ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೆಕ್ಸ್ ರಾಕೆಟ್ ಜಾಲವೊಂದನ್ನು ದೆಹಲಿ ಪೊಲೀಸರು ಭೇದಿಸಿದ್ದಾರೆ. ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಈ ವೇಳೆ, ಉಜ್ಬೇಕಿಸ್ಥಾನದ ಏಳು ಹುಡುಗಿಯರನ್ನು ಪೊಲೀಸರು ರಕ್ಷಣೆ ಮಾಡಿದ್ದಾರೆ. ಬಂಧಿತ ಆರೋಪಿಗಳನ್ನು ಪ್ರದೀಪ್, ಲಾಲೇಂದ್ರ, ಸಾಬುಲ್ ಅನ್ಸಾರಿ ಮತ್ತು ಹೋಟೆಲ್ ಮ್ಯಾನೇಜರ್ ನರೇಂದ್ರ ಎಂದು ಗುರುತಿಸಲಾಗಿದೆ.
ದೆಹಲಿಯ ಮಹಿಪಾಲ್‌ಪುರದ ಹೋಟೆಲ್‌ವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಈ ನಿಖರ ಮಾಹಿತಿ ಮೇರೆಗೆ ಹೋಟೆಲ್ ಮೇಲೆ ದಾಳಿ ನಡೆಸಿದ ಪೊಲೀಸರು, ದಂಧೆಯಲ್ಲಿ ತೊಡಗಿದ್ದ ಹೋಟೆಲ್ ಮ್ಯಾನೇಜರ್ ಸೇರಿ ನಾಲ್ವರನ್ನು ಬಂಧಿಸಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ದೆಹಲಿಯ ಮಹಿಪಾಲ್ಪುರದಲ್ಲಿರುವ ಹೋಟೆಲ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸಿತ್ತು.
ಈ ಬಗ್ಗೆ ವಸಂತ್ಕುಂಜ್ ಠಾಣೆ ಪೊಲೀಸರು ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದರು. ಈ ವೇಳೆ, ಹೆಡ್ ಕಾನ್ಸ್ಸ್ಟೇಬಲ್ ಒಬ್ಬರು ಗ್ರಾಹಕರ ಸೋಗಿನಲ್ಲಿ ಹೋಟೆಲ್‌ಗೆ ತೆರಳಿದ್ದರು. ಈ ವೇಳೆ ಇಬ್ಬರು ಆರೋಪಿಗಳನ್ನು ಭೇಟಿ ಮಾಡಿದ ಹೆಡ್ ಕಾನ್ಸ್ಸ್ಟೇಬಲ್ ಅವರನ್ನು ತಮ್ಮ ಆಯ್ಕೆಯ ಹುಡುಗಿಯರ ಬಗ್ಗೆ ಕೇಳಿದ್ದಾರೆ.
ಇದನ್ನೂ ಓದಿ :ಬೆಂಗಳೂರಲ್ಲಿ ಮನೆ ಬಾಡಿಗೆ ಪಡೆದು ವೇಶ್ಯಾವಾಟಿಕೆ ದಂಧೆ ಆರೋಪ: ಎಂಟು ವಿದೇಶಿಗರನ್ನು ವಶಕ್ಕೆ ಪಡೆದ ಸಿಸಿಬಿ
ಅಲ್ಲದೇ ವಿವಿಧ ಆಯ್ಕೆಗಳು ಇರುವ ಬಗ್ಗೆ ಹೆಡ್ ಕಾನ್ಸ್ಸ್ಟೇಬಲ್ ಒಬ್ಬರ ಬಳಿ ಮಾಹಿತಿ ನೀಡಿದ್ದಾರೆ. ಈ ಮಾತುಕತೆ ವೇಳೆ ಹೋಟೆಲ್ ಮ್ಯಾನೇಜರ್ ವಿದೇಶಿ ಹುಡುಗಿಯರು ಇರುವ ಬಗ್ಗೆಯೂ ತಿಳಿಸಿದ್ದಾನೆ. ನಿಮಗೆ ಒಪ್ಪಿಗೆ ಆದರೆ ಕೊಠಡಿ ಕಾಯ್ದಿರಿಸುವುದಾಗಿ ಹೋಟೆಲ್ ಮ್ಯಾನೇಜರ್ ಹೆಡ್ ಕಾನ್ಸ್ಸ್ಟೇಬಲ್ ಬಳಿ ಹೇಳಿದ್ದಾನೆ. ಈ ವೇಳೆ ಹೋಟೆಲ್ ಮ್ಯಾನೇಜರ್ ಹೆಡ್ ಕಾನ್ಸ್ಸ್ಟೇಬಲ್ ಅವರನ್ನ ನೇರವಾಗಿ ದಂಧೆಯಲ್ಲಿ ತೊಡಗಿದ್ದ ಹುಡುಗಿಯರ ಬಳಿ ಕರೆದುಕೊಂಡು ಹೋಗಿದ್ದಾನೆ. ಈ ಆಯ್ಕೆಯಲ್ಲಿ ಒಂದನ್ನು ಆಯ್ಕೆ ಮಾಡುವಂತೆ ಹೋಟೆಲ್ ಮ್ಯಾನೇಜರ್ ಹೇಳಿದ್ದಾನೆ. ಬಳಿಕ ಒಬ್ಬಳನ್ನು ಆಯ್ಕೆ ಮಾಡಿದ ಹೆಡ್ ಕಾನ್ಸ್ಸ್ಟೇಬಲ್ ನಂತರ ತಮ್ಮ ಪೊಲೀಸ್ ತಂಡಕ್ಕೆ ಒಂದು ಮಿಸ್ ಕಾಲ್ ನೀಡಿದ್ದಾರೆ. ತಕ್ಷಣ ಪೊಲೀಸರು ಹೋಟೆಲ್ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಅಲ್ಲದೇ ಆರೋಪಿಗಳು ಬಾಲಕಿಯರನ್ನು ಹೋಟೆಲ್‌ಗೆ ಕರೆದುಕೊಂಡು ಹೋಗಲು ಬಳಸುತ್ತಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿಸಿದ್ದಾರೆ. ರಕ್ಷಣೆ ಮಾಡಲಾದ ಹುಡುಗಿಯರನ್ನು ಮಹಿಳಾ ಕೇಂದ್ರಕ್ಕೆ ಕಳುಹಿಸಲಾಗಿದೆ. ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ಮುಂದುವರೆದಿದೆ.
ರಾಜಸ್ಥಾನದಲ್ಲಿ ಅಪ್ರಾಪ್ತೆ ಮೇಲೆ ಅತ್ಯಾಚಾರ: ರಾಜಸ್ಥಾನದ ಧೋಲ್ಪುರ್ನಲ್ಲಿ ಅಪ್ರಾಪ್ತೆಯನ್ನು ಮಾವ, ಆತನ ಸಹೋದರ ಮತ್ತು ಮಗ ಅತ್ಯಾಚಾರ ನಡೆಸಿರುವ ಘಟನೆ ನಡೆದಿತ್ತು. ಬಳಿಕ ಆಕೆಯನ್ನು ವೇಶ್ಯಾವಾಟಿಕೆ ದಂಧೆಗೆ ತಳ್ಳಲಾಗಿತ್ತು. ಈ ಬಗ್ಗೆ ಸಂತ್ರಸ್ತ ಬಾಲಕಿ ಮಾವನ ಕುಟುಂಬದ ವಿರುದ್ಧ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿತ್ತು.
ಇದನ್ನೂ ಓದಿ :ಛತ್ತೀಸಗಢ: ಪತ್ನಿಯ ಕೊಂದು ತುಂಡರಿಸಿ ನೀರಿನ ಟ್ಯಾಂಕ್ನಲ್ಲಿ ಹಾಕಿದ ಕ್ರೂರಿ!