ಕರ್ನಾಟಕ

karnataka

ETV Bharat / bharat

ಗಂಭೀರ ಸಂದೇಶಕ್ಕೆ ಕಾಮಿಡಿ ಟಚ್..​ ದೆಹಲಿ ಪೊಲೀಸರ ಕ್ರಮಕ್ಕೆ ಕರೀನಾ ಸಂತಸ - ಗಂಭೀರ ಸಂದೇಶದಕ್ಕೆ ಕಾಮಿಡಿ ಟಚ್​ ಕೊಟ್ಟ ದೆಹಲಿ ಪೊಲೀಸರು

ವೇಗವಾಗಿ ವಾಹನ ಚಲಾಯಿಸುವ ಮತ್ತು ಕೆಂಪು ದ್ವೀಪ ಇದ್ದರೂ ವಾಹನ ನಿಲ್ಲಿಸದೆ ಸಂಚಾರ ಮಾಡುವವರಿಗೆ ಜಾಗೃತಿ ಮೂಡಿಸಲು ಈ ವಿಡಿಯೋ ಬಳಕೆ ಮಾಡಿಕೊಳ್ಳಲಾಗಿದೆ.

ಗಂಭೀರ ಸಂದೇಶದಕ್ಕೆ ಕಾಮಿಡಿ ಟಚ್​ ಕೊಟ್ಟ ದೆಹಲಿ ಪೊಲೀಸರು
ಗಂಭೀರ ಸಂದೇಶದಕ್ಕೆ ಕಾಮಿಡಿ ಟಚ್​ ಕೊಟ್ಟ ದೆಹಲಿ ಪೊಲೀಸರು

By

Published : Jul 17, 2022, 9:22 PM IST

ನವದೆಹಲಿ: ಗಂಭೀರ ಸಂದೇಶಕ್ಕೆ ಹಾಸ್ಯದ ಸಿಂಚನವನ್ನು ನೀಡುವ ಮೂಲಕ ದೆಹಲಿ ಪೊಲೀಸರು ವಿನೂತನ ಪ್ರಯೋಗವೊಂದನ್ನು ಮಾಡಿದ್ದಾರೆ. ಪೊಲೀಸರು ಕಭಿ ಖುಷಿ ಕಭಿ ಗಮ್ ಚಿತ್ರದ ಬಾಲಿವುಡ್​​ನ ಕರೀನಾ ಕಪೂರ್ ಖಾನ್ ಅವರ ಚಿತ್ರದ ತುಣಕಿನ ಮೂಲಕ ತಮ್ಮದೇ ಕೌಶಲ್ಯ ಪ್ರದರ್ಶಿಸಿದ್ದಾರೆ.

ದೆಹಲಿ ಪೊಲೀಸರು ಅಧಿಕೃತ ಟ್ವಿಟರ್​ ಖಾತೆಯ ಮೂಲಕ ಈ ವಿಡಿಯೋ ಹಂಚಿಕೊಂಡಿದ್ದಾರೆ. ವೇಗವಾಗಿ ವಾಹನ ಚಲಾಯಿಸುವ ಮತ್ತು ಕೆಂಪು ದ್ವೀಪ ಇದ್ದರೂ ವಾಹನ ನಿಲ್ಲಿಸದೆ ಸಂಚಾರ ಮಾಡುವವರಿಗೆ ಜಾಗೃತಿ ಮೂಡಿಸಲು ಈ ವಿಡಿಯೋ ಬಳಕೆ ಮಾಡಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಕೆಂಪು ಬಣ್ಣದ ಟ್ರಾಫಿಕ್ ಲೈಟ್‌ ಇದ್ದರೂ ಕಾರ್ ವೇಗವಾಗಿ ಸಂಚರಿಸಿದೆ. ಕೆಂಪು ದೀಪವನ್ನು ದಾಟಿದ ತಕ್ಷಣ, ಕರೀನಾ ಪಾತ್ರದ ತುಣುಕೊಂದು ಕೆಂಪು ದೀಪದ ಮೇಲೆ ಕಾಣಿಸಿಕೊಳ್ಳುತ್ತದೆ. ಅದರಲ್ಲಿ ಯಾರಿವನು? ನನ್ನನ್ನು ನೋಡದೆ ಹೀಗ್​ ಹೋಗ್ತಾ ಇರೋನು ಎಂದು ಹೇಳುವ ವಿಡಿಯೋ ಹಾಕಲಾಗಿದೆ.

ದೆಹಲಿ ಪೊಲೀಸರ ಈ ಕ್ರಮದಿಂದ ಆಶ್ಚರ್ಯಚಕಿತರಾದ ಕರೀನಾ ಕೂಡ ತಮ್ಮ ಇನ್‌ಸ್ಟಾಗ್ರಾಮ್​ನಲ್ಲಿ ಇದನ್ನು ಹಂಚಿಕೊಂಡಿದ್ದಾರೆ. ಕಭಿ ಖುಷಿ ಕಭಿ ಗಮ್ 2001 ರಲ್ಲಿ ಬಿಡುಗಡೆಯಾಗಿತ್ತು ಮತ್ತು ಇದನ್ನು ಕರಣ್ ಜೋಹರ್ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಅಮಿತಾಬ್ ಬಚ್ಚನ್, ಜಯಾ ಬಚ್ಚನ್, ಶಾರುಖ್ ಖಾನ್, ಕಾಜೋಲ್ ಮತ್ತು ಹೃತಿಕ್ ರೋಷನ್ ಸಹ ನಟಿಸಿದ್ದಾರೆ.

ಇದನ್ನೂ ಓದಿ: ಚಲಿಸುತ್ತಿದ್ದ ವಾಹನದ ಮೇಲೆ ಪುಷ್ಅಪ್.. ಎದ್ದು ನಿಂತು ದುಸ್ಸಾಹಸ, ಕೆಳಗೆ ಬಿದ್ದವನ ಸ್ಥಿತಿ ಹೀಗಾಯ್ತು ನೋಡಿ

ABOUT THE AUTHOR

...view details