ನವದೆಹಲಿ: ತೈಲ ಮಾರುಕಟ್ಟೆ ಕಂಪನಿಗಳು ಕಳೆದ 18 ದಿನಗಳಿಂದ ಚುನಾವಣೆ ಹಿನ್ನೆಲೆ ರಾಜ್ಯದ ಬೆಲೆ ಏರಿಕೆಯನ್ನು ತಡೆಹಿಡಿದಿದ್ದು, ಇದೀಗ ನಷ್ಟವನ್ನು ಸರಿದೂಗಿಸುತ್ತಿರುವುದರಿಂದ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 25 ಪೈಸೆ ಮತ್ತು 30 ಪೈಸೆ ಏರಿಕೆಯಾಗಿದೆ.
18 ದಿನಗಳ ವಿರಾಮದ ನಂತರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಮಂಗಳವಾರ ಕ್ರಮವಾಗಿ ಲೀಟರ್ಗೆ 15 ಪೈಸೆ ಮತ್ತು 18 ಪೈಸೆ ಏರಿಕೆಯಾಗಿದ್ದು, ಬುಧವಾರ 19 ಪೈಸೆ ಮತ್ತು 21 ಪೈಸೆ ಏರಿಕೆಯಾಗಿದೆ.