ನವದೆಹಲಿ: ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿಂದ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ಮಾಡ್ತಿದ್ದು, ಈ ವಿಷಯ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡ್ತಿದೆ. ವಿವಿಧ ಸೆಲಿಬ್ರೆಟಿಗಳು ಇದೇ ವಿಷಯವನ್ನಿಟ್ಟುಕೊಂಡು ಟ್ವೀಟ್ ಮಾಡುತ್ತಿದ್ದಂತೆ ಪ್ರಕರಣ ಮತ್ತಷ್ಟು ರೋಚಕತೆ ಪಡೆದುಕೊಂಡಿದೆ.
ದೆಹಲಿ ಪೊಲೀಸರಿಂದ ಸುದ್ದಿಗೋಷ್ಠಿ ಓದಿ: ನಮ್ಮ ಪಕ್ಷದ ದೇಶದ್ರೋಹಿಗಳನ್ನು ಸೇರಿಸಿಕೊಂಡು ಬಿಜೆಪಿ 'ಸೋನಾರ್ ಬಾಂಗ್ಲಾ' ಕನಸು: ಮಮತಾ
ಇದೇ ವಿಚಾರವಾಗಿ ದೇಹಲಿ ಪೊಲೀಷ್ ಕಮೀಷನರ್ ಪ್ರವೀರ್ ರಂಜನ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ರೈತರ ಪ್ರತಿಭಟನೆಯಲ್ಲಿ ಕೆಲವೊಂದು ಸ್ಥಾಪಿತ ಹಿತಾಸಕ್ತಿಗಳು ಸಾಮಾಜಿಕ ಜಾಲತಾಣದಲ್ಲಿ ದೇಶದ್ರೋಹ ಹಾಗೂ ಪ್ರಚೋದನಾತ್ಮಕ ಟ್ವೀಟ್ ಮಾಡಿದ್ದು, ಇದರ ಮೇಲೆ ನಾವು ಮೊದಲಿನಿಂದಲೂ ಕಣ್ಣಿಟ್ಟಿದ್ದು, ಇದೀಗ ಪ್ರಕರಣ ದಾಖಲು ಮಾಡಿಕೊಂಡಿದ್ದೇವೆ ಎಂದು ಹೇಳಿದರು.
ರೈತರ ಪ್ರತಿಭಟನೆ ಇಟ್ಟುಕೊಂಡು ಸುಮಾರು 300 ಪ್ರಚೋದನಾತ್ಮಕ ಸಂದೇಶಗಳು ಟ್ವೀಟ್ ಆಗಿದ್ದು, ಇದೀಗ ನಾವು ಪ್ರಕರಣ ದಾಖಲು ಮಾಡಿಕೊಂಡಿದ್ದು, ದೆಹಲಿ ಸೈಬರ್ ಪೊಲೀಸರು ತನಿಖೆ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಯಾವುದೇ ವ್ಯಕ್ತಿಯ ಮೇಲೆ ತಾವು ಪ್ರಕರಣ ದಾಖಲು ಮಾಡಿಕೊಂಡಿಲ್ಲ. ಆದರೆ, ಟೂಲ್ಕಿಟ್ನ ಸೃಷ್ಟಿಕರ್ತರ ವಿರುದ್ಧ ಮಾತ್ರ ತನಿಖೆ ನಡೆಸಲಾಗುತ್ತದೆ ಎಂದಿದ್ದಾರೆ. ಐಪಿಸಿ ಸೆಕ್ಷನ್ 124 ಎ,153 ಎ ,153 ಹಾಗೂ 120ಬಿ ಅಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಎಫ್ಐಆರ್ನಲ್ಲಿ ಯಾವುದೇ ಹೆಸರು ನಮೋದಿಸಿಲ್ಲ ಎಂದಿದ್ದಾರೆ.