ಕರ್ನಾಟಕ

karnataka

ETV Bharat / bharat

ಕಾಂಜಾವಾಲಾ ಹಿಟ್​ ಅಂಡ್ ರನ್ ಪ್ರಕರಣ: 800 ಪುಟಗಳ ಚಾರ್ಜ್​​ಶೀಟ್ ಸಲ್ಲಿಕೆ

ದೆಹಲಿಯ ಕಾಂಜಾವಾಲಾ ಹಿಟ್​ ಅಂಡ್ ರನ್ ಪ್ರಕರಣಕ್ಕೆ ಪೊಲೀಸರು 800 ಪುಟಗಳ ಚಾರ್ಜ್​​ಶೀಟ್​ ಸಲ್ಲಿಸಿದ್ದಾರೆ.

delhi-police-chargesheet-on-kanjhawala-death-case
ಕಾಂಜಾವಾಲಾ ಹಿಟ್​ ಅಂಡ್ ರನ್ ಪ್ರಕರಣ: 800 ಪುಟಗಳ ಚಾರ್ಜ್​​ಶೀಟ್ ಸಲ್ಲಿಕೆ

By

Published : Apr 1, 2023, 8:17 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಕಾಂಜಾವಾಲಾ ಹಿಟ್​ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಶನಿವಾರ ದೆಹಲಿ ಪೊಲೀಸರು ಚಾರ್ಜ್​​ಶೀಟ್​ ಸಲ್ಲಿಸಿದ್ದಾರೆ. ಇಲ್ಲಿನ ಸುಲ್ತಾನಪುರಿ ಠಾಣೆ ಪೊಲೀಸರು ಈ ಪ್ರಕರಣದಲ್ಲಿ ಅಂದಾಜು 800 ಪುಟಗಳ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದು, ಸುಮಾರು 120 ಸಾಕ್ಷಿಗಳನ್ನು ಉಲ್ಲೇಖಿಸಲಾಗಿದೆ.

ಜನವರಿ 1ರ ಹೊಸ ವರ್ಷದ ದಿನದಂದು ಮಧ್ಯರಾತ್ರಿ ಕಾಂಜಾವಾಲಾ ಪ್ರದೇಶದಲ್ಲಿ ನಡೆದಿದ್ದ ಅಂಜಲಿ ಎಂಬ ಯುವತಿಯ ಸಾವಿನ ಪ್ರಕರಣ ದೇಶದಲ್ಲಿ ಸಂಚಲನ ಮೂಡಿಸಿತ್ತು. ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದ್ದಲ್ಲದೆ, ಯುವತಿಯನ್ನು ಸುಮಾರು ಕಿಲೋ ಮೀಟರ್​ ದೂರ ಎಳೆದೊಯ್ದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಸಂಬಂಧ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದರು. ಇದೀಗ ನೂರಾರು ಪುಟಗಳ ಚಾರ್ಜ್ ಶೀಟ್​ ಸಲ್ಲಿಸಿದ್ದಾರೆ.

ಇದನ್ನೂ ಓದಿ:ದೆಹಲಿಯ ಕಾಂಜಾವಾಲಾ ಹಿಟ್​ ಅಂಡ್​ ರನ್​ ಪ್ರಕರಣ: 11 ಪೊಲೀಸರು ಸಸ್ಪೆಂಡ್​

ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಿದ ಸೆಕ್ಷನ್​ಗಳು: ಈ ಚಾರ್ಜ್ ಶೀಟ್​ನಲ್ಲಿ ಅಮಿತ್ ಖನ್ನಾನನ್ನು ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ. ಉಳಿದಂತೆ ಕೃಷ್ಣ, ಮಿಥುನ್, ಮನೋಜ್ ಮಿತ್ತಲ್, ದೀಪಕ್ ಖನ್ನಾ, ಅಂಕುಶ್ ಮತ್ತು ಅಶುತೋಷ್ ಎಂಬುವವರ ಹೆಸರನ್ನೂ ಚಾರ್ಜ್ ಶೀಟ್​ನಲ್ಲಿ ಉಲ್ಲೇಖಿಸಲಾಗಿದೆ. ಕೊಲೆ ಸೇರಿ ಸೆಕ್ಷನ್​ಗಳನ್ನು ಆರೋಪಿಗಳ ವಿರುದ್ಧ ಹಾಕಲಾಗಿದೆ. ಇದರಲ್ಲಿ ಅಮಿತ್ ಖನ್ನಾ, ಕೃಷ್ಣ, ಮಿಥುನ್ ಮತ್ತು ಮನೋಜ್ ಮಿತ್ತಲ್ ವಿರುದ್ಧ ಐಪಿಸಿ ಸೆಕ್ಷನ್ 201/212/182/34/120ಬಿ ಮತ್ತು 302 ಅಡಿಯಲ್ಲಿ ಆರೋಪಗಳನ್ನು ಹೊರೆಸಲಾಗಿದೆ. ಸೆಕ್ಷನ್ 201/212/182/34/120ಬಿ ಅಡಿಯಲ್ಲಿ ಇತರ ಆರೋಪಿಗಳ ಹೆಸರನ್ನು ಸೇರಿಸಲಾಗಿದೆ.

ಸದ್ಯ ಆರೋಪಿಗಳಾದ ದೀಪಕ್ ಖನ್ನಾ, ಅಮಿತ್ ಖನ್ನಾ, ಕೃಷ್ಣ, ಮನೋಜ್ ಮತ್ತು ಮಿಥುನ್ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಅಶುತೋಷ್ ಮತ್ತು ಅಂಕುಶ್ ಖನ್ನಾ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಗಿದ್ದಾರೆ ಎಂದು ಪೊಲೀಸ್ ಉಪ ಆಯುಕ್ತ ಹರೇಂದ್ರ ಸಿಂಗ್ ಪ್ರಕಾರ ಮಾಹಿತಿ ನೀಡಿದ್ದಾರೆ.

ಸಂತ್ರಸ್ತ ಕುಟುಂಬಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ 10 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು. ಮತ್ತೊಂದೆಡೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೂಕ್ತ ತನಿಖೆ ಆದೇಶಿಸಿದ್ದರು. ಈ ತನಿಖೆಯನ್ನು ದೆಹಲಿಯ ಹಿರಿಯ ಪೊಲೀಸ್ ಅಧಿಕಾರಿ ಶಾಲಿನಿ ಸಿಂಗ್ ಅವರಿಗೆ ವಹಿಸಲಾಗಿತ್ತು. ಶೀಘ್ರವೇ ತನಿಖೆ ನಡೆಸಿ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸುವಂತೆ ಸೂಚಿಸಲಾಗಿತ್ತು.

ಅಲ್ಲದೇ, ಕರ್ತವ್ಯದ ಲೋಪ ಆರೋಪದ ಮೇಲೆ 11 ಪೊಲೀಸರನ್ನು ಅಮಾನತುಗೊಳಿಸಿ ಗೃಹ ಸಚಿವಾಲಯದ ಆದೇಶ ಹೊರಡಿಸಿತ್ತು. ಇಬ್ಬರು ಸಬ್ ಇನ್ಸ್​ಪೆಕ್ಟರ್​ಗಳು, ನಾಲ್ವರು ಅಸಿಸ್ಟೆಂಟ್ ಸಬ್ ಇನ್ಸ್​​ಪೆಕ್ಟರ್​ಗಳು, ನಾಲ್ವರು ಹೆಡ್ ಕಾನ್ಸ್​ಟೇಬಲ್​ಗಳು ಹಾಗೂ ಓರ್ವ ಕಾನ್ ಸ್ಟೇಬಲ್​ನನ್ನು ಅಮಾನತು ಮಾಡಲಾಗಿತ್ತು. ಇದರಲ್ಲಿ ಆರು ಮಂದಿ ಪಿಸಿಆರ್ ಕರ್ತವ್ಯಕ್ಕೆ ಹಾಗೂ ಐವರು ಪೊಲೀಸರು ಪಿಕೆಟ್‌ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು.

ಇದನ್ನೂ ಓದಿ:ದೆಹಲಿ ಕಾರು ಅಪಘಾತ ಪ್ರಕರಣ : ಪೊಲೀಸ್​ ಬಂದೋಬಸ್ತ್​ನಲ್ಲಿ ಅಂಜಲಿ ಚಿತೆಗೆ ಅಗ್ನಿಸ್ಪರ್ಶ

ABOUT THE AUTHOR

...view details