ನವದೆಹಲಿ:ಜಗತ್ತಿನಲ್ಲಿಯೇ ಅತೀ ಹೆಚ್ಚು ವಾಯುಮಾಲಿನ್ಯವಿರುವ 30 ನಗರಗಳ ಪೈಕಿ 22 ನಗರಗಳು ಭಾರತದಲ್ಲಿವೆ. ಈ ಪೈಕಿ ರಾಜಧಾನಿ ನವದೆಹಲಿ ವಿಶ್ವದಲ್ಲಿಯೇ ಹೆಚ್ಚು ವಾಯುಮಾಲಿನ್ಯವುಳ್ಳ ನಗರ ಎಂಬ ಕುಖ್ಯಾತಿ ಪಡೆದಿದೆ. ವಾಯುಮಾಲಿನ್ಯದಲ್ಲಿ 10ನೇ ಸ್ಥಾನದಲ್ಲಿದೆ.
106 ದೇಶಗಳ ಗುಣಮಟ್ಟವನ್ನ ಆಧರಿಸಿ ವರದಿ:
ಸ್ವಿಸ್ ಮೂಲದ ಐಕ್ಯೂಏರ್ ಸಂಸ್ಥೆಯು ಬಿಡುಗಡೆ ಮಾಡಿರುವ ‘ವಿಶ್ವದ ವಾಯು ಗುಣಮಟ್ಟ ವರದಿ 2020’ ವರದಿಯಲ್ಲಿ ಈ ಅಂಶ ದಾಖಲಾಗಿದೆ. ವರದಿಯ ಪ್ರಕಾರ, ವಾಯುಮಾಲಿನ್ಯ ಗರಿಷ್ಠವಾಗಿರುವ 10 ನಗರಗಳಲ್ಲಿ ಚೀನಾದ ಕ್ಸಿನ್‌ಜಿಯಾಂಗ್ ಮೊದಲ ಸ್ಥಾನದಲ್ಲಿದ್ದು, ನಂತರದ 9 ಸ್ಥಾನಗಳಲ್ಲಿ ಭಾರತದ ನಗರಗಳಿವೆ. ವಾಯುಮಾಲಿನ್ಯ ಕುರಿತು ನಗರಗಳ ಜಾಗತಿಕ ಶ್ರೇಣಿಯನ್ನು 106 ದೇಶಗಳಿಂದ ಪಡೆದ ಗುಣಮಟ್ಟ ಮಾಪಕದ ಪಿಎಂ 2.5 ಅಂಕಿ ಅಂಶ ಆಧರಿಸಿ ನೀಡಲಾಗಿದೆ. ಸರ್ಕಾರಗಳ ಅಧೀನದಲ್ಲಿರುವ ಸಂಸ್ಥೆಗಳು ನೀಡಿದ್ದ ಅಂಕಿ ಅಂಶಗಳನ್ನು ಈ ವರದಿ ಆಧರಿಸಿದೆ. ಆದರೆ ನವದೆಹಲಿಯಲ್ಲಿ ವಾಯುವಿನ ಗುಣಮಟ್ಟ 2019ಕ್ಕೆ ಹೋಲಿಸಿದರೆ 2020ರಲ್ಲಿ ಶೇ .15ರಷ್ಟು ಉತ್ತಮಗೊಂಡಿದೆ ಎನ್ನಲಾಗುತ್ತಿದೆ.
ಓದಿ: ಪಾಕಿಸ್ತಾನವು ವಿಶ್ವದ ಎರಡನೇ ಅತಿ ಹೆಚ್ಚು ಕಲುಷಿತ ರಾಷ್ಟ್ರ: ಐಕ್ಯೂಏರ್ ವರದಿ
ಕೋವಿಡ್‌ನಿಂದಾಗಿ ಜಾರಿಗೊಳಿಸಲಾಗಿದ್ದ ಲಾಕ್ಡೌನ್ನಿಂದಾಗಿ ವಾಯುಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ. ವಾಹನಗಳ ಅತಿಯಾದ ಸಂಚಾರ, ಅಡುಗೆಗೆ ಅನಿಲಗಳ ಬಳಕೆ, ಕೈಗಾರಿಕೆ, ನಿರ್ಮಾಣ ಚಟುವಟಿಕೆ ಮತ್ತು ತ್ಯಾಜ್ಯಗಳು, ಕೃಷಿ ತ್ಯಾಜ್ಯಗಳನ್ನು ಸುಡುವ ಪ್ರಕ್ರಿಯೆಗಳಿಂದ ಭಾರತದಲ್ಲಿ ವಾಯುಮಾಲಿನ್ಯ ಪ್ರಮಾಣವು ಹೆಚ್ಚಾಗಿದೆ. ಈ ಪೈಕಿ ಬಹುತೇಕ ನಗರಗಳಲ್ಲಿ ಮಾಲಿನ್ಯಕ್ಕೆ ವಾಹನಗಳ ಕೊಡುಗೆ ಹೆಚ್ಚಿದ್ದು, ಪಿಎಂ2.5 ಆಗಿದೆ ಎಂದು ವರದಿ ವಿವರಿಸಿದೆ.