ನವದೆಹಲಿ :ತೆರಿಗೆ ವ್ಯತ್ಯಾಸಗಳ ಸರಿಪಡಿಸುವ ಸೋಗಿನಲ್ಲಿ ವಿದೇಶಿಗರಿಗೆ ಕರೆ ಮಾಡುವ ಮೂಲಕ ವಂಚನೆ ಎಸಗುತ್ತಿದ್ದ 21 ಮಂದಿಯನ್ನು ದೆಹಲಿಯ ನಾರೈನಾದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಇಂಗ್ಲೆಂಡ್ನ ಲೆಕ್ಕ ಪರಿಶೋಧನಾ ಅಧಿಕಾರಿಗಳೆಂದು ವಿದೇಶಿಗರಿಗೆ ಕರೆ ಮಾಡಿ ವಂಚನೆ ಎಸಗುತ್ತಿದ್ದ ನಕಲಿ ಅಂತಾರಾಷ್ಟ್ರೀಯ ಕಾಲ್ ಸೆಂಟರ್ ಇದಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ತೆರಿಗೆ ಪಾವತಿ ವೇಳೆ ಕಂಡು ಬರುವ ವ್ಯತ್ಯಾಸಗಳ ಆಡಿಟ್ ಮಾಡಿಕೊಡುವ ನೆಪದಲ್ಲಿ ಜನರಿಂದ ಬ್ಯಾಂಕ್ ಮಾಹಿತಿ ಪಡೆದು ವಂಚಿಸುತ್ತಿದ್ದರು ಎನ್ನಲಾಗಿದೆ. ಅಲ್ಲದೆ ದಾಳಿ ವೇಳೆ ತಮ್ಮನ್ನು ಹೆಚ್ಎಂಆರ್ಸಿ (ಹರ್ ಮ್ಯಾಜೆಸ್ಟಿ ರೆವಿನ್ಯೂ ಅಂಡ್ ಕಷ್ಟಮ್ಸ್, ಯೂನೈಟೆಡ್ ಕಿಂಗ್ಡಮ್) ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ತೆರಿಗೆ ಆಡಿಟ್ ಹೆಸರಲ್ಲಿ ವಿದೇಶಿಗರಿಗೆ ವಂಚನೆ ದಾಳಿಯ ವೇಳೆ ಕಾಲ್ಸೆಂಟರ್ನಲ್ಲಿದ್ದ 34 ಕಂಪ್ಯೂಟರ್ ಮತ್ತು ಹಲವು ಆನ್ಲೈನ್ ಪರಿಕರಗಳನ್ನ ಜಪ್ತಿ ಮಾಡಲಾಗಿದೆ. ಈ ಕೃತ್ಯಕ್ಕಾಗಿ ಐಬೀಮ್, ವಿಐಸಿಐ ಡೈಯಲ್, ವಿಒಎಸ್ ವರ್ಡ್ ಫೋನ್, ಫಾರಿನ್ ಪೇಮೆಂಟ್ ಗೇಟ್ವೇ ಅಂತಹ ದುಬಾರಿ ವಿದೇಶಿ ಸಾಫ್ಟ್ವೇರ್ಗಳನ್ನು ಅವರು ಬಳಕೆ ಮಾಡುತ್ತಿದ್ದರು. ಇದಲ್ಲದೆ ಇಂಗ್ಲೆಂಡ್ನಲ್ಲಿ ತೆರಿಗೆ ಪಾವತಿಸುವ ಜನರ ದಾಖಲೆಗಳು ಸಹ ದಾಳಿ ವೇಳೆ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಓದಿ:ಕೊಡಕರ ಕಪ್ಪು ಹಣ ಪ್ರಕರಣ : ಕೇರಳ ಬಿಜೆಪಿ ರಾಜ್ಯಾಧ್ಯಕ್ಷ ಸುರೇಂದ್ರನ್ ಪುತ್ರನ ವಿಚಾರಣೆ