ನವದೆಹಲಿ :ಪುಣೆ ಬಾಂಬ್ ಸ್ಫೋಟದ ಪ್ರಮುಖ ಆರೋಪಿ, ಶಂಕಿತ ಐಸಿಸ್ ಉಗ್ರ ಶಹನವಾಹ್ ಆಲಿಯಾಸ್ ಶಫಿ ಉಜ್ಜಾಮನನ್ನು ದೆಹಲಿ ವಿಶೇಷ ಪೊಲೀಸ್ ಪಡೆ ಸೋಮವಾರ ಬಂಧಿಸಿದೆ. ಗಮನಾರ್ಹ ಸಂಗತಿ ಎಂದರೆ, ಶಂಕಿತ ಉಗ್ರ ತನ್ನ ಪತ್ನಿ ಬಸಂತಿ ಪಟೇಲ್ ಅವರನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದ. ಈತ ಗಣಿ ಎಂಜಿನಿಯರ್ ಆಗಿದ್ದ ಎಂಬ ಮಾಹಿತಿ ಬಯಲಾಗಿದೆ.
ಮಾಧ್ಯಮಗಳಿಗೆ ಈ ಬಗ್ಗೆ ಮಾಹಿತಿ ನೀಡಿದ ದೆಹಲಿ ವಿಶೇಷ ಪೊಲೀಸ್ ಆಯುಕ್ತ ಎಚ್.ಎಸ್.ಧಲಿವಾಲ್, ಶಂಕಿತ ಐಸಿಸ್ ಭಯೋತ್ಪಾದಕ ಶಹನವಾಜ್ ತನ್ನ ಪತ್ನಿ ಬಸಂತಿಯನ್ನು ಮರಿಯಮ್ ಆಗಿ ಇಸ್ಲಾಂಗೆ ಮತಾಂತರಿಸಿದ್ದಾನೆ. ಈತನೊಂದಿಗೆ ಇನ್ನಿಬ್ಬರು ಮೋಸ್ಟ್ ವಾಂಟೆಡ್ ಉಗ್ರರನ್ನೂ ಬಂಧಿಸಲಾಗಿದೆ ಎಂದು ತಿಳಿಸಿದರು.
ಶಹನವಾಜ್ನನ್ನು ಇಂದು ದಕ್ಷಿಣ ದೆಹಲಿಯ ಜೈತ್‌ಪುರದಿಂದ ಬಂಧಿಸಲಾಯಿತು. ಈತನ ತಲೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) 3 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಸಹಚರರಾದ ಮೊಹಮ್ಮದ್ ರಿಜ್ವಾನ್ ಅಶ್ರಫ್ನನ್ನು ಲಖನೌನಲ್ಲಿ, ಮೊಹಮ್ಮದ್ ಅರ್ಷದ್ ವಾರ್ಸಿಯನ್ನು ಮೊರಾದಾಬಾದ್‌ನಲ್ಲಿ ಬಂಧಿಸಲಾಯಿತು ಎಂದು ಮಾಹಿತಿ ನೀಡಿದರು.
ಬಂಧಿತ ಉಗ್ರನ ಅಡಗುತಾಣಗಳಿಂದ ಪಿಸ್ತೂಲ್, ಕಾರ್ಟ್ರಿಡ್ಜ್‌ಗಳು, ಪ್ಲಾಸ್ಟಿಕ್ ಟ್ಯೂಬ್‌ಗಳು, ಕಬ್ಬಿಣದ ಪೈಪ್‌ಗಳು ಸೇರಿದಂತೆ ಪಾಕಿಸ್ತಾನ ಮೂಲದ ಉಗ್ರರಿಂದ ಕಳುಹಿಸಲಾದ ಬಾಂಬ್ ತಯಾರಿಕೆ ಸಲಕರಣೆಗಳನ್ನು ವಶಪಡಿಸಿಕೊಳ್ಳಲಾಗಿದೆ. ’’ಕರ್ನಾಟಕ, ಗುಜರಾತ್ ಸೇರಿದಂತೆ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಸೂಕ್ತ ಅಡಗುತಾಣಗಳಿಗಾಗಿ ಹುಡುಕಾಟ ನಡೆಸಿದ್ದರು‘‘ ಎಂದು ತನಿಖಾಧಿಕಾರಿಗಳು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಉಗ್ರ ಶಂಕಿತ ಶಹನವಾಜ್ ಗಣಿ ಎಂಜಿನಿಯರ್ ಆಗಿದ್ದಾನೆ. ಪತ್ನಿ ಬಸಂತಿ ಪಟೇಲ್ರನ್ನು ಇಸ್ಲಾಂಗೆ ಮತಾಂತರಗೊಳಿಸಿದ್ದು, ಈಗ ಅವರು ಮರಿಯಮ್ ಎಂದು ಮಾರ್ಪಾಡಾಗಿದ್ದಾರೆ. ಮೂವರು ವಾಂಟೆಡ್ ಶಂಕಿತ ಭಯೋತ್ಪಾದಕರನ್ನು ಬಂಧನ ಬಳಿಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಏಳು ದಿನಗಳ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದರು.
ಪುಣೆ ಐಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ) ಮಾಡ್ಯೂಲ್ ಪ್ರಕರಣದಲ್ಲಿ ಬೇಕಾಗಿರುವ ಶಹನವಾಜ್ ಸೇರಿದಂತೆ ನಾಲ್ವರು ಭಯೋತ್ಪಾದಕ ಶಂಕಿತರ ಚಿತ್ರಗಳನ್ನು ಎನ್‌ಐಎ ಕಳೆದ ತಿಂಗಳು ಬಿಡುಗಡೆ ಮಾಡಿತ್ತು. ಇವರ ಬಗ್ಗೆ ಮಾಹಿತಿ ನೀಡಿದಲ್ಲಿ ತಲಾ 3 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಘೋಷಿಸಿತ್ತು.
ಇದನ್ನೂ ಓದಿ:ಗುಜರಾತ್ನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಅಲ್ - ಖೈದಾ ಶಂಕಿತ ಉಗ್ರರು: ತನಿಖೆಯಲ್ಲಿ ಬಯಲು