ನವದೆಹಲಿ:ನಿಷೇಧಿತ ಸ್ಟೂಡೆಂಟ್ ಇಸ್ಲಾಮಿಕ್ ಮೂಮೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ ಸದಸ್ಯನನ್ನು ದೆಹಲಿ ಪೊಲೀಸರ ವಿಶೇಷ ಘಟಕ ಬಂಧಿಸಿದೆ. ಈ ವ್ಯಕ್ತಿ ಸುಮಾರು 19 ವರ್ಷಗಳಿಂದ ದೇಶದ್ರೋಹ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ಆರೋಪದಲ್ಲಿ ಬೇಕಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಅಬ್ದುಲ್ಲಾ ಬಂಧಿತ ಆರೋಪಿಯಾಗಿದ್ದು, ಜಾಕಿರ್ ನಗರದಿಂದ ಆತನನ್ನು ಬಂಧಿಸಲಾಗಿದೆ. ಎಸಿಪಿ ಅಂತಾರ್ ಸಿಂಗ್ ಇಬ್ಬರು ಅಧಿಕಾರಿಗಳ ತಂಡವೊಂದನ್ನು ರಚಿಸಿದ್ದು, ಈ ತಂಡ ಅಬ್ದುಲ್ಲಾ ಪತ್ತೆಗಾಗಿ ಪಟ್ಟು ಬಿಡದೇ ಕೆಲಸ ಮಾಡಿತ್ತು. ಅಬ್ದುಲ್ಲಾ ಜಾಕಿರ್ ನಗರಕ್ಕೆ ಬರುವ ಮಾಹಿತಿ ತಿಳಿಯುತ್ತಿದ್ದಂತೆ ಕಾರ್ಯಾಚರಣೆ ಮಾಡಿ, ಬಂಧಿಸಲಾಗಿದೆ ಎಂದು ಪೊಲೀಸ್ ಡೆಪ್ಯುಟಿ ಕಮೀಷನರ್ ಪ್ರಮೋದ್ ಸಿಂಗ್ ಹೇಳಿದ್ದಾರೆ.