ಕರ್ನಾಟಕ

karnataka

ETV Bharat / bharat

ಗುಜರಿ ವ್ಯಾಪಾರ ಮಾಡುತ್ತಾ ಪಾಕ್​​ ಪರ ಬೇಹುಗಾರಿಕೆ: ದೆಹಲಿಯಲ್ಲಿ ಆರೋಪಿಯ ಬಂಧನ - ಪಾಕ್​ ಪರ ಬೇಹುಗಾರಿಕೆ

ರಾಜಧಾನಿಯಲ್ಲಿ ಇದ್ದುಕೊಂಡು ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದು, ಆತನನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.

delhi police crime branch
delhi police crime branch

By

Published : Jul 28, 2021, 4:33 PM IST

ನವದೆಹಲಿ: ಗುಜರಿ ವ್ಯಾಪಾರ ಮಾಡುತ್ತಾ ಪಾಕಿಸ್ತಾನದ ಪರ ಬೇಹುಗಾರಿಕೆ ಮಾಡ್ತಿದ್ದ ಆರೋಪಿಯನ್ನು ಬಂಧನ ಮಾಡುವಲ್ಲಿ ದೆಹಲಿ ಕ್ರೈಂ ಬ್ರ್ಯಾಂಚ್​ ಪೊಲೀಸರು ಯಶಸ್ವಿಯಾಗಿದ್ದಾರೆ. ಇದೀಗ ಆತನಿಂದ ಮಹತ್ವದ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಪಾಕಿಸ್ತಾನದ ಇಂಟರ್​ ಸರ್ವೀಸಸ್​ ಇಂಟೆಲಿಜೆನ್ಸಿ (ISI- ಗುಪ್ತಚರ ಇಲಾಖೆ) ಗ್ಯಾಂಗ್​​ನೊಂದಿಗೆ ಸೇರಿಕೊಂಡು ಬೇಹುಗಾರಿಕೆ ನಡೆಸಿದ ಗಂಭೀರ ಆರೋಪದ ಮೇಲೆ ಮೊಹ್ಸಿನ್​ ಎಂಬಾತನನ್ನು ಬಂಧಿಸಲಾಗಿದೆ. ಈತ ದೆಹಲಿಯಲ್ಲಿದ್ದುಕೊಂಡು ತನ್ನ ಸಹೋದರನೊಂದಿಗೆ ಗುಜರಿ ವ್ಯಾಪಾರ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಕಾಂಗ್ರೆಸ್​ ಪಕ್ಷ ಮುನ್ನಡೆಸಲು ಸಾಧ್ಯವಾಗದ ರಾಹುಲ್​ ಫೋನ್​ ಹ್ಯಾಕ್​​​ ಮಾಡಿ ಪ್ರಯೋಜನವೇನು? ಸಂಬಿತ್ ಪಾತ್ರ

ಬಂಧಿತ ಆರೋಪಿ ಜೂನ್ ತಿಂಗಳಲ್ಲಿ ಬಂಧನಕ್ಕೊಳಗಾಗಿರುವ ಪರಮಜಿತ್ ಎಂಬ ಯೋಧನಿಗೆ ಹಣ ರವಾನೆ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈಗಾಗಲೇ ಈತನನ್ನು ಕೋರ್ಟ್​ಗೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೋಸ್ಕರ ವಶಕ್ಕೆ ಪಡೆದುಕೊಂಡಿರುವುದಾಗಿ ಕ್ರೈಂ ಬ್ರ್ಯಾಂಚ್​ ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ವರದಿ ಪ್ರಕಾರ, ಈತ ಪಾಕಿಸ್ತಾನ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯೋರ್ವನ ಹೆಸರು ಬಹಿರಂಗಪಡಿಸಿದ್ದಾನೆ. ಇದೀಗ ಹೆಚ್ಚಿನ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ ಎಂದಿದ್ದಾರೆ.

ಈ ಹಿಂದೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ವ್ಯಕ್ತಿಯೋರ್ವನನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಈ ವೇಳೆ ಆತ ನೀಡಿದ್ದ ಮಾಹಿತಿ ಆಧಾರದ ಮೇಲೆ ಯೋಧನಾಗಿ ಸೇವೆ ಸಲ್ಲಿಸುತ್ತಿದ್ದ ಪರಮಜಿತ್​ನನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.

ABOUT THE AUTHOR

...view details