ಕರ್ನಾಟಕ

karnataka

ETV Bharat / bharat

ಜೆಎನ್‌ಯು ಕ್ಯಾಂಪಸ್‌ನಲ್ಲಿ ಗುಂಪು ಘರ್ಷಣೆ: ಎರಡು ಎಫ್‌ಐಆರ್‌ ದಾಖಲು - JNU campus

ದೆಹಲಿಯ ಜೆಎನ್‌ಯು ಕ್ಯಾಂಪಸ್‌ನಲ್ಲಿ ಗುಂಪು ಘರ್ಷಣೆ ಉಂಟಾಗಿದ್ದು, ಇದಕ್ಕೆ ಹುಟ್ಟುಹಬ್ಬ ಆಚರಣೆ ವೇಳೆ ನಡೆದ ಗಲಾಟೆ ಕಾರಣ ಎನ್ನಲಾಗಿದೆ.

delhi-police-register-two-fir-over-jnu-clashes
ಜೆಎನ್‌ಯು ಕ್ಯಾಂಪಸ್‌ನಲ್ಲಿ ಗುಂಪು ಘರ್ಷಣೆ: ಎರಡು ಎಫ್‌ಐಆರ್‌ ದಾಖಲು

By

Published : Nov 11, 2022, 3:52 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಕ್ಯಾಂಪಸ್‌ನಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ.

ವೈಯಕ್ತಿಕ ವಿಚಾರಕ್ಕೆ ಸಂಬಂಧಿಸಿದಂತೆ ನರ್ಮದಾ ಹಾಸ್ಟೆಲ್ ಬಳಿ ಗುರುವಾರ ಸಂಜೆ ನಡೆದ ಘರ್ಷಣೆಯಲ್ಲಿ ಇಬ್ಬರು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಈ ಸಂಬಂಧ ಜೆಎನ್‌ಯು ವಿದ್ಯಾರ್ಥಿ ನಿಶಾಂತ್ ನಗರ್ ನೀಡಿದ ದೂರಿನ ಮೇರೆಗೆ ಹಾಗೂ ಮತ್ತೋರ್ವ ಕಾರ್ತಿಕ್ ಎಂಬ ವಿದ್ಯಾರ್ಥಿ ನೀಡಿದ ದೂರಿನ ಮೇರೆಗೆ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ ಎಂದು ದೆಹಲಿ ನೈಋತ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಸಿ. ಮನೋಜ್ ತಿಳಿಸಿದ್ದಾರೆ.

ವಸಂತ ಕುಂಜ್ ಉತ್ತರ ಪೊಲೀಸ್ ಠಾಣೆಯಲ್ಲಿ ಎರಡೂ ಎಫ್‌ಐಆರ್‌ಗಳು ದಾಖಲಾಗಿವೆ. ಬುಧವಾರ ನಡೆದ ಹುಟ್ಟುಹಬ್ಬ ಆಚರಣೆ ವೇಳೆ ನಡೆದ ಗಲಾಟೆಯಿಂದ ಈ ಘರ್ಷಣೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಏತನ್ಮಧ್ಯೆ, ವಿದ್ಯಾರ್ಥಿಗಳು ಮತ್ತು ಯುವಕರು ದೊಣ್ಣೆಗಳನ್ನು ಹೊತ್ತುಕೊಂಡು ಹೋಗುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಗುರುವಾರದ ಘರ್ಷಣೆಯಲ್ಲಿ ಯಾವುದೇ ರಾಜಕೀಯ ಕೈವಾಡವಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಉತ್ತರ ಬಂಗಾಳದಲ್ಲಿ ಅಶಾಂತಿ ಸೃಷ್ಟಿಸಲು ಶಸ್ತ್ರಾಸ್ತ್ರ ಕಳ್ಳಸಾಗಣೆ: ಮಮತಾ ಬ್ಯಾನರ್ಜಿ ಆರೋಪ

ABOUT THE AUTHOR

...view details