ಕರ್ನಾಟಕ

karnataka

ETV Bharat / bharat

ಸರ್ಕಾರದ ಯೋಜನೆಗಳನ್ನು ಪಡೆಯಲು ದೆಹಲಿಗರಿಗಾಗಿ 'ಮಿಸ್ಡ್ ಕಾಲ್ ನಂಬರ್' ಸೇವೆ ಆರಂಭಿಸಿದ ದೆಹಲಿ ಸರ್ಕಾರ - ಮಿಸ್ಡ್ ಕಾಲ್ ನಂಬರ್ ಸೇವೆ

ದೆಹಲಿ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಜನರಿಗೆ ಅನುಕೂಲವಾಗುವಂತೆ 'ಮಿಸ್ಡ್ ಕಾಲ್ ನಂಬರ್' ಸೇವೆಯನ್ನು ಪ್ರಾರಂಭಿಸಿದ್ದಾರೆ.

Rajendra Pal Gautam
ಮಿಸ್ಡ್ ಕಾಲ್ ನಂಬರ್ ಸೇವೆ

By

Published : Apr 13, 2021, 11:44 AM IST

ನವದೆಹಲಿ:ಸರ್ಕಾರದ ವಿವಿಧ ಯೋಜನೆಗಳ ಲಾಭ ಪಡೆಯಲು ಜನರಿಗೆ ಅನುಕೂಲವಾಗಲಿ ಎಂದು ದೆಹಲಿ ಸಮಾಜ ಕಲ್ಯಾಣ ಸಚಿವ ರಾಜೇಂದ್ರ ಪಾಲ್ ಗೌತಮ್ ಅವರು 'ಮಿಸ್ಡ್ ಕಾಲ್ ನಂಬರ್' ಸೇವೆ ಪ್ರಾರಂಭಿಸಿದ್ದಾರೆ.

ದೆಹಲಿ ಇತರೆ ಹಿಂದುಳಿದ ವರ್ಗ ಆಯೋಗ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 'ಮಿಸ್ಡ್ ಕಾಲ್ ನಂಬರ್' ಸೇವೆಯನ್ನು (8447004400) ಸಚಿವರು ಘೋಷಿಸಿದ್ದಾರೆ.

ಇತರ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಹರಿ ಓಂ ದೇಧಾ ಅವರ ಮಾಧ್ಯಮ ಹೇಳಿಕೆಯ ಪ್ರಕಾರ, ಸಚಿವರ ಸಲಹೆಯಂತೆ ಇದಕ್ಕೆ ಸಲಹಾ ಸಮಿತಿ ರಚಿಸಲಾಗಿದ್ದು, ದೆಹಲಿಯ ಪ್ರತಿ ವಿಧಾನಸಭಾ ಕ್ಷೇತ್ರದಿಂದ ಐವರು ಸದಸ್ಯರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗುತ್ತದೆ.

ಈ 350 ಸದಸ್ಯರನ್ನು ನಾಮನಿರ್ದೇಶನ ಮಾಡುವಂತೆ ಆಯೋಗವು ಈಗಾಗಲೇ ಶಾಸಕರಿಗೆ ಪತ್ರಗಳನ್ನು ಬರೆದಿದೆ. ಸಲಹಾ ಸಮಿತಿಯ ಸದಸ್ಯರು ಆಯಾ ಪ್ರದೇಶಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಒಬಿಸಿ ಸಮುದಾಯಗಳಿಗೆ ಸಂಬಂಧಿಸಿದ ಸರ್ಕಾರಿ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ABOUT THE AUTHOR

...view details