ನವದೆಹಲಿ:ಇಂದು ಬೆಳಗ್ಗೆ ದೆಹಲಿ ವಾಯು ಗುಣಮಟ್ಟ (Delhi Air Quality) ಸ್ವಲ್ಪ ಸುಧಾರಿಸಿದ್ದು, 'ತೀವ್ರ ಅಪಾಯಕಾರಿ' (severe) ಹಂತದಿಂದ 'ಅತ್ಯಂತ ಕಳಪೆ' (very poor) ಹಂತದಲ್ಲಿದೆ.
ಭಾರತದ ಗಾಳಿಯ ಗುಣಮಟ್ಟ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯ ವ್ಯವಸ್ಥೆ (SAFAR-India) ಪ್ರಕಾರ ರಾಷ್ಟ್ರ ರಾಜಧಾನಿಯ ವಾಯು ಗುಣಮಟ್ಟ ಸೂಚ್ಯಂಕವು (AQI - Air quality index) 386ರಷ್ಟಿದೆ. ಶನಿವಾರ ದೆಹಲಿಯಲ್ಲಿ 437 AQI ದಾಖಲಾಗಿತ್ತು.
ದೆಹಲಿಯಲ್ಲಿ ವಾಯುಮಾಲಿನ್ಯದ ಪ್ರಮಾಣ ಮಿತಿ ಮೀರಿದ ಪರಿಣಾಮ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ (Chief Minister Arvind Kejriwal) ಅವರು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಸೋಮವಾರದಿಂದ ಒಂದು ವಾರ ಶಾಲೆಗಳು ಬಂದ್ ಮಾಡುವಂತೆ ಹಾಗೂ ಸರ್ಕಾರಿ ಸಿಬ್ಬಂದಿ ಮನೆಯಿಂದಲೇ ಕೆಲಸ (Work from Home) ಮಾಡುವಂತೆ ಸೂಚನೆ ನೀಡಿದ್ದಾರೆ. ನವೆಂಬರ್ 14ರಿಂದ 17ರವರೆಗೆ ಕಟ್ಟಡ ನಿರ್ಮಾಣ ಕಾರ್ಯ ಸಂಪೂರ್ಣ ಬಂದ್ ಆಗಲಿದೆ. ಹೀಗಾಗಿ ನಾಳೆಯಿಂದ ದೆಹಲಿಯನ್ನಾವರಿಸಿದ್ದ ವಿಷಕಾರಿ ಹೊಗೆ ಕಡಿಮೆಯಾಗುವ ನಿರೀಕ್ಷೆಯಿದೆ.