ಕರ್ನಾಟಕ

karnataka

ETV Bharat / bharat

"ಅತ್ಯಂತ ಕಳಪೆ" ವರ್ಗ ತಲುಪಿದ ದೆಹಲಿಯ ವಾಯು ಗುಣಮಟ್ಟ - Delhi Air Quality news

ದೆಹಲಿ-ಎನ್‌ಸಿಆರ್‌ನಲ್ಲಿನ ಗಾಳಿಯ ಗುಣಮಟ್ಟವು ನವೆಂಬರ್ 2 ಮತ್ತು 3ರಂದು ''ಕಳಪೆ''ಯಿಂದ ''ಅತ್ಯಂತ ಕಳಪೆ'' ವರ್ಗಗಳ ಕೆಳಮಟ್ಟದಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ..

ದೆಹಲಿಯ ವಾಯು ಗುಣಮಟ್ಟ
ದೆಹಲಿಯ ವಾಯು ಗುಣಮಟ್ಟ

By

Published : Nov 3, 2021, 11:35 AM IST

ನವದೆಹಲಿ :ದೆಹಲಿಯ ಒಟ್ಟಾರೆ ಗಾಳಿಯ ಗುಣಮಟ್ಟವು ದೀಪಾವಳಿಯ ಮೊದಲು 'ಅತ್ಯಂತ ಕಳಪೆ' ವರ್ಗಕ್ಕೆ ಇಳಿಯುತ್ತದೆ.

ದೆಹಲಿಯ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕವು (ಎಕ್ಯೂಐ) ಬುಧವಾರ "ಅತ್ಯಂತ ಕಳಪೆ" ವರ್ಗವನ್ನು ತಲುಪಿದೆ ಎಂದು ಕೇಂದ್ರ-ಚಾಲಿತ ಏರ್ ಕ್ವಾಲಿಟಿ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ (SAFAR) ಹೇಳಿದೆ.

PM 2.5 ಮತ್ತು PM 10ರ ಸಾಂದ್ರತೆಗಳು ಕ್ರಮವಾಗಿ "ಕಳಪೆ" 252 ಮತ್ತು "ಅತ್ಯಂತ ಕಳಪೆ" ವಿಭಾಗದಲ್ಲಿ 131 ರಷ್ಟಿದೆ. ದೆಹಲಿ-ಎನ್‌ಸಿಆರ್‌ನಲ್ಲಿನ ಗಾಳಿಯ ಗುಣಮಟ್ಟವು ನವೆಂಬರ್ 2 ಮತ್ತು 3ರಂದು ''ಕಳಪೆ''ಯಿಂದ ''ಅತ್ಯಂತ ಕಳಪೆ'' ವರ್ಗಗಳ ಕೆಳಮಟ್ಟದಲ್ಲಿ ಉಳಿಯುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಹೇಳಿದೆ.

ನವೆಂಬರ್ 4, 2021ರಂದು ಗಾಳಿಯ ಗುಣಮಟ್ಟವು ''ಅತ್ಯಂತ ಕಳಪೆ'' ವರ್ಗದ ಕೆಳಮಟ್ಟದಲ್ಲಿರುವ ಸಾಧ್ಯತೆಯಿದೆ ಎಂದು IMD ಹೇಳಿದೆ. ನವೆಂಬರ್ 5 ಮತ್ತು 6ರಂದು ಗಾಳಿಯ ಗುಣಮಟ್ಟವು ಹದಗೆಡುವ ಸಾಧ್ಯತೆಯಿದೆ. ಆದರೆ, IMD ಪ್ರಕಾರ "ಬಹಳ ಕಳಪೆ" ವಿಭಾಗದಲ್ಲಿ ಉಳಿಯುತ್ತದೆ. IMD ಪ್ರಕಾರ PM2.5 ಪ್ರಧಾನ ಮಾಲಿನ್ಯಕಾರಕವಾಗಿದೆ.

ABOUT THE AUTHOR

...view details