ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ಸಮಯದಲ್ಲಿ ದೆಹಲಿಯ ಮೊದಲ ಮಹಿಳಾ ಆಂಬ್ಯುಲೆನ್ಸ್ ಚಾಲಕಿ ಟ್ವಿಂಕಲ್ ಕಾಲಿಯಾ ನಾಗರಿಕರಿಗೆ ಉಚಿತವಾಗಿ ಸೇವೆ ನೀಡುತ್ತಿದ್ದಾರೆ.
ಕ್ಯಾನ್ಸರ್ನೊಂದಿಗೆ ಆಕೆ ಹೋರಾಡುತ್ತಿದ್ದು, ಅದರ ನಡುವೆಯೂ ಕೋವಿಡ್ ರೋಗಿಗಳಿಗೆ ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡುವಲ್ಲಿ ಆಕೆ ತನ್ನ ಪಾತ್ರ ನಿರ್ವಹಿಸುತ್ತಿದ್ದಾಳೆ.
ಆಂಬ್ಯುಲೆನ್ಸ್ ಚಾಲಕಿಯಿಂದ ಉಚಿತ ಸೇವೆ ದೆಹಲಿಯ ಪ್ರತಾಪ್ ನಗರ ಪ್ರದೇಶದ ನಿವಾಸಿಗಳಾದ ಟ್ವಿಂಕಲ್ ತನ್ನ ಪತಿಯೊಂದಿಗೆ ರಾಷ್ಟ್ರ ರಾಜಧಾನಿಯ ವಿವಿಧ ಪ್ರದೇಶಗಳಲ್ಲಿ 12 ಆಂಬ್ಯುಲೆನ್ಸ್ ಸೇವೆಗಳನ್ನು ನಡೆಸುತ್ತಿದ್ದಾರೆ.
ಅವರು ವಿಮಾ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ನಿಸ್ವಾರ್ಥ ಸೇವೆಗಾಗಿ 2017ರಲ್ಲಿ ರಾಷ್ಟ್ರಪತಿಗಳಿಂದ ನಾರಿ ಶಕ್ತಿ ಪುರಸ್ಕಾರವನ್ನು ಕೂಡಾ ಪಡೆದಿದ್ದಾರೆ.