ದೆಹಲಿ:ರಾಷ್ಟ್ರ ರಾಜಧಾನಿಯಲ್ಲೂ ಕೋವಿಡ್ ರಣ ಕೇಕೆ ಮುಂದುವರಿದಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 24,331 ಮಂದಿಯಲ್ಲಿ 2ನೇ ಅಲೆಯ ಸೋಂಕು ಪತ್ತೆಯಾಗಿದೆ. 348 ಸೋಂಕಿತರು ಒಂದೇ ದಿನ ಬಲಿಯಾಗಿದ್ದಾರೆ. ಆ ಮೂಲಕ ಒಟ್ಟು ಮೃತರ ಸಂಖ್ಯೆ 13,541ಕ್ಕೆ ಏರಿಕೆಯಾಗಿದೆ. 23,572 ಜನ ವೈರಸ್‌ನಿಂದ ಗುಣಮುರಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದವರು ಡಿಸ್ಚಾರ್ಜ್ ಆಗಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಅಟ್ಟಹಾಸ; ಒಂದೇ ದಿನ 348 ಮಂದಿ ಸೋಂಕಿಗೆ ಬಲಿ - ಭಾರತ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕೋವಿಡ್ ಅಟ್ಟಹಾಸ ಮುಂದುವರಿದೆ. ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 24,331 ಮಂದಿಗೆ ಕೊರೊನಾ ದೃಢಪಟ್ಟಿದ್ದು, ಒಂದೇ ದಿನ 348 ಮಂದಿ ಬಲಿಯಾಗಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಅಟ್ಟಹಾಸ; ಒಂದೇ ದಿನ 348 ಮಂದಿ ಸೋಂಕಿಗೆ ಬಲಿ
ದೆಹಲಿಯಲ್ಲಿ ಇದೀಗ ಒಟ್ಟು ಸೋಂಕಿತರ ಸಂಖ್ಯೆ 9,80,679ಕ್ಕೆ ಏರಿಕೆಯಾಗಿದ್ದು, ಸಕ್ರೀಯ ಪ್ರಕರಣಗಳ ಸಂಖ್ಯೆ 92,029ಕ್ಕೆ ಬಂದು ನಿಂತಿದ್ದು, ಒಟ್ಟಾರೆ ಗುಣಮುಖರಾದವರ ಸಂಖ್ಯೆ 8,75,109ಕ್ಕೆ ತಲುಪಿದೆ.
ಇನ್ನು, ರಾಜಧಾನಿಯಲ್ಲಿ ಆಕ್ಸಿಜನ್ ಕೊರೆತೆಯಿದ್ದು, ಅಗತ್ಯ ಪ್ರಮಾಣದಲ್ಲಿ ಆಕ್ಸಿಜನ್ ಪೂರೈಸುವಂತೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ಕೋರಿದ್ದಾರೆ.