ಕರ್ನಾಟಕ

karnataka

ETV Bharat / bharat

5 ಗಂಟೆ, 5000 ಟ್ರ್ಯಾಕ್ಟರ್​, 5000 ಜನರು.. ಟ್ರ್ಯಾಕ್ಟರ್​ ರ‍್ಯಾಲಿಗೆ ಕಟ್ಟುನಿಟ್ಟಿನ ನಿಬಂಧನೆ! - ಕೃಷಿ ಕಾನೂನು ಹೋರಾಟ

ಕೃಷಿ ಮಸೂದೆ ವಿರುದ್ಧ ರೈತರು ನಾಳೆ ಟ್ರ್ಯಾಕ್ಟರ್ ಪರೇಡ್​ ನಡೆಸಲು ಮುಂದಾಗಿದ್ದು ಅದಕ್ಕಾಗಿ ದೆಹಲಿ ಪೊಲೀಸರು ಈಗಾಗಲೇ ಅನುಮತಿ ನೀಡಿದ್ದು, ಕೆಲವೊಂದು ಷರತ್ತು ವಿಧಿಸಿದೆ.

Kisan Gantantra Parade
Kisan Gantantra Parade

By

Published : Jan 25, 2021, 9:02 PM IST

ನವದೆಹಲಿ: ಕೃಷಿ ಕಾನೂನುಗಳ ವಿರುದ್ಧ ಅನ್ನದಾತರು ನಾಳೆ ದೊಡ್ಡ ಮಟ್ಟದ ಟ್ರ್ಯಾಕ್ಟರ್​ ರ‍್ಯಾಲಿ ನಡೆಸಲು ಅನುಮತಿ ನೀಡಲಾಗಿದ್ದು, ಪೊಲೀಸರು ಕೆಲವೊಂದು ಕಟ್ಟುನಿಟ್ಟಿನ ನಿಬಂಧನೆ ಹೇರಿದ್ದಾರೆ.

ಕಿಸಾನ್ ಗಣತಂತ್ರ ಪರೇಡ್​ನಲ್ಲಿ ಭಾಗಿಯಾಗುವ ರೈತರು ಯಾವುದೇ ಕಾರಣಕ್ಕೂ ಗಣರಾಜ್ಯೋತ್ಸವ ಸಮಾರಂಭಕ್ಕೆ ಅಡ್ಡಿಯನ್ನುಂಟು ಮಾಡಬಾರದು ಎಂದು ಎಚ್ಚರಿಕೆ ನೀಡಲಾಗಿದೆ.

ಓದಿ: ಕೇಂದ್ರ ಬಜೆಟ್​ ದಿನವೇ ರೈತರಿಂದ ಸಂಸತ್​ ಮಾರ್ಚ್​ಗೆ ಕರೆ... ಮತ್ತಷ್ಟು ತೀವ್ರಗೊಳ್ಳಲಿದೆ ಪ್ರೊಟೆಸ್ಟ್!

ಒಟ್ಟು 37 ಅಂಶಗಳನ್ನೊಳಗೊಂಡಿರುವ ಪಟ್ಟಿ ಪ್ರಕಟ ಮಾಡಿರುವ ದೆಹಲಿ ಪೊಲೀಸರು 5 ಗಂಟೆಗಳಲ್ಲಿ 5 ಸಾವಿರ ಟ್ರ್ಯಾಕ್ಟರ್​, 5 ಸಾವಿರ ಜನರು ಇದರಲ್ಲಿ ಭಾಗಿಯಾಗಲು ಅನುಮತಿ ನೀಡಿದೆ. ಪರೇಡ್ ವೇಳೆ ಯಾವುದೇ ಧ್ವನಿವರ್ಧಕ ಬಳಕೆ ಮಾಡಬಾರದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದು, ಸಶಸ್ತ್ರ ಪಡೆಗಳ ಪಂಥಸಂಚಲನದ ಬಳಿಕ ರೈತರ ಪರೇಡ್​ಗೆ ಅವಕಾಶ ನೀಡಲಾಗಿದೆ.

ಟ್ರ್ಯಾಕ್ಟರ್ ಪರೇಡ್​ನಲ್ಲಿ ಭಾಗಿಯಾಗುವಾಗ ಸಂಘಟಕರು, ಸಂಬಂಧಿತ ಭೂ ಮಾಲೀಕ ಅಧಿಕಾರಿಗಳಿಂದ ಎನ್​ಒಸಿ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ಪ್ರತಿಭಟನೆ ವೇಳೆ ಯಾವುದೇ ಧರಣಿಗೆ ಅವಕಾಶವಿಲ್ಲ. ರಸ್ತೆ ಬಳಕೆದಾರರಿಗೆ ಯಾವುದೇ ಅಡಚಣೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

ಟ್ರ್ಯಾಕ್ಟರ್ ಪರೇಡ್​ನಲ್ಲಿ ಭಾಗಿಯಾಗಲು ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಂದ ರೈತರು ಈಗಾಗಲೇ ದೆಹಲಿಯತ್ತ ಪ್ರಯಾಣ ಬೆಳೆಸಿದ್ದು, ನಾಳಿನ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.

ABOUT THE AUTHOR

...view details