ನವದೆಹಲಿ:ಸಂಸತ್ತಿನ ಮಾನ್ಸೂನ್ ಅಧಿವೇಶನ ನಡೆಯುತ್ತಿದ್ದು, ಕೇಂದ್ರ ಹಾಗೂ ಇತರ ಪಕ್ಷಗಳ ಗಮನ ಸೆಳೆಯಲು ಇಂದು ರೈತರು ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. 2020ರಲ್ಲಿ ಕೇಂದ್ರ ಸರ್ಕಾರ ಅಂಗೀಕರಿಸಿರುವ ಮೂರು ಕೃಷಿ ಕಾನೂನಗಳ ವಿರುದ್ಧ ಅನ್ನದಾತರು ಪ್ರತಿಭಟನೆ ನಡೆಸಲಿದ್ದು, ದೆಹಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
ರೈತರು ಪ್ರತಿಭಟನೆ ಶಾಂತಿಯುತವಾಗಿ ನಡೆಸಲು ಅವಕಾಶ ನೀಡಲಾಗಿದೆ. ಸಂಸತ್ತಿನ ಕಡೆಗೆ ಮೆರವಣಿಗೆ ಮಾಡದಂತೆ ಕಟ್ಟುನಿಟ್ಟಾಗಿ ಸೂಚಿಸಲಾಗಿದ್ದು, ಅನ್ನದಾತರ ಪ್ರತಿಭಟನೆಗೆ ಅನುಮತಿ ನೀಡಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ. ಇಂದು ಬೆಳಗ್ಗೆ 11: 30ರ ವೇಳೆಗೆ ರೈತರು ಪ್ರತಿಭಟನಾ ಸ್ಥಳವನ್ನು ತಲುಪುವ ನಿರೀಕ್ಷೆಯಿರುವುದರಿಂದ ಖಾಕಿ ಪಡೆ ಈಗಾಗಲೇ ಬ್ಯಾರಿಕೇಡ್ ನಿರ್ಮಿಸಿ ಭದ್ರತೆ ಕೈಗೊಂಡಿದೆ.