ಕರ್ನಾಟಕ

karnataka

ETV Bharat / bharat

ಫಲಿಸಿದ ಲಾಕ್​ಡೌನ್ ಅಸ್ತ್ರ.. ಸೋಂಕಿತರ ಪ್ರಮಾಣ ಗಣನೀಯ ಇಳಿಕೆ..! - ದೆಹಲಿಯಲ್ಲಿ ಲಾಕ್​ಡೌನ್

(Delhi)ದೆಹಲಿಯಲ್ಲಿ ಕಳೆದ 24 ಗಂಟೆಗಳಲ್ಲಿ ಸುಮಾರು 900 ಪ್ರಕರಣಗಳು ವರದಿಯಾಗಿವೆ. ದೈನಂದಿನ ಸಕಾರಾತ್ಮಕತೆ ಪ್ರಮಾಣವು ಶೇಕಡಾ 2 ಕ್ಕಿಂತ ಕಡಿಮೆಯಿದೆ. ಸದ್ಯ ರಾಜ್ಯದಲ್ಲಿ 15 ಸಾವಿರಕ್ಕಿಂತ ಕಡಿಮೆ ಆ್ಯಕ್ಟಿವ್ ಕೇಸ್​ಗಳಿವೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.

cases since March
cases since March

By

Published : May 29, 2021, 3:27 PM IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಲಾಕ್​ಡೌನ್​​ ಅಸ್ತ್ರ ಪ್ರತಿಫಲಿಸಿದ್ದು, ಕಳೆದ ಎರಡು ತಿಂಗಳ ಬಳಿಕ ಅತಿ ಕಡಿಮೆ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಕಳೆದ 24 ಗಂಟೆಗಳಲ್ಲಿ 900 ಜನರಿಗೆ ಸೋಂಕು ತಗುಲಿದೆ.

ಈ ಕುರಿತು ಮಾತನಾಡಿರುವ ಸಿಎಂ ಅರವಿಂದ್ ಕೇಜ್ರಿವಾಲ್, ಕಳೆದ 24 ಗಂಟೆಗಳಲ್ಲಿ ಸುಮಾರು 900 ಪ್ರಕರಣಗಳು ವರದಿಯಾಗಿವೆ. ದೈನಂದಿನ ಸಕಾರಾತ್ಮಕತೆ ಪ್ರಮಾಣವು ಶೇಕಡಾ 2 ಕ್ಕಿಂತ ಕಡಿಮೆಯಿದೆ. ಸದ್ಯ ರಾಜ್ಯದಲ್ಲಿ 15 ಸಾವಿರಕ್ಕಿಂತ ಕಡಿಮೆ ಆ್ಯಕ್ಟಿವ್ ಕೇಸ್​ಗಳಿವೆ. ಹೋಂ ಐಸೋಲೇಷನ್​ನಲ್ಲಿ 7 ಸಾವಿರಕ್ಕಿಂತ ಕಡಿಮೆ ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಇದನ್ನೂ ಓದಿ:ಚಿಕ್ಕ ರಾಜ್ಯವೆಂದು ಗೋವಾಗೆ ತಮಿಳುನಾಡು ಸಚಿವ ಅಪಮಾನ: ಬಹಿರಂಗ ಕ್ಷಮೆಯಾಚನೆಗೆ ಪಟ್ಟು

ಕೊರೊನಾ 2 ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಏಪ್ರಿಲ್ 19 ರಿಂದ ದೆಹಲಿಯಲ್ಲಿ ಲಾಕ್​ಡೌನ್ ಜಾರಿಗೊಳಿಸಲಾಗಿತ್ತು. ಬಳಿಕ ಸೋಂಕು ಪ್ರಕರಣಗಳು ಕಡಿಮೆಯಾಗಿದ್ದವು. ನಿನ್ನೆಯಷ್ಟೇ ಸರ್ಕಾರ ಶೀಘ್ರದಲ್ಲೇ ಅನ್ಲಾಕ್​ ಮಾಡುವುದಾಗಿ ಘೋಷಿಸಿತ್ತು.

ABOUT THE AUTHOR

...view details