ನವದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಮತ್ತೆ ಏರಿಕೆಯಾಗಿದ್ದು, ಕ್ರಮವಾಗಿ ಲೀಟರ್‌ಗೆ 89.88 ರೂ ಮತ್ತು 80.27 ರೂ. ದರ ನಿಗದಿಯಾಗಿದೆ. ಚೆನ್ನೈ, ಮುಂಬೈನಲ್ಲಿ ಪೆಟ್ರೋಲ್ ದರ ರೂ. 97. 32 ಇದ್ದು, ವಾಹನ ಸವಾರರ ಜೇಬಿಗೆ ಕತ್ತರಿ ಬೀಳುತ್ತಿದೆ.
ಪೆಟ್ರೋಲ್ ಬೆಲೆ
By
Published : Feb 18, 2021, 9:30 AM IST
ನವದೆಹಲಿ: ರಾಷ್ಟ್ರ ರಾಜಧಾನಿ ಸೇರಿದಂತೆ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರುತ್ತಲೇ ಇದೆ. ಚೆನ್ನೈ ಮತ್ತು ಮುಂಬೈನಲ್ಲಿ ಪಟೆಟ್ರೋಲ್ ದರ ರೂ. 97.32 ಆಗಿದ್ದು, ಶತಕ ಸಮೀಸುತ್ತಿದೆ.
ಗುರುವಾರ ಬೆಳಗ್ಗೆ ಕ್ರಮವಾಗಿ ಲೀಟರ್‌ಗೆ 89.88 ರೂ ಮತ್ತು 80.27 ರೂ. ದರ ನಿಗದಿಯಾಗಿದೆ. ಪೆಟ್ರೋಲ್ ಬೆಲೆಯ ಬೆಲೆ ಇಂದು ಲೀಟರ್‌ಗೆ 34 ಪೈಸೆ ಏರಿಕೆಯಾದರೆ, ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 32 ಪೈಸೆ ಏರಿಕೆಯಾಗಿದೆ.
ಫೆಬ್ರವರಿ 14 ರಂದು ದೆಹಲಿಯಲ್ಲಿ ಗ್ಯಾಸ್ ಸಿಲಿಂಡರ್ (14.2 ಕೆಜಿ ) ಬೆಲೆಯು 50 ರೂ.ಗೆ ಏರಿಕೆಯಾಗಿದ್ದು, ಎಲ್‌ಪಿಜಿ ಅನಿಲದ ವೆಚ್ಚವನ್ನು ಪ್ರತಿ ಸಿಲಿಂಡರ್‌ಗೆ 769 ರೂ.ಆಗಿದೆ.
ಈ ಕೆಳಗಿನ ಮೆಟ್ರೋ ನಗರಗಳಲ್ಲಿ ಪ್ರತಿ ಲೀಟರ್ ಮತ್ತು ಡೀಸೆಲ್ ಬೆಲೆ ಇಂತಿದೆ.