ಕರ್ನಾಟಕ

karnataka

ETV Bharat / bharat

ಮಧ್ಯರಾತ್ರಿ ಠಾಣೆಯಲ್ಲೇ ಎಣ್ಣೆ ಪಾರ್ಟಿ: ಎಸ್​ಐ ಮೇಲೆ ಹೆಡ್ ಕಾನ್‌ಸ್ಟೇಬಲ್ ಹಲ್ಲೆ - ಮದ್ಯಪಾನ

ದೆಹಲಿಯ ಅಮರ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಮಧ್ಯರಾತ್ರಿ ಮದ್ಯಪಾನ ಮಾಡುತ್ತಿದ್ದಾಗ ಎಸ್​ಐ ಮತ್ತು ಹೆಡ್ ಕಾನ್‌ಸ್ಟೇಬಲ್​ಗಳ ನಡುವೆ ಗಲಾಟೆ ನಡೆದಿದೆ.

delhi-two-head-constables-si-clash-while-boozing-in-police-station
ಠಾಣೆಯಲ್ಲೇ ಮದ್ಯಪಾನ ಮಾಡುತ್ತಿದ್ದ ಪೊಲೀಸರ ನಡುವೆ ಗಲಾಟೆ... ಎಸ್​ಐ ಮೇಲೆ ಹೆಡ್ ಕಾನ್‌ಸ್ಟೇಬಲ್ ಹಲ್ಲೆ

By

Published : Dec 13, 2022, 3:37 PM IST

ನವ ದೆಹಲಿ: ಕುಡಿದ ನಶೆಯಲ್ಲಿ ಪೊಲೀಸರ ನಡುವೆ ಗಲಾಟೆ ನಡೆದು, ಸಬ್​ ಇನ್​ಸ್ಪೆಕ್ಟರ್ ಮೇಲೆ ಹೆಡ್ ಕಾನ್‌ಸ್ಟೇಬಲ್​ ಹಲ್ಲೆ ಮಾಡಿದ್ದಾರೆ. ಈ ಘಟನೆ ದೆಹಲಿಯ ಅಮರ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಸೋಮವಾರ ಮಧ್ಯರಾತ್ರಿ ಎಸ್‌ಐ ವಿವೇಕ್ ಮತ್ತು ಹೆಡ್ ಕಾನ್‌ಸ್ಟೇಬಲ್​ಗಳಾದ ರವೀಂದ್ರ ಗಿರಿ ಮತ್ತು ಸುನೀಲ್ ಎಂಬುವವರ ನಡುವೆ ಹೊಡೆದಾಟ ಜರುಗಿದೆ. ಘಟನೆಯ ನಂತರ ರವೀಂದ್ರ ಗಿರಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.

ಹೆಡ್ ಕಾನ್ಸ್‌ಟೇಬಲ್ ರವೀಂದ್ರ ಗಿರಿ ಮತ್ತು ಎಸ್‌ಐ ವಿವೇಕ್ ಇಬ್ಬರೂ ಅಮರ್ ಕಾಲೋನಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಸುನೀಲ್ ಅವರು ಜಾಮಿಯಾ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ರಾತ್ರಿ ಮೂವರು ಸೇರಿಕೊಂಡು ಮದ್ಯಪಾನ ಮಾಡುತ್ತಿದ್ದಾಗ ಅವರ ನಡುವೆ ಯಾವುದೋ ವಿಷಯಕ್ಕೆ ಜಗಳ ಶುರುವಾಗಿದೆ. ಈ ಸಂದರ್ಭದಲ್ಲಿ ಎಸ್‌ಐ ವಿವೇಕ್ ಮೇಲೆ ಓರ್ವ ಹೆಡ್ ಕಾನ್ಸ್‌ಟೇಬಲ್ ಹಲ್ಲೆ ನಡೆಸಿದ್ದಾರೆ.

ಗಲಾಟೆಯ ವಿಷಯ ತಿಳಿದು ಇನ್ಸ್​ಪೆಕ್ಟರ್ ಜಗಜೀವನ್ ರಾಮ್​ ಕೂಡ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಹೆಡ್ ಕಾನ್ಸ್‌ಟೇಬಲ್ ರವೀಂದ್ರ ಕುಡಿದ ನಶೆಯಲ್ಲಿದ್ದರು. ಈತನ ಬಿಳಿ ಅಂಗಿಯ ಮೇಲೆ ರಕ್ತದ ಕಲೆಗಳಿದ್ದವು. ಘಟನೆಯ ಕುರಿತಾಗಿ ವಿಚಾರಿಸಲು ಮುಂದಾದಾಗ ಇನ್ಸ್​ಪೆಕ್ಟರ್ ಮೇಲೂ ರವೀಂದ್ರ ಹಲ್ಲೆಗೆ ಮುಂದಾಗಿದ್ದಾರೆ. ಸ್ಥಳದಲ್ಲಿದ್ದ ಇತರ ಸಿಬ್ಬಂದಿ ರವೀಂದ್ರನನ್ನು ಹಿಡಿದುಕೊಂಡಿದ್ದಾರೆ. ನಂತರ ಗಿರಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಸೂಚಿಸಿದಾಗ ಆತ ಠಾಣೆಯಿಂದಲೇ ಪರಾರಿಯಾದ ಎಂದು ಹೇಳಲಾಗಿದೆ.

ಈ ಕುರಿತು ಪೊಲೀಸ್​ ಇಲಾಖೆಯಲ್ಲಿ ಆಂತರಿಕ ತನಿಖೆ ಆರಂಭಿಸಲಾಗಿದೆ. ಹಿರಿಯ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ:ವೈದ್ಯಕೀಯ ಕಾಲೇಜಿನಲ್ಲಿ ರ‍್ಯಾಗಿಂಗ್​.. ಲೇಡಿ ಪೊಲೀಸ್​ ರಹಸ್ಯ ಕಾರ್ಯಾಚರಣೆಗೆ ಬೆಪ್ಪಾದ ಮೆಡಿಕಲ್​ ವಿದ್ಯಾರ್ಥಿಗಳು

ABOUT THE AUTHOR

...view details