ ಆರಂಭಿಸಿದೆ. ಕಾನೂನು ಮತ್ತು ನಿಯಮ ಬಾಹಿರವಾಗಿ ಸ್ಟುಡಿಯೋ ನಿರ್ಮಿಸಲಾಗಿದೆ ಎಂದು ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಆರೋಪಿಸಿ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ದೂರು ನೀಡಿದ್ದರು. ಇದರ ಆಧಾರದ ಮೇಲೆ ನ್ಯಾಯಾಧೀಕರಣವು ತೆರವಿಗೆ ಆದೇಶ ಹೊರಡಿಸಿತ್ತು.
ಇದನ್ನೂ ಓದಿ:ಇದು ಶಾರುಖ್ ಖಾನ್ TIME! ವಿಶ್ವದ ಅತ್ಯಂತ ಪ್ರಭಾವಶಾಲಿ ವ್ಯಕ್ತಿಯಾಗಿ ಕಿಂಗ್ ಖಾನ್
ಸ್ಟುಡಿಯೋ ಬಗ್ಗೆ ಆರೋಪಗಳೇನು?: ಹಿಂದಿನ ಮಹಾವಿಕಾಸ್ ಅಘಾಡಿ ಸರ್ಕಾರದಲ್ಲಿ ಪರಿಸರ ಸಚಿವರಾಗಿದ್ದ ಆದಿತ್ಯ ಠಾಕ್ರೆ ಮತ್ತು ಅಸ್ಲಾಂ ಶೇಖ್ ಅವರ ಬೆಂಬಲದಿಂದಾಗಿ ಮಾಲ್ವಾನಿ ಪ್ರದೇಶದಲ್ಲಿ ಅನಧಿಕೃತವಾಗಿ ಬಾಲಾಜಿ ಶೂಟಿಂಗ್ ಸ್ಟುಡಿಯೋ ಸಂಕೀರ್ಣ ನಿರ್ಮಾನಿಸಲಾಗಿದೆ ಎಂದು ಕಿರಿಟ್ ಸೋಮಯ್ಯ ಆರೋಪಿಸಿದ್ದಾರೆ. ಇದರ ವಿರುದ್ಧ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಮತ್ತು ಮುಂಬೈ ಮಹಾನಗರ ಪಾಲಿಕೆಗೆ ಪದೇ ಪದೇ ದೂರು ನೀಡಿದ್ದರು. ಅಲ್ಲದೇ, ನ್ಯಾಯಾಲಯದ ಮೆಟ್ಟಿಲೇರಿದ್ದರು.