ನವದೆಹಲಿ :ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಎರಡು ಫೋಟೋಗಳು ವೈರಲ್ ಆಗಿದ್ದವು. ಆ ಫೋಟೋಗಳು ಕೇಂದ್ರ ಸರ್ಕಾರದ ಮಟ್ಟದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿವೆ. ಅಲ್ಲದೇ, ದೆಹಲಿ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ. ಈ ಫೋಟೋಗಳನ್ನು ದೆಹಲಿ ಪೊಲೀಸ್ ಕಮಿಷನರ್ ರಾಕೇಶ್ ಅಸ್ಥಾನಾ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದಹಾಗೆ ಈ ಪ್ರಕರಣ ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುವ ವ್ಯಕ್ತಿಯೋರ್ವನಿಗೆ ಸಂಬಂಧಿಸಿದ್ದು ಎನ್ನಲಾಗಿದೆ.
ಕೆಲವು ದಿನಗಳ ಹಿಂದೆ ಕುನಾಲ್ ಮರ್ಚೆಂಟ್ ಎಂಬಾತನಿಗೆ ಎರಡು ಇಮೇಲ್ಗಳು ಬಂದಿದ್ದವು. ಅದು ಪ್ರಧಾನಿ ಕಚೇರಿಯಿಂದ ಬಂದಿದ್ದು, 'ಪ್ರಧಾನಿ ಮೋದಿಯವರು ನಿಮ್ಮನ್ನು ಗುರುತಿಸಿದ್ದು, ಪ್ರಧಾನಿಗಳಿಗಾಗಿಯೇ ವಿಶೇಷವಾಗಿ ಟೇಬಲ್ ಅನ್ನು ನಿರ್ಮಾಣ ಮಾಡಬೇಕಾಗಿದೆ. ಅದನ್ನು ಪ್ರಧಾನಿ ಕಚೇರಿಯಲ್ಲಿ ನರೇಂದ್ರ ಮೋದಿಯವರು ಬಳಸಲಿದ್ದಾರೆ' ಎಂದು ಇಮೇಲ್ನಲ್ಲಿ ಬರೆಯಲಾಗಿತ್ತು. ಇದರ ಜೊತೆಗೆ ಪ್ರಧಾನಿಯವರ ಖಾಸಗಿ ಕಾರ್ಯದರ್ಶಿ ವಿವೇಕ್ ಕುಮಾರ್ ಎಂದು ಉಲ್ಲೇಖಿಸಲಾಗಿತ್ತು.