ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಹಿನ್ನೆಲೆಯಲ್ಲಿ ಜೂನ್ 7 ರಿಂದ ಅನ್‌ಲಾಕ್ ಮಾಡಲಾಗಿದೆ. ನಿರ್ಬಂಧ ಸಡಿಲಿಕೆ ಜೊತೆಗೆ ಮದ್ಯಪ್ರಿಯರಿಗೆ ಸಿಎಂ ಕೇಜ್ರಿವಾಲ್ ಸರ್ಕಾರ ಸಿಹಿ ಸುದ್ದಿ ನೀಡಿದ್ದು, ಇನ್ಮುಂದೆ ಮನೆ ಬಾಗಿಲಿಗೆ ಮದ್ಯ ಪೂರೈಸುವ ಯೋಜನೆ ಜಾರಿಗೆ ತಂದಿದೆ.
ಅಬಕಾರಿ ಕಾನೂನಿನ 18 ರಿಂದ 21 ನಿಮಯಗಳಲ್ಲಿ ತಿದ್ದುಪಡಿ ಮಾಡಿ ಆನ್‌ಲೈನ್ ಮೂಲಕ ಮೊಬೈಲ್ ಆ್ಯಪ್ ಮತ್ತು ವೆಬ್‌ಸೈಟ್‌ನಲ್ಲಿ ಆರ್ಡರ್ ಮಾಡಿದರೆ ಮದ್ಯವನ್ನು ಮನೆ ಬಾಗಿಲಿಗೆ ತಲುಪಿಸಲು ಅವಕಾಶ ನೀಡಿದೆ. ಇದಕ್ಕಾಗಿ L-13 ಪರವಾನಗಿಯನ್ನು ನೀಡಿ ಸರ್ಕಾರ ಆದೇಶ ಹೊರಡಿಸಿದೆ.
ಹಾಸ್ಟೆಲ್, ಕಚೇರಿ ಇತರೆ ಸಂಸ್ಥೆಗಳಿಗೆ ಬರಲ್ಲ ಎಣ್ಣೆ..!
ಮನೆ ಬಾಗಿಲಿಗೆ ಮದ್ಯ ಪೂರೈಸುವ ಹೊಸ ಯೋಜನೆ ಜಾರಿಗೆ ತಂದಿರುವ ಸರ್ಕಾರ ಕಚೇರಿ, ಹಾಸ್ಟೆಲ್ ಹಾಗೂ ಸಂಸ್ಥೆಗಳಿಗೆ ಡೆಲಿವರಿ ಮಾಡಲು ಅನುಮತಿ ನೀಡಿಲ್ಲ. ಅಬಕಾರಿ ಹೊಸ ನಿಯಮದಲ್ಲಿ ಮದ್ಯಸೇವಿಸುವವರ ವಯಸ್ಸನ್ನು ಪರಿಷ್ಕರಣೆ ಮಾಡಲಾಗಿದ್ದು, ಇದೀಗ 21 ವರ್ಷ ಮೇಲ್ಪಟ್ಟವರಿಗೂ ಮದ್ಯ ಸೇವನೆಗೆ ಅನುಮತಿ ನೀಡಲಾಗಿದೆ. ಈ ಮೊದಲು 25 ವರ್ಷಕ್ಕೆ ಸಿಮೀತಗೊಳಿಸಲಾಗಿತ್ತು.
ಇದನ್ನೂ ಓದಿ: ರಾವಣನ ರಾಜ್ಯದಲ್ಲಿ ಪೆಟ್ರೋಲ್‌ಗೆ 59 ರೂ., ರಾಮನ ರಾಜ್ಯದಲ್ಲಿ 100, ನಾಚಿಕೆ ಆಗಲ್ವಾ?: ಸಿದ್ದರಾಮಯ್ಯ
ಕಳೆದ ಮಾರ್ಚ್‌ನಲ್ಲಿ ನಡೆದಿದ್ದ ಸಚಿವ ಸಂಪುಟದಲ್ಲಿ ಹೊಸ ಯೋಜನೆಗೆ ಅನುಮತಿ ನೀಡಲಾಗಿತ್ತು. ಜೊತೆಗೆ 21 ವರ್ಷದೊಳಗಿನವರಿಗೆ ರೆಸ್ಟೋರೆಂಟ್‌ಗಳಲ್ಲಿ ಮದ್ಯ ಸೇವನೆಗೆ ಅವಕಾಶ ನೀಡಬಾರದೆಂಬ ನಿರ್ಧಾರಕ್ಕೆ ಬರಲಾಗಿತ್ತು.