ನವದೆಹಲಿ :ಪಶ್ಚಿಮ ಹಿಮಾಲಯದಿಂದ ಶೀತ ಮತ್ತು ಶುಷ್ಕ ಗಾಳಿ ಬೀಸುತ್ತಿರುವುದರಿಂದ ದೆಹಲಿಯ ಕನಿಷ್ಟ ತಾಪಮಾನವು 6.8 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.
ಪಾಶ್ಚಿಮಾತ್ಯ ಅವಾಂತರದ ಪ್ರಭಾವದಿಂದ ನಗರದಲ್ಲಿ ಗುರುವಾರ 2.1 ಮಿ.ಮೀ ಮಳೆಯಾಗಿದೆ. ಇದು ಗುಡ್ಡಗಾಡು ಪ್ರದೇಶದಲ್ಲಿ ವ್ಯಾಪಕ ಹಿಮಪಾತಕ್ಕೆ ಕಾರಣವಾಯಿತು. ಇದರಿಂದ ಪರ್ವತಗಳಿಂದ ಶೀತ, ಶುಷ್ಕ ಗಾಳಿ ಬಯಲು ಪ್ರದೇಶಗಳ ಕಡೆಗೆ ಬೀಸಲು ಪ್ರಾರಂಭಿಸಿದೆ. ಇದರ ಪರಿಣಾಮವಾಗಿ ತಾಪಮಾನದಲ್ಲಿ ಕುಸಿತ ಕಂಡಿದೆ ಎಂದು ಐಎಂಡಿ ಅಧಿಕಾರಿ ತಿಳಿಸಿದ್ದಾರೆ.