ನವದೆಹಲಿ: ರಕ್ಷಣಾ ನೆಲೆಗಳ ಸ್ಥಾಪನೆಗಳ ಕುರಿತು ಸೂಕ್ಷ್ಮ ಮಾಹಿತಿಯನ್ನು ಸೋರಿಕೆ ಮಾಡಿದ ಗಂಭೀರ ಆರೋಪದಡಿ ಭಾರತೀಯ ವಾಯುಪಡೆಯ (ಐಎಎಫ್) ಅಧಿಕಾರಿಯೊಬ್ಬರನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ. ಐಎಎಫ್ ಅಧಿಕಾರಿಯನ್ನು ಮೇ 6 ರಂದು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧನಕ್ಕೊಳಗಾಗಿರುವ ಅಧಿಕಾರಿ ಮಹಿಳೆಯೊಬ್ಬರಿಂದ ಹನಿ-ಟ್ರ್ಯಾಪ್ಗೆ ಒಳಗಾಗಿದ್ದು, ಆಕೆಯೊಂದಿಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಬಂಧಿತ ಸಾರ್ಜೆಂಟ್ ಅನ್ನು ಕಾನ್ಪುರದ ದೇವೇಂದ್ರ ಕುಮಾರ್ ಶರ್ಮಾ ಎಂದು ಗುರುತಿಸಲಾಗಿದೆ. ಇವರು ನವದೆಹಲಿಯ ಸುಬೊರೊಟೊ ಪಾರ್ಕ್‌ನಲ್ಲಿರುವ ಏರ್ಫೋರ್ಸ್ ರೆಕಾರ್ಡ್ ಆಫೀಸ್ನಲ್ಲಿ ಆಡಳಿತ ಸಹಾಯಕರಾಗಿ (ಜಿಡಿ) ಕೆಲಸ ಮಾಡುತ್ತಿದ್ದರು.