ಕರ್ನಾಟಕ

karnataka

ETV Bharat / bharat

ಈ ಮಹಾನಗರದಲ್ಲಿ ಅನ್ಲಾಕ್​ಗೆ ಗ್ರೀನ್​ ಸಿಗ್ನಲ್ - ಮಾಲ್​ಗಳು, ಮಾರುಕಟ್ಟೆಗಳು ಓಪನ್​

ದೆಹಲಿ ಸರ್ಕಾರ ಸೋಮವಾರದಿಂದ ಮಾರುಕಟ್ಟೆಗಳು ಮತ್ತು ಮಾಲ್‌ಗಳ ಕಾರ್ಯಾಚರಣೆಗೆ ಅನುಮತಿ ನೀಡಿದೆ. ಶೇ 50 ರಷ್ಟು ಸಾಮರ್ಥ್ಯದಲ್ಲಿ ರೆಸ್ಟೋರೆಂಟ್‌ಗಳು ತೆರೆಯಬಹುದು ಎಂದು ಹೇಳಿದೆ. ಈ ಸಡಿಲಿಕೆಯನ್ನು ಒಂದು ವಾರದವರೆಗೂ ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ದೆಹಲಿ ಅನ್ಲಾಕ್
ದೆಹಲಿ ಅನ್ಲಾಕ್

By

Published : Jun 17, 2021, 8:54 PM IST

Updated : Jun 17, 2021, 9:13 PM IST

ನವದೆಹಲಿ: ಕೊರೊನಾ ಪ್ರಕರಣಗಳು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಲಾಕ್​ಡೌನ್​ ಭಾಗಶಃ ಸಡಿಲಿಕೆಗೆ ಮುಂದಾಗಿದೆ. ಸೋಮವಾರದಿಂದ ಶೇ 50 ರಷ್ಟು ಸಾಮರ್ಥ್ಯದಲ್ಲಿ ರೆಸ್ಟೋರೆಂಟ್‌ಗಳನ್ನು ತೆರೆಯಲು ಅನುಮತಿಸಿರುವುದಾಗಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

ಲಾಕ್​ಡೌನ್​ ಸಡಿಲಿಕೆ ಹೀಗಿದೆ..

  • ಬೆಳಗ್ಗೆ 10 ರಿಂದ ರಾತ್ರಿ 8 ರವರೆಗೆ ಮಾರುಕಟ್ಟೆಗಳು ಮತ್ತು ಮಾಲ್‌ಗಳನ್ನು ನಿರ್ವಹಿಸಲು ಅನುಮತಿ.
  • ಜೋನ್​ನಲ್ಲಿ ಮಾರುಕಟ್ಟೆಯನ್ನು ತೆರೆಯಬಹುದು. ಅದು ಕೂಡ ವಾರಾಂತ್ಯದಲ್ಲಿ ಮಾತ್ರ.
  • ದೆಹಲಿ ಮೆಟ್ರೋ ಮತ್ತು ಬಸ್ಸುಗಳು ಶೇಕಡಾ 50 ರಷ್ಟು ಸಾಮರ್ಥ್ಯದಲ್ಲಿ ಸಂಚಾರ ನಡೆಸಲಿವೆ.
  • ಆಟೋಗಳು, ಇ-ರಿಕ್ಷಾ ಮತ್ತು ಟ್ಯಾಕ್ಸಿಗಳಲ್ಲಿ ಕೇವಲ ಇಬ್ಬರಿಗೆ ಮಾತ್ರ ಅನುಮತಿ.
  • ಸ್ಪಾಗಳು, ಜಿಮ್‌ಗಳು, ಯೋಗ ಕೇಂದ್ರಗಳು, ಉದ್ಯಾನಗಳು ತೆರೆಯುವಂತಿಲ್ಲ.
  • ಪ್ರಾರ್ಥನಾ ಮಂದಿರಗಳನ್ನು ತೆರೆದರೂ ಭಕ್ತರಿಗೆ ಅವಕಾಶವಿಲ್ಲ.
  • ಮನೆಯಲ್ಲಿ 20 ಜನರೊಂದಿಗೆ ವಿವಾಹಗಳನ್ನು ನಡೆಸಬಹುದು ಆದರೆ, ಹೋಟೆಲ್‌ಗಳು ಮತ್ತು ಸಭಾಂಗಣಗಳಲ್ಲಿ ವಿವಾಹಗಳಿಗೆ ಅನುಮತಿಸಿಲ್ಲ.
  • ಅಂತ್ಯಕ್ರಿಯೆಯಲ್ಲಿ ಕೇವಲ 20 ಜನರಿಗೆ ಮಾತ್ರ ಅವಕಾಶ.

ಶೇ 100 ರಷ್ಟು ಗ್ರೂಪ್-ಎ ಸಿಬ್ಬಂದಿಯನ್ನು ಸರ್ಕಾರಿ ಕಚೇರಿಗಳಲ್ಲಿ ಮತ್ತು ಶೇ 50 ರಷ್ಟು ಸಿಬ್ಬಂದಿಯನ್ನು ಖಾಸಗಿ ಕಚೇರಿಗಳಲ್ಲಿ ಅನುಮತಿಸಲಾಗಿದೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಒಂದು ವಾರದ ಬಳಿಕ ಇದರ ಪರಿಣಾಮ ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಕೊರೊನಾ ಪ್ರಕರಣಗಳು ಮತ್ತಷ್ಟು ಹೆಚ್ಚಾದರೆ ನಿರ್ಬಂಧಗಳನ್ನು ಕಠಿಣಗೊಳಿಸಲಾಗುವುದು ಎಂದು ಹೇಳಿದ್ದಾರೆ.

Last Updated : Jun 17, 2021, 9:13 PM IST

ABOUT THE AUTHOR

...view details