ನವದೆಹಲಿ: ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಒಳಗಿನ ಗೇಟ್ ಬಳಿ ಮಹಿಳೆಯೊಬ್ಬರು ಮೂರ್ಚೆ ಹೋಗಿ ನೆಲದ ಮೇಲೆ ಕುಸಿದ ವಿಡಿಯೋ ವೈರಲ್ ಆಗಿದೆ. ಮಹಿಳೆ ತಡವಾಗಿ ಬಂದಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಿಬ್ಬಂದಿ ವಿಮಾನ ನಿಲ್ದಾಣದೊಳಗೆ ಬಿಡಲು ನಿರಾಕರಿಸಲಾಗಿದೆ ಎಂದು ಹೇಳಲಾಗುತ್ತಿದೆ. ಈ ಸಂಬಂಧದ ವಿಡಿಯೋ ಸಹ ವೈರಲ್ ಆಗಿದೆ. ಏರ್ ಇಂಡಿಯಾ ಸಿಬ್ಬಂದಿ ಮಹಿಳೆಯನ್ನು ವಿಮಾನ ಹತ್ತುವ ಮನವಿಯನ್ನು ನಿರಾಕರಿಸಿದ್ದಾರೆ ಎಂಬ ಆರೋಪ ಸಹ ಕೇಳಿ ಬಂದಿದೆ. ಆದರೆ, ಈ ಆರೋಪವನ್ನು ಏರ್ ಇಂಡಿಯಾ ತಳ್ಳಿ ಹಾಕಿದ್ದು, ಇದಕ್ಕೆ ಸ್ಪಷ್ಟನೆ ನೀಡಿದೆ.
ಏನಿದು ಘಟನೆ:ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಏರ್‌ಪೋರ್ಟ್ ಏರ್‌ಪೋರ್ಟ್‌ನ ಟರ್ಮಿನಲ್ 3ರಲ್ಲಿ ಈ ಘಟನೆ ವರದಿಯಾಗಿದೆ. ಪ್ರಯಾಣಿಕರು ಮೇ 5 ರಂದು ಏರ್ ಇಂಡಿಯಾ ವಿಮಾನ 823ರಲ್ಲಿ ಪ್ರಯಾಣ ಬೆಳೆಸಬೇಕಿತ್ತು. ಬೆಳಗ್ಗೆ 4.45ಕ್ಕೆ ವಿಮಾನ ದೆಹಲಿಯಿಂದ ತೆರಳಬೇಕಾಗಿತ್ತು. ಈ ಸಂದರ್ಭದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ತನ್ನ ಚಿಕ್ಕಮ್ಮ ಮತ್ತು ಸೋದರ ಸಂಬಂಧಿಯೊಂದಿಗೆ ಏರ್ ಇಂಡಿಯಾ ವಿಮಾನವನ್ನು ಏರಲು ಹೊರಟಿದ್ದ ಪ್ರಯಾಣಿಕರೊಬ್ಬರು ಈ ವಿಡಿಯೋವನ್ನು ತಮ್ಮ Instagram ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೊ ಸಹಿತ ಪೋಸ್ಟ್‌ನಲ್ಲಿ, ಅವರು ವಿಮಾನ ನಿಲ್ದಾಣದಲ್ಲಿ ಮೂರು ಜನರಿದ್ದರು ಮತ್ತು ಭದ್ರತಾ ಚೆಕ್-ಇನ್ ಪಾಯಿಂಟ್‌ನಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ ಎಂದು ಅವರು ತಮ್ಮ ಇನ್ಸ್ಟಾಗ್ರಾಂ ಬರಹದಲ್ಲಿ ಉಲ್ಲೇಖಿಸಿದ್ದಾರೆ. ನಾವು ನಮ್ಮೊಂದಿಗೆ ಹೃದಯ ಮತ್ತು ಮಧುಮೇಹ ರೋಗಿಗಳನ್ನು ಹೊಂದಿದ್ದರಿಂದ ಐದು ನಿಮಿಷ ತಡವಾಗಿ ಬರುತ್ತೇವೆ ಮತ್ತು ಅವರಿಗೆ ಓಡಲು ಸಾಧ್ಯವಿಲ್ಲ. ನನ್ನ ಸೋದರ ಸಂಬಂಧಿ ಎರಡು ನಿಮಿಷಗಳಲ್ಲಿ ಬೋರ್ಡಿಂಗ್ ಗೇಟ್ ತಲುಪಲಿದ್ದಾರೆ. ನಾನು ನನ್ನ ಚಿಕ್ಕಮ್ಮನೊಂದಿಗೆ ಅವರನ್ನು ಹಿಂಬಾಲಿಸಿದ್ದೇನೆ ಎಂದು ಗೇಟ್ ಸಿಬ್ಬಂದಿಗೆ ಫೋನ್ ಮಾಡಿ ತಿಳಿಸಿದ್ದೆವು ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ಮೊದಲೇ ತಿಳಿಸಿದರೂ ಗೇಟ್ ಮುಚ್ಚಿದರು ಎಂದು ಆರೋಪ:ಗೇಟ್ನಲ್ಲಿದ್ದ ಸಿಬ್ಬಂದಿಗೆ ಹೀಗೆ ತಿಳಿಸಿದ ಮೇಲೆಯೂ ನಮ್ಮಂತಹ ಇತರ ಪ್ರಯಾಣಿಕರಿಗೂ ಗೇಟ್‌ಗಳನ್ನು ಮುಚ್ಚಿದರು. ನನ್ನ ಸೋದರ ಸಂಬಂಧಿ ಅದೇ ದಿನದಲ್ಲಿ ಅವರ ಅಂತಿಮ ವರ್ಷದ VIVA ಕೂಡಾ ಹೊಂದಿದ್ದರು, ಸಿಬ್ಬಂದಿ ಗೇಟ್‌ನಲ್ಲಿ ಬಿಡದ ಕಾರಣ ವಿಮಾನದಲ್ಲಿ ಪ್ರಯಾಣ ಬೆಳೆಸಲು ಸಾಧ್ಯವಾಗಲಿಲ್ಲ. ಈ ಎಲ್ಲ ಘಟನೆಗಳಿಂದ ನನ್ನ ಚಿಕ್ಕಮ್ಮ ಆತಂಕಕ್ಕೊಳಗಾದರು, ಇದರಿಂದ ಉದ್ವೇಗಕ್ಕೆ ಒಳಗಾದ ಅವರು ಸ್ಥಳದಲ್ಲೇ ಮೂರ್ಛೆ ಹೋದರು. ನಾವು ವೈದ್ಯಕೀಯ ತುರ್ತುಸ್ಥಿತಿಯನ್ನು ಕೇಳಿದರೆ, ಗೇಟ್ ಸಿಬ್ಬಂದಿ, ಭದ್ರತಾ ಸಿಬ್ಬಂದಿಯನ್ನು ಕರೆದು ನಿರ್ಗಮನ ಗೇಟ್‌ನಲ್ಲಿ ಬಿಡಲು ಹೇಳಿದರು ಎಂದು ವಿಫುಲ್ ಬಿವಾನಿ ಎಂಬುವವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ಆರೋಪಿಸಿದ್ದಾರೆ.