ನವದೆಹಲಿ:ಮೈಕೊರೆವ ಚಳಿಯಿಂದ ಹೊರ ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ರಕ್ಷಣೆ ನೀಡುವ ಸಲುವಾಗಿ ಏಮ್ಸ್ ಆಸ್ಪತ್ರೆ ಬಳಿ ಟೆಂಟ್ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಆಶ್ರಯ ಪಡೆದವರು ವಿದ್ಯುತ್ ಸಮಸ್ಯೆಯಿಂದಾಗಿ ಪರದಾಡುತ್ತಿದ್ದಾರೆ.
ಏಮ್ಸ್ ಬಳಿಯ ರಾತ್ರಿ ಟೆಂಟ್ಗಳಿಗೆ ವಿದ್ಯುತ್ ಸಮಸ್ಯೆ; ಆಶ್ರಿತರ ಪರದಾಟ - ನವದೆಹಲಿ ಚಳಿ ನ್ಯೂಸ್
ಏಮ್ಸ್ ಆಸ್ಪತ್ರೆ ಬಳಿ ಟೆಂಟ್ಗಳನ್ನು ನಿರ್ಮಾಣ ಮಾಡಲಾಗಿದ್ದು, ಮೈಕೊರೆವ ಚಳಿಯಿಂದ ಹೊರರೋಗಿಗಳು ಮತ್ತು ಅವರ ಸಂಬಂಧಿಕರಿಗೆ ರಕ್ಷಣೆ ನೀಡಲಾಗುತ್ತಿದೆ. ಆದರೆ ಟೆಂಟ್ಗಳಲ್ಲಿ ವಿದ್ಯುತ್ ಸೌಲಭ್ಯವಿಲ್ಲದೇ ಆಶ್ರಿತರು ಪರದಾಡುತ್ತಿದ್ದಾರೆ.
ವಿದ್ಯುತ್ ಕೊರತೆಯಿಂದಾಗಿ ಪರದಾಡುತ್ತಿರುವ ಏಮ್ಸ್ ಬಳಿಯ ರಾತ್ರಿ ಟೆಂಟ್ ಆಶ್ರಿತರು
ಟೆಂಟ್ಗಳು ಸುಮಾರು 20 ಮಂದಿಗೆ ಆಶ್ರಯ ನೀಡುವ ಸಾಮರ್ಥ್ಯ ಹೊಂದಿದ್ದು, ಆಶ್ರಯ ಕೋರಿ ಬರುವವರ ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಿ ನಂತರ ಅವಕಾಶ ಮಾಡಿಕೊಡಲಾಗುತ್ತದೆ. ಟೆಂಟ್ ಸೌಲಭ್ಯ ಶುರುವಾದಾಗಿನಿಂದ ಇಲ್ಲಿ ವಿದ್ಯುತ್ ಸಮಸ್ಯೆಯಿದ್ದು, ಬೆಳಕಿಗಾಗಿ ಚಾರ್ಜಿಂಗ್ ಲೈಟ್ಗಳನ್ನು ಅವಲಂಬಿಸಿದ್ದೇವೆ ಎಂದು ಟೆಂಟ್ ನ ಉಸ್ತುವಾರಿ ಹೇಳುತ್ತಾರೆ.