ಕರ್ನಾಟಕ

karnataka

ETV Bharat / bharat

ಗಣರಾಜ್ಯೋತ್ಸವ ದಿನ ರೆಡ್​ ಫೋರ್ಟ್ ಮೇಲೆ ಧ್ವಜ ಹಾರಿಸಿದ ಜಸ್ಪ್ರೀತ್​ ಸಿಂಗ್​ ಅರೆಸ್ಟ್​! - ಜಸ್ಪ್ರೀತ್ ಸಿಂಗ್ ಬಂಧನ

ಕಳೆದ ಜನವರಿ 26ರಂದು ದೆಹಲಿ ಕೆಂಪುಕೋಟೆಯಲ್ಲಿ ನಡೆದ ಹಿಂಸಾಚಾರ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಮತ್ತೋರ್ವ ಆರೋಪಿಯ ಬಂಧನ ಮಾಡುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

Jaspreet Singh
Jaspreet Singh

By

Published : Feb 22, 2021, 7:01 PM IST

Updated : Feb 22, 2021, 7:26 PM IST

ನವದೆಹಲಿ:ಗಣರಾಜ್ಯೋತ್ಸವ ದಿನ ಕೃಷಿ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆ ವೇಳೆ ರೆಡ್​​ಫೋರ್ಟ್​ಗೆ ಮುತ್ತಿಗೆ ಹಾಕಿದ್ದ ಕೆಲವರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದರು. ಇದೇ ವೇಳೆ ವ್ಯಕ್ತಿಯೊಬ್ಬ ಕೆಂಪುಕೋಟೆ ಮೇಲೆ ಸಿಖ್ ಧ್ವಜ ಹಾರಿಸಿದ್ದ ಘಟನೆ ಸಹ ನಡೆದಿತ್ತು.

ಓದಿ: ತಾಯಿ ಹೆಮ್ಮೆ ಪಡುವಂತೆ ಮಾಡುವುದೇ ಜೀವನದ ಗುರಿ: ಸಾರಾ

ಕೆಂಪುಕೋಟೆ ಮೇಲೆ ಸಿಖ್​ ಧ್ವಜ ಹಾರಿಸಿದ್ದ ಜಸ್ಪ್ರೀತ್ ಸಿಂಗ್​ ಬಂಧನ ಮಾಡುವಲ್ಲಿ ದೆಹಲಿ ಪೊಲೀಸರು ಇಂದು ಯಶಸ್ವಿಯಾಗಿದ್ದು, ಆತ ಮೂಲತಃ ದೆಹಲಿಯವನು ಎಂದು ತಿಳಿದು ಬಂದಿದೆ. ಕಳೆದ ಎರಡು ದಿನಗಳ ಹಿಂದೆ ದೆಹಲಿ ಹಿಂಸಾಚಾರದಲ್ಲಿ ಭಾಗಿಯಾಗಿದ್ದ 20 ಆರೋಪಿಗಳ ಫೋಟೋ ದೆಹಲಿ ಪೊಲೀಸರಿಂದ ರಿಲೀಸ್​ ಆಗಿದ್ದವು. ಇದರ ಬೆನ್ನಲ್ಲೇ ಸಿಖ್​ ಧ್ವಜ ಹಾರಾಟ ಮಾಡಿರುವ ವ್ಯಕ್ತಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ದೆಹಲಿ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕಳೆದ ವಾರ ದೆಹಲಿ ಪೊಲೀಸರು ಮನೀಂದರ್​ ಸಿಂಗ್​ ಎಂಬ ವ್ಯಕ್ತಿಯನ್ನ ವಶಕ್ಕೆ ಪಡೆದುಕೊಂಡಿದ್ದರು. ರೈತ ಪ್ರತಿಭಟನೆ ವೇಳೆ ಕತ್ತಿ ಝಳಪಿಸಿ ಹಿಂಸೆಗೆ ಪ್ರೇರಣೆ ನೀಡಿದ್ದ ಆರೋಪಿ ಈತನ ಮೇಲಿತ್ತು.

Last Updated : Feb 22, 2021, 7:26 PM IST

For All Latest Updates

ABOUT THE AUTHOR

...view details