'ವಜೀರ್, ನಿನ್ನ ಪ್ರಾರ್ಥನೆಗೆ ತಾಕತ್ತಿದ್ದರೆ ಮಸೀದಿಯನ್ನು ಅಲ್ಲಾಡಿಸಿ ತೋರಿಸು, ಇಲ್ಲದಿದ್ದರೆ ಬಾ ಎರಡು ಗುಟುಕು ಕುಡಿದು ಮಸೀದಿ ಅಲ್ಲಾಡುವುದನ್ನು ನೋಡು..' ಈ ವಾಕ್ಯವನ್ನು ಎಲ್ಲಾದರೂ ಕೇಳಿದ್ದೀರಾ? ಈಗಲೂ ಕೂಡಾ ಈ ವಾಕ್ಯವನ್ನು ಬರೆದವರ ಶಾಯರಿಗಳು ಜನಮಾನಸದಲ್ಲಿ ಹರಿದಾಡುತ್ತಿವೆ. ಜೀವನ ಪಾಠ, ಸ್ನೇಹ, ಪ್ರೀತಿ, ತತ್ವ ಎಲ್ಲದರ ಬಗ್ಗೆಯೂ ಸರಳವಾಗಿ ತನ್ನ ಶಾಯರಿಗಳಲ್ಲಿ ಅಥವಾ ಗಜಲ್ಗಳಲ್ಲಿ ತಿಳಿಸಿಕೊಡುತ್ತಿದ್ದವರು ಮಿರ್ಜಾ ಗಾಲಿಬ್.
ಗಾಲಿಬ್ರನ್ನು ಅವರ ಶಾಯರಿಗಳಿಗಾಗಿ ಈಗಲೂ ನೆನಪಿಸಿಕೊಳ್ಳುವ, ಆರಾಧಿಸುವ ಅಭಿಮಾನಿಗಳಿದ್ದಾರೆ. ಸ್ನೇಹ, ಪ್ರೀತಿಯನ್ನು ಹಂಚುವ ಸಾಧನಗಳಾಗಿ ಗಾಲಿಬ್ರ ಶಾಯರಿಗಳು ಬಳಕೆಯಾಗುತ್ತಿವೆ. ಆದರೆ ಇಂಥ ಮಹಾನ್ ವ್ಯಕ್ತಿಯ ಭವ್ಯವಾದ ಸಮಾಧಿ ಶಿಥಿಲಾವಸ್ಥೆಯಲ್ಲಿದೆ.
ದೆಹಲಿಯ ನಿಜಾಮುದ್ದೀನ್‌ನಲ್ಲಿರುವ ಮಿರ್ಜಾ ಗಾಲಿಬ್ ಅವರ ಸಮಾಧಿಯನ್ನು ಈಟಿವಿ ಭಾರತ್ ಪ್ರತಿನಿಧಿ ಪರಿಶೀಲಿಸಿದ್ದು, ಅದು ಶಿಥಿಲಾವಸ್ಥೆಯಲ್ಲಿದೆ ಎಂದು ತಿಳಿದುಬಂದಿದೆ. ಪುರಾತತ್ವ ಇಲಾಖೆಯವರು ಸಮಾಧಿಯನ್ನು ದುರಸ್ತಿ ಮಾಡಲು ಸಾಧ್ಯವಾಗಿಲ್ಲ.