ನವದೆಹಲಿ:ದೆಹಲಿಯಲ್ಲಿ ಕಠಿಣ ಲಾಕ್ಡೌನ್ ಜಾರಿಗೊಳಿಸಿದಾಗಿನಿಂದಲೂ ಸೋಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಡಿಮೆಯಾಗಿದ್ದು, ಇದೀಗ ಶೇ. 11ಕ್ಕೆ ಬಂದು ನಿಂತಿದೆ.
ಇದೇ ವಿಚಾರವಾಗಿ ಮಾಹಿತಿ ನೀಡಿರುವ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಳೆದ 24 ಗಂಟೆಯಲ್ಲಿ 6,500 ಕೋವಿಡ್ ಪ್ರಕರಣ ದಾಖಲಾಗಿವೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.
ಇದರ ಬೆನ್ನಲ್ಲೇ ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಸಹಾಯವಾಗುವ ಸಲುವಾಗಿ ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಯಾಂಕ್(ಆಮ್ಲಜನಕ ಸಾಂದ್ರಕ) ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ಟ್ವಿಟರ್ನಲ್ಲಿ ವಿಡಿಯೋ ಶೇರ್ ಮಾಡಿರುವ ಕೇಜ್ರಿವಾಲ್, ದೆಹಲಿಯ ಪ್ರತಿ ಜಿಲ್ಲೆಯಲ್ಲಿ ಆಕ್ಸಿಜನ್ ಕಾನ್ಸಂಟ್ರೇಟರ್ ಬ್ಯಾಂಕ್ ಸ್ಥಾಪಿಸಲು ನಿರ್ಧರಿಸಲಾಗಿದ್ದು, ಬ್ಯಾಂಕ್ಗಳಿಗೆ ಕರೆ ಮಾಡಿದರೆ ಕೆಲ ಗಂಟೆಗಳಲ್ಲಿ ಅವರ ಮನೆಗೆ ಆಕ್ಸಿಜನ್ ತಲುಪಿಸಲಾಗುವುದು ಎಂದಿದ್ದಾರೆ. ಇದಕ್ಕೆ ಓಲಾ ಫೌಂಡೇಷನ್, ಗಿವ್ ಇಂಡಿಯಾ ಸಾಥ್ ನೀಡುತ್ತಿವೆ ಎಂದು ಸಿಎಂ ಮಾಹಿತಿ ಶೇರ್ ಮಾಡಿದ್ದಾರೆ. 11 ಜಿಲ್ಲೆಗಳಲ್ಲಿ 200 ಆಕ್ಸಿಜನ್ ಸಾಂದ್ರಕ ಬ್ಯಾಂಕ್ ತೆರಯಲಾಗುತ್ತಿದೆ ಎಂದಿದ್ದಾರೆ.
ಕೋವಿಡ್ ಸೋಂಕಿನಿಂದ ದೆಹಲಿ ಜನರು ಬೆಡ್ ಸಿಗದೇ ತೊಂದರೆ ಅನುಭವಿಸಿದ್ದರು. ಆದರೆ, ಇದೀಗ ಕಳೆದ 15 ದಿನಗಳಲ್ಲಿ 1000 ಐಸಿಯು ಬೆಡ್ ಸಿದ್ಧಪಡಿಸಲಾಗಿದ್ದು, ಇದಕ್ಕಾಗಿ ವೈದ್ಯರು, ಇಂಜಿನಿಯರ್ಗಳಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದಾರೆ.