ಕರ್ನಾಟಕ

karnataka

ETV Bharat / bharat

ಶ್ರದ್ಧಾ ಕೊಲೆ ಪ್ರಕರಣದ ತನಿಖೆ ಚುರುಕು: ದಂತವೈದ್ಯರ ಹೇಳಿಕೆ ದಾಖಲಿಸಿಕೊಂಡ ದೆಹಲಿ ಪೊಲೀಸರು - Delhi police

ದೆಹಲಿ ಪೊಲೀಸರು ಶ್ರದ್ಧಾ ಅವರ ದವಡೆಯನ್ನು ಪತ್ತೆ ಮಾಡಿದ್ದಾರೆ. ಅವರಿಗೆ ರೂಟ್ ಕೆನಾಲ್‌ ಇರುವುದು ಪತ್ತೆಯಾಗಿದೆ. ಈ ಬಗ್ಗೆ ಪೊಲೀಸರು ದಂತವೈದ್ಯರನ್ನು ವಿಚಾರಣೆಗೆ ಒಳಪಡಿಸಿ ಅವರಿಂದ ಶ್ರದ್ಧಾ ಅವರ ಹಲ್ಲಿನ ಚಿಕಿತ್ಸೆಯ ದಾಖಲೆಗಳ ಎಕ್ಸ್-ರೇ ಫೈಲ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದ ವಿವರಗಳನ್ನು ದೆಹಲಿ ಪೊಲೀಸರು ಪಡೆದುಕೊಂಡಿದ್ದಾರೆ.

Shraddha Walker
ಶ್ರದ್ಧಾ ವಾಲ್ಕರ್

By

Published : Nov 25, 2022, 4:07 PM IST

ಮುಂಬೈ:ವಸಾಯಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಅವರ ಭೀಕರ ಹತ್ಯೆಯಿಂದ ಒಂದೆಡೆ ಆಕ್ರೋಶ ವ್ಯಕ್ತವಾಗುತ್ತಿದ್ದರೆ, ಶ್ರದ್ಧಾ ಹತ್ಯೆ ಪ್ರಕರಣದಲ್ಲಿ ದಿನಕ್ಕೊಂದು ಹೊಸ ಸಂಗತಿಗಳು ಹೊರಬೀಳುತ್ತಿವೆ. ದೆಹಲಿ ಪೊಲೀಸರು ಶ್ರದ್ಧಾ ಅವರ ದವಡೆ ಪತ್ತೆ ಮಾಡಿದ್ದಾರೆ. ನಂತರ, ಆಕೆಗೆ ರೂಟ್ ಕೆನಾಲ್‌ ಇರುವುದು ಪತ್ತೆಯಾಗಿದೆ. ಈ ಬಗ್ಗೆ ವಸಾಯಿಯಲ್ಲಿರುವ ದೆಹಲಿ ಪೊಲೀಸರು ದಂತವೈದ್ಯರನ್ನು ವಿಚಾರಣೆಗೆ ಒಳಪಡಿಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ.

ದಂತ ವೈದ್ಯರಾದ ಡಾ.ಇಶಾನ್ ಮೋಟಾ ವಿಚಾರಣೆ:2021 ರಲ್ಲಿ ಶ್ರದ್ಧಾ ಅವರು ವೈದ್ಯರಾದ ಡಾ. ಇಶಾನ್ ಮೋಟಾ ಅವರ ಬಳಿ ದಂತ ಚಿಕಿತ್ಸೆಗೆ ಒಳಗಾಗಿದ್ದರು ಎಂಬುದು ಬೆಳಕಿಗೆ ಬಂದಿದೆ. ದೆಹಲಿ ಪೊಲೀಸರು ವಸಾಯಿಯಲ್ಲಿ ಈ ವೈದ್ಯರ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಮತ್ತು ಅವರಿಂದ ಶ್ರದ್ಧಾ ಅವರ ಹಲ್ಲಿನ ಚಿಕಿತ್ಸೆಯ ದಾಖಲೆಗಳ ಎಕ್ಸ್ - ರೇ ಫೈಲ್ ಮತ್ತು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದ ವಿವರಗಳನ್ನು ದೆಹಲಿ ಪೊಲೀಸರು ಪಡೆದುಕೊಂಡಿದ್ದಾರೆ.

ಪತ್ತೆಯಾದ ದವಡೆಯ ಹಲ್ಲುಗಳಿಗೆ ಅವು ಹೊಂದಿಕೆಯಾಗುತ್ತವೆಯೇ ಎಂದು ನೋಡಲು ಎಕ್ಸ್ - ರೇ ಮತ್ತು ಇತರ ವೈದ್ಯಕೀಯ ದಾಖಲೆಗಳು ಸಹಾಯ ಪಡೆಯುತ್ತವೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ಅಲ್ಲದೇ 2021 ರ ನವೆಂಬರ್‌ನಲ್ಲಿ ವಿವಿಧ ದಿನಗಳಲ್ಲಿ ಶ್ರದ್ಧಾ ರೂಟ್ ಕೆನಾಲ್‌ಗಾಗಿ ಕ್ಲಿನಿಕ್‌ಗೆ ಬಂದಿರುವುದಾಗಿ ಡಾ. ಇಶಾನ್ ಮಾಹಿತಿ ನೀಡಿದರು.

ಅಲ್ಲದೇ ದೆಹಲಿ ಪೊಲೀಸರಿಗೆ ಡಾ. ಇಶಾನ್ ಅವರ ಉತ್ತರದಲ್ಲಿ ಶ್ರದ್ಧಾ ವಾಲ್ಕರ್ ಸುಮಾರು ಎಂಟು ಹಲ್ಲಿನ ಸೆಟ್ಟಿಂಗ್‌ಗಳನ್ನು ಮಾಡಿಸಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಈ ಹೇಳಿಕೆ ಹೆಚ್ಚುವರಿ ಪುರಾವೆಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕುಟುಂಬದೊಂದಿಗೆ ಸಂಬಂಧವನ್ನು ಮುರಿದುಕೊಂಡಿದ್ದ ಶ್ರದ್ಧಾ: ಅಫ್ತಾಬ್ ಜೊತೆಗಿನ ಪ್ರೇಮ ಸಂಬಂಧದಿಂದಾಗಿ ಶ್ರದ್ಧಾ ತನ್ನ ಕುಟುಂಬದೊಂದಿಗೆ ಸಂಬಂಧವನ್ನು ಮುರಿದುಕೊಂಡಿದ್ದಳು. ಆದಾಗ್ಯೂ, ಅವಳು ತನ್ನ ಸ್ನೇಹಿತರೊಂದಿಗೆ ಸಂಪರ್ಕದಲ್ಲಿದ್ದರು. ಬೇಗ ಗುಡ್ ನ್ಯೂಸ್ ಕೊಡುತ್ತೇನೆ ಎಂದು ಗೆಳೆಯರಿಗೆ ಹೇಳಿದ್ದರು. ಕೊಲೆಗೂ ಮುನ್ನ ಅವರು ತಮ್ಮ ಸ್ನೇಹಿತರಿಗೆ ಯಾವ ರೀತಿಯ ಗುಡ್ ನ್ಯೂಸ್ ನೀಡಿದ್ದಾರೆ ಎಂಬುದು ಇನ್ನೂ ನಿಗೂಢವಾಗಿದೆ.

ದೆಹಲಿ ಪೊಲೀಸರು ಕಳೆದ ವಾರದಿಂದ ವಸಾಯಿ ಪ್ರಕರಣವನ್ನು ಭೇದಿಸಲು ತೀವ್ರ ಪ್ರಯತ್ನ ನಡೆಸುತ್ತಿದ್ದಾರೆ. ದೆಹಲಿ ಪೊಲೀಸರು ಮಾಣಿಕ್‌ಪುರ ಪೊಲೀಸರ ಸಹಾಯದಿಂದ ಪ್ರಕರಣವನ್ನು ಭೇದಿಸಲು ಪ್ರಯತ್ನಿಸುತ್ತಿದ್ದಾರೆ. ಇದೀಗ ಭಾಯಂದರ್ ಕೊಲ್ಲಿಯಲ್ಲಿ ರೈಲು ಮಾರ್ಗದ ಪ್ರದೇಶದಲ್ಲಿ ಬೋಟ್ ಸಹಾಯದಿಂದ ಶ್ರದ್ಧಾ ಅವರ ಮೊಬೈಲ್ ಪತ್ತೆ ಹಚ್ಚಲಾಗುತ್ತಿದೆ. ಈ ಅಪರಾಧದಲ್ಲಿ ಶ್ರದ್ಧಾ ಅವರ ಮೊಬೈಲ್ ಕೂಡ ಪ್ರಮುಖ ಪುರಾವೆಯಾಗಲಿದೆ.

ಇದನ್ನೂ ಓದಿ:ವಿಮೆ ಹಣಕ್ಕೆ ಪತ್ನಿಗೆ ಆತ್ಮಹತ್ಯೆ ಮಾಡಿಕೊಳ್ಳುವಂತೆ ಪೀಡಿಸುತ್ತಿದ್ದ ಪತಿ: 3 ಮದುವೆಯಾಗಿ ವಂಚನೆ

ABOUT THE AUTHOR

...view details