ಕರ್ನಾಟಕ

karnataka

ETV Bharat / bharat

ಈ ಬಾರಿ ದುರ್ಗಾ ದೇವಿ ಪೂಜೆಗೆ ಮಹಿಷಾಸುರ ಆಗಲಿದ್ದಾನೆ ಡೆಲ್ಟಾಸುರ : ಸುಮ್ಮನೇ ಬಿಡುವಳೇ ದುರ್ಗಾ ಮಾತೆ.. - ದಿ ಡೆಲ್ಟಾ ರಾಕ್ಷಸ

ದುಷ್ಟ ಶಕ್ತಿಗಳು ಜಗತ್ತಿನಲ್ಲಿ ಹಾನಿ ಉಂಟುಮಾಡಿದಾಗಲೆಲ್ಲಾ , ದುರ್ಗಾ ದೇವಿಯು ದುಷ್ಟ ಶಕ್ತಿಗಳನ್ನು ನಾಶ ಮಾಡಲು ಮತ್ತು ಜಗತ್ತನ್ನು ರಕ್ಷಿಸಲು ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾಳೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿ ಜನಪ್ರಿಯವಾಗಿದೆ..

Delta Demon God
ಡೆಲ್ಟಾಸುರ ಪ್ರತಿಮೆ

By

Published : Aug 21, 2021, 10:36 PM IST

ಕೋಲ್ಕತಾ :ಡೆಲ್ಟಾ ರೂಪಾಂತರಿ ಕೋವಿಡ್-19 ವಿಶ್ವದಾದ್ಯಂತ ತನ್ನ ಉಗ್ರ ಸ್ವರೂಪ ತೋರಿದೆ. ಈ ಹಿನ್ನೆಲೆ ರೂಪಾಂತರಿ ವೈರಸ್​ ದಮನಕ್ಕೆ ಬಂಗಾಳದಲ್ಲಿ ನಡೆವ ದುರ್ಗಾ ಪೂಜೆಯಲ್ಲಿ ಮಹಿಷಾಸುರನನ್ನು ಈ ಬಾರಿ ಡೆಲ್ಟಾಸುರ (ದಿ ಡೆಲ್ಟಾ ರಾಕ್ಷಸ) ಎಂದು ಚಿತ್ರಿಸಲಾಗುತ್ತಿದೆ. ಇದರ ಉದ್ದೇಶ ರೂಪಾಂತರಿ ವೈರಸ್​​ ಅನ್ನು ತಡೆಗಟ್ಟಲು ಮಾಸ್ಕ್​​ ಮತ್ತು ಹ್ಯಾಂಡ್ ಸ್ಯಾನಿಟೈಜರ್‌ಗಳ ಬಳಕೆ ಉತ್ತೇಜಿಸುವುದಾಗಿದೆ.

ಡೆಲ್ಟಾಸುರ

ಕಸ್ಬಾದಲ್ಲಿರುವ ರವೀಂದ್ರ ಸ್ಮಾರಕ ಸ್ಪೋರ್ಟಿಂಗ್ ಕ್ಲಬ್, ಚಿಂಗ್ರಿಪೋಟ ಸಮುದಾಯ ಮತ್ತು ಶಿಬ್ತಲ ಸಾಧರೋನ್ ಸಂಘ, ಇವು ಈ ವರ್ಷ ಈ ವಿಷಯವನ್ನು ಮುಂದಿಟ್ಟುಕೊಂಡು ಡೆಲ್ಟಾಸುರನನ್ನು ಚಿತ್ರಿಸಲಿರುವ ಮೂರು ಸಮುದಾಯದ ದುರ್ಗಾ ಪೂಜಾ ಸಮಿತಿಗಳು.

ದುಷ್ಟ ಶಕ್ತಿಗಳು ಜಗತ್ತಿನಲ್ಲಿ ಹಾನಿ ಉಂಟುಮಾಡಿದಾಗಲೆಲ್ಲಾ , ದುರ್ಗಾ ದೇವಿಯು ದುಷ್ಟ ಶಕ್ತಿಗಳನ್ನು ನಾಶ ಮಾಡಲು ಮತ್ತು ಜಗತ್ತನ್ನು ರಕ್ಷಿಸಲು ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತಾಳೆ ಎಂಬ ನಂಬಿಕೆ ಹಿಂದೂ ಧರ್ಮದಲ್ಲಿ ಜನಪ್ರಿಯವಾಗಿದೆ.

ಆದ್ದರಿಂದ ಡೆಲ್ಟಾಸುರ ಪರಿಕಲ್ಪನೆಯ ರೂವಾರಿ ಇಂದ್ರಜಿತ್ ಪಾಲ್, ದುರ್ಗಾದೇವಿಯು ಕೋವಿಡ್​​ ಅನ್ನು ನಾಶಪಡಿಸುತ್ತಾಳೆ ಮತ್ತು ಅದರ ಅತ್ಯಂತ ಅಪಾಯಕಾರಿ ಡೆಲ್ಟಾ ರೂಪಾಂತರವನ್ನು ನಾಶಪಡಿಸುತ್ತಾಳೆ ಎಂದು ನಂಬಿದ್ದಾರೆ. ಆದಾಗ್ಯೂ, ಕೋವಿಡ್​​-19 ಪ್ರೋಟೋಕಾಲ್‌ಗಳನ್ನು ಪಾಲಿಸುವ ಮೂಲಕ ಸಾಮಾನ್ಯ ಜನರು ತಮ್ಮ ನೆರವು ನೀಡಬೇಕು ಎಂಬ ಸಂದೇಶವನ್ನು ಅವರು ಸಾರಿದ್ರು.

ಈ ಡೆಲ್ಟಾ ಡೆಮನ್ ಗಾಡ್ ಪರಿಕಲ್ಪನೆಯನ್ನು ಕಲ್ಪಿಸಿದ ಇಂದ್ರಜಿತ್ ಪಾಲ್ ಪ್ರಕಾರ, ಈ ವಿಷಯದ ಮೂಲಕ ತಾನು ನೀಡಲು ಪ್ರಯತ್ನಿಸುತ್ತಿರುವ ಸೂಕ್ಷ್ಮ ಸಂದೇಶವೆಂದರೆ ''ಡೆಲ್ಟಾ ಎಂಬ ದುಷ್ಟನನ್ನು ನಾಶ ಮಾಡಲು ದುರ್ಗಾದೇವಿಯ ಆಗಮನ ಖಚಿತವಾಗಿದೆ'' ಎಂದು ಅವರು ಈಟಿವಿ ಭಾರತ್‌ಗೆ ತಿಳಿಸಿದರು.

ಅವರ ಪ್ರಕಾರ, ದುರ್ಗಾ ದೇವಿಯು ತನ್ನ ಮಕ್ಕಳನ್ನು ಡೆಲ್ಟಾ ರೂಪಾಂತರದಿಂದ ರಕ್ಷಿಸಲು ಇದ್ದರೂ ಸಹ, ಮಕ್ಕಳ ಕರ್ತವ್ಯವು ಕೋವಿಡ್-19 ಪ್ರೋಟೋಕಾಲ್ ಮತ್ತು ಮುನ್ನೆಚ್ಚರಿಕೆಗಳನ್ನು ನಿರ್ವಹಿಸುವ ಮೂಲಕ ತಮ್ಮ ಕರ್ತವ್ಯವನ್ನು ನಿಭಾಯಿಸಬೇಕು. "ನಾವು ಆ ಪ್ರೋಟೋಕಾಲ್‌ಗಳು ಮತ್ತು ಮುನ್ನೆಚ್ಚರಿಕೆಗಳನ್ನು ನಿರ್ವಹಿಸದಿದ್ದರೆ, ಕೊರೊನಾ ವೈರಸ್‌ನ ಮೂರನೇ ಅಲೆಯು ಹಾನಿಕಾರಕವಾಗಿದೆ. ಹಾಗಾಗಿ, ನಾನು ಈ ಹೊಸ ಥೀಮ್ ಅನ್ನು ರಚಿಸಲು ನಿರ್ಧರಿಸಿದೆ ಅಂತಾರೆ ಪಾಲ್​.

"ನಾವು ಕೋವಿಡ್-19ರ ಮೊದಲ ಮತ್ತು ಎರಡನೆಯ ಅಲೆಗಳನ್ನು ನೋಡಿದ್ದೇವೆ. ಡೆಲ್ಟಾ ರೂಪಾಂತರದ ಪರಿಣಾಮವು ಇನ್ನಷ್ಟು ಹಾನಿಕಾರಕವಾಗಬಹುದು. ಆದರೆ, ಅದು ಎಷ್ಟು ಅಪಾಯಕಾರಿಯಾಗಿದ್ದರೂ, ಅಂತಿಮವಾಗಿ ದುರ್ಗಾ ದೇವಿಯ ಆಶೀರ್ವಾದ ಮತ್ತು ಸಾರ್ವಜನಿಕರ ಜಾಗೃತಿ ಜಂಟಿ ಶಕ್ತಿಯಿಂದ ಸೋಲಿಸಲ್ಪಡುತ್ತದೆ" ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ರು.

ABOUT THE AUTHOR

...view details