ಕರ್ನಾಟಕ

karnataka

ETV Bharat / bharat

ಭಯೋತ್ಪಾದಕ ದಾಳಿ ಬಗ್ಗೆ ಗುಪ್ತಚರ ಮಾಹಿತಿ... ದೆಹಲಿಯಲ್ಲಿ ಹೈ ಅಲರ್ಟ್​ - ದೆಹಲಿಯಲ್ಲಿ ಕಟ್ಟೆಚ್ಚರ

ಭಯೋತ್ಪಾದಕ ದಾಳಿಯ ಬೆದರಿಕೆ ಬಗ್ಗೆ ಗುಪ್ತಚರ ದಳದ ಮಾಹಿತಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಪೊಲೀಸರು ಹೈ ಅಲರ್ಟ್​ ಆಗಿದ್ಧಾರೆ.

delhi-police-on-high-alert-after-receiving-input-on-terrorist-attack
ಭಯೋತ್ಪಾದಕ ದಾಳಿ ಬಗ್ಗೆ ಗುಪ್ತಚರ ಮಾಹಿತಿ... ದೆಹಲಿಯಲ್ಲಿ ಹೈ ಅಲರ್ಟ್​

By

Published : Oct 15, 2021, 5:35 AM IST

ನವದೆಹಲಿ:ಭಯೋತ್ಪಾದಕ ದಾಳಿಯ ಬೆದರಿಕೆ ಬಗ್ಗೆ ಗುಪ್ತಚರ ದಳದ ಮಾಹಿತಿ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ದೆಹಲಿ ಪೊಲೀಸರು ತೀವ್ರ ನಿಗಾ ವಹಿಸಿದ್ದು, ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ದಸರಾ ಹಬ್ಬದ ಸಂದರ್ಭವಾದ ಕಾರಣ ಪೊಲೀಸರು ಮತ್ತಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ. ಮಾರುಕಟ್ಟೆಗಳು ಮತ್ತು ಮಾಲ್‌ಗಳಂತಹ ಸಾರ್ವಜನಿಕ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ವಿವಿಧ ಪ್ರದೇಶಗಳಲ್ಲಿ ಚೆಕ್‌ಪಾಯಿಂಟ್ ಮೂಲಕ ಹಾದುಹೋಗುವ ವಾಹನಗಳ ತಪಾಸಣೆ ಕಾರ್ಯ ನಡೆಯುತ್ತಿದೆ.

ಸಾಮಾನ್ಯವಾಗಿ ದೆಹಲಿಯಲ್ಲಿ ಈ ಪ್ರಕ್ರಿಯೆಯು ದಿನನಿತ್ಯ ನಡೆಯುತ್ತದೆ. ಅಲ್ಲದೆ, ಹಬ್ಬಗಳ ಸಂದರ್ಭ, ಸ್ವಾತಂತ್ರ್ಯ ದಿನ ಹಾಗೂ ಗಣರಾಜ್ಯೋತ್ಸವದಂದು ನಾವು ವಿಶೇಷ ಎಚ್ಚರಿಕಾ ಕ್ರಮ ಕೈಗೊಳ್ಳುತ್ತೇವೆ. ಬಾಡಿಗೆದಾರರ ಸರ್ವರ್ ಪರಿಶೀಲನೆ, ಹೊರಗಡೆಯಿಂದ ಬಂದು ನೆಲೆಸಿರುವವರ ಮೇಲೆ ಕಟ್ಟೆಚ್ಚರ ಸೇರಿ ಇತರ ಅನಿರೀಕ್ಷಿತ ತಪಾಸಣೆಯನ್ನು ಪ್ರತಿದಿನ ನಡೆಸಲಾಗುತ್ತದೆ ಎಂದು ನವದೆಹಲಿ ಜಿಲ್ಲಾ ಉಪ ಪೊಲೀಸ್ ಆಯುಕ್ತ (DCP) ದೀಪಕ್ ಯಾದವ್ ತಿಳಿಸಿದ್ದಾರೆ.

ಇದನ್ನೂ ಓದಿ:UNHRC: ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಗೆ ಭಾರತ ಮರು ಆಯ್ಕೆ

ABOUT THE AUTHOR

...view details