ಕರ್ನಾಟಕ

karnataka

ETV Bharat / bharat

10ನೇ ತರಗತಿಯ ಮೂವರು ಬಾಲಕಿಯರ ಮೇಲೆ ಅತ್ಯಾಚಾರ: ಮದುವೆ ನೆಪದಲ್ಲಿ ಮಾರಾಟ ಯತ್ನ - ಈಟಿವಿ ಭಾರತ ಕರ್ನಾಟಕ

ಮುಂಬೈಗೆ ತೆರಳುವ ಉದ್ದೇಶದಿಂದ ದೆಹಲಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಮೂವರು ವಿದ್ಯಾರ್ಥಿನಿಯರನ್ನು ಮನೆಗೆ ಕರೆದುಕೊಂಡು ಹೋಗಿ ಆರೋಪಿ ಅತ್ಯಾಚಾರವೆಸಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

Three girl raped in Rohini
Three girl raped in Rohini

By

Published : Aug 12, 2022, 8:15 PM IST

ನವದೆಹಲಿ: 10ನೇ ತರಗತಿಯಲ್ಲಿ ವ್ಯಾಸಂಗ ಮಾಡ್ತಿದ್ದ ಮೂವರು ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರವೆಸಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಮದುವೆ ಮಾಡಿಕೊಳ್ಳುವ ನೆಪದಲ್ಲಿ ಅವರನ್ನು ಮಾರಾಟ ಮಾಡಲು ಯತ್ನಿಸಲಾಗಿದೆ. ದೆಹಲಿಯಲ್ಲಿ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಆರೋಪಿಗಳ ಬಂಧನ ಮಾಡಲಾಗಿದೆ.

ನವದೆಹಲಿ ರೈಲು ನಿಲ್ದಾಣದಿಂದ ಬೇಗಂಪುರಕ್ಕೆ ವಿದ್ಯಾರ್ಥಿನಿಯರನ್ನು ಕರೆದೊಯ್ಯಲಾಗಿದ್ದು ಮದ್ಯ ಕುಡಿಸಿ, ಮತ್ತು ಬರುವ ಮಾತ್ರೆ ನೀಡಿ ದುಷ್ಕೃತ್ಯವೆಸಗಲಾಗಿದೆ. ಇದಾದ ಬಳಿಕ ಮಾರಾಟ ಮಾಡುವ ಉದ್ದೇಶದಿಂದ ರಾಜಸ್ಥಾನಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಮೂವರು ತಪ್ಪಿಸಿಕೊಂಡು ಬಂದಿದ್ದಾರೆ. ಪೊಲೀಸ್ ಅಧಿಕಾರಿಗಳ ಮಾಹಿತಿ ಪ್ರಕಾರ, ವಿದ್ಯಾರ್ಥಿನಿಯರು ಗೋವಿಂದಪುರಿ, ಗ್ರೇಟರ್ ಕೈಲಾಶ್​ ಮತ್ತು ಚಿರಾಗ್ ದೆಹಲಿಯ ನಿವಾಸಿಗಳು ಎಂದು ತಿಳಿದು ಬಂದಿದೆ. ಡಿಫೆನ್ಸ್ ಕಾಲೋನಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಮೂವರು ಮುಂಬೈಗೆ ಹೋಗುವ ಉದ್ದೇಶದಿಂದ ಆಗಸ್ಟ್​ 6ರಂದು ದೆಹಲಿ ರೈಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಇಲ್ಲಿ ಪ್ರಕಾಶ್ ಎಂಬಾತನ ಪರಿಚಯವಾಗಿದೆ. ಮುಂಬೈಗೆ ತೆರಳುವ ರೈಲಿನ ಬಗ್ಗೆ ವಿಚಾರಿಸಿದ್ದಾರೆ. ಆಗ ಮುಂಬೈಗೆ ಹೋಗಲು ಇಂದು ಯಾವುದೇ ರೈಲು ಇಲ್ಲ ಎಂದಿದ್ದಾನೆ. ಆತನ ಮಾತು ನಂಬಿರುವ ವಿದ್ಯಾರ್ಥಿನಿಯರು ಹೊಟೇಲ್​​ನಲ್ಲಿ ಉಳಿದುಕೊಳ್ಳುವುದರ ಬಗ್ಗೆ ಮಾತನಾಡಿಕೊಳ್ಳಲು ಶುರು ಮಾಡಿದ್ದಾರೆ. ತಮ್ಮ ಮನೆಯಲ್ಲೇ ಉಳಿದುಕೊಳ್ಳುವಂತೆ ವಿದ್ಯಾರ್ಥಿನಿಯರ ಮನವೊಲಿಸಿ, ಬೇಗಂಪುರಕ್ಕೆ ಕರೆದೊಯ್ದಿದ್ದಾನೆ.

ಇದನ್ನೂ ಓದಿ:ಹುಡುಗಿಗೋಸ್ಕರ ಪ್ರಾಣ ಸ್ನೇಹಿತನ ಕೊಲೆ: 12ನೇ ತರಗತಿ ವಿದ್ಯಾರ್ಥಿಗಳಿಂದ ನಡೀತು ಕೃತ್ಯ

ತಮ್ಮ ನಿವಾಸದಲ್ಲಿ ವಿದ್ಯಾರ್ಥಿನಿಯರಿಗೆ ಬಲವಂತವಾಗಿ ಮದ್ಯ ಕುಡಿಸಲಾಗಿದ್ದು, ಇದಾದ ಬಳಿಕ ಮತ್ತು ಬರುವ ಮಾತ್ರೆ ನೀಡಿ ಅವರ ಮೇಲೆ ಅತ್ಯಾಚಾರವೆಸಗಲಾಗಿದೆ. ಆಗಸ್ಟ್​ 8ರಂದು ಮದುವೆ ನೆಪದಲ್ಲಿ ರಾಜಸ್ಥಾನಕ್ಕೆ ಕರೆದುಕೊಂಡು ಹೋಗಲು ಮುಂದಾಗಿದ್ದಾನೆ. ಈ ವೇಳೆ ಅವರು ತಪ್ಪಿಸಿಕೊಂಡು ಕರೋಲ್​ ಬಾಗ್ ತಲುಪಿ, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನೂ ಮಕ್ಕಳು ಮನೆಗೆ ಬಂದಿಲ್ಲ ಎಂಬ ಕಾರಣಕ್ಕಾಗಿ ಪೋಷಕರು ಡಿಫೆನ್ಸ್ ಕಾಲೋನಿಯಲ್ಲಿ ದೂರು ನೀಡಿದ್ದರು. ಪೊಲೀಸರು ಅವರಿಗೋಸ್ಕರ ಹುಡುಕಾಟ ಆರಂಭಿಸಿ, ವಿವಿಧ ಠಾಣೆಗಳಿಗೆ ಮಾಹಿತಿ ರವಾನಿಸಿದ್ದಾರೆ. ಕರೋಲ್ ಬಾಗ್ ಪೊಲೀಸರಿಗೆ ಮಾಹಿತಿ ಗೊತ್ತಾಗಿದೆ. ಈ ವೇಳೆ ಆರೋಪಿಗಳಿಗೋಸ್ಕರ ಬಲೆ ಬೀಸಿ, ಅವರನ್ನು ಬಂಧನ ಮಾಡಿದ್ದಾರೆ.

ABOUT THE AUTHOR

...view details