ಕರ್ನಾಟಕ

karnataka

ETV Bharat / bharat

ನೆರೆಯ ನಗರಗಳಿಂದ ದೆಹಲಿಗೆ ಬರುವ ಮೆಟ್ರೋ ಸೇವೆ ಸ್ಥಗಿತ - ನೆರೆಯ ನಗರಗಳಿಂದ ದೆಹಲಿಗೆ ಬರುವ ಮೆಟ್ರೋ ಸೇವೆ ಸ್ಥಗಿತ

ರೈತರ ಪ್ರತಿಭಟನೆ ಇರುವ ಹಿನ್ನೆಲೆ ನೆರೆಯ ನಗರಗಳಿಂದ ದೆಹಲಿಗೆ ಬರುವ ಮೆಟ್ರೋ ಸೇವೆಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೇ ದೆಹಲಿಯಿಂದ ಎನ್‌ಸಿಆರ್ ವಿಭಾಗಗಳ ಕಡೆಗೆ ಮೆಟ್ರೋ ಸೇವೆಗಳು ಲಭ್ಯವಿರುತ್ತವೆ.

ಮೆಟ್ರೋ ಸೇವೆ ಸ್ಥಗಿತ
ಮೆಟ್ರೋ ಸೇವೆ ಸ್ಥಗಿತ

By

Published : Nov 26, 2020, 7:18 PM IST

ನವದೆಹಲಿ:ಕೇಂದ್ರದ ಹೊಸ ಕೃಷಿ ಕಾನೂನುಗಳ ವಿರುದ್ಧ ರೈತರು 'ದೆಹಲಿ ಚಲೋ' ಪ್ರತಿಭಟನಾ ಮೆರವಣಿಗೆಯನ್ನು ನಡೆಸುತ್ತಿದ್ದು, ಈ ಹಿನ್ನೆಲೆ ದೆಹಲಿಯ ನೆರೆಯ ನಗರಗಳಿಂದ ರಾಷ್ಟ್ರ ರಾಜಧಾನಿಗೆ ಬರುವ ಮೆಟ್ರೋ ಸೇವೆಯನ್ನು ಸ್ಥಗಿತಗೊಳಿಸಲಾಗುವುದು ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ದೆಹಲಿಯಿಂದ ಎನ್‌ಸಿಆರ್ ವಿಭಾಗಗಳಿಗೆ ಮೆಟ್ರೋ ಸೇವೆ ಲಭ್ಯವಿರಲಿದೆ. ಮಧ್ಯಾಹ್ನ 2 ರಿಂದ ದೆಹಲಿಯಿಂದ ಎನ್‌ಸಿಆರ್ ವಿಭಾಗಗಳ ಕಡೆಗೆ ಮೆಟ್ರೋ ಸೇವೆ ಲಭ್ಯವಿದೆ. ಆದಾಗ್ಯೂ ಮುಂದಿನ ಸೂಚನೆ ಬರುವವರೆಗೂ ಭದ್ರತಾ ಕಾರಣದಿಂದ ಎನ್‌ಸಿಆರ್ ವಿಭಾಗಗಳಿಂದ ದೆಹಲಿಗೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ" ಎಂದು ಡಿಎಂಆರ್‌ಸಿ ಟ್ವಿಟ್ಟರ್​ನಲ್ಲಿ ಹೇಳಿದೆ.

ರೈತರ ಪ್ರತಿಭಟನೆಯಿಂದಾಗಿ ರೈಲುಗಳು ಗುರುವಾರ ಮಧ್ಯಾಹ್ನ 2 ಗಂಟೆಯವರೆಗೆ ರಾಷ್ಟ್ರ ರಾಜಧಾನಿಯ ಗಡಿ ದಾಟುವುದಿಲ್ಲ ಎಂದು ಡಿಎಂಆರ್‌ಸಿ ಬುಧವಾರ ತಿಳಿಸಿತ್ತು.

ದೆಹಲಿಯನ್ನು ಸಂಪರ್ಕಿಸುವ ಐದು ಹೆದ್ದಾರಿಗಳ ಮೂಲಕ ರೈತರು ರಾಷ್ಟ್ರರಾಜಧಾನಿಗೆ ಬರಲಿದ್ದಾರೆ. ದೆಹಲಿ ಪೊಲೀಸರು ಪ್ರತಿಭಟನೆಗೆ ಸಂಬಂಧಿಸಿದಂತೆ ವಿವಿಧ ರೈತ ಸಂಸ್ಥೆಗಳಿಂದ ಬಂದ ಎಲ್ಲಾ ಮನವಿಗಳನ್ನು ತಿರಸ್ಕರಿಸಿದ್ದಾರೆ. ಕೋವಿಡ್​-19 ಸಾಂಕ್ರಾಮಿಕ ರೋಗದ ಹಿನ್ನೆಲೆ ಯಾವುದೇ ಸಭೆ ನಡೆಸಲು ನಗರಕ್ಕೆ ಬಂದರೆ ಅವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಸಲಾಗಿದೆ.

ರಾಷ್ಟ್ರರಾಜಧಾನಿಯ ಗಡಿ ಪ್ರದೇಶಗಳಲ್ಲಿ ದೆಹಲಿ ಪೊಲೀಸ್ ಸಿಬ್ಬಂದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಪ್ರತಿಭಟನೆಯನ್ನು ಗಮನದಲ್ಲಿಟ್ಟುಕೊಂಡು ಒಳಬರುವ ಎಲ್ಲಾ ವಾಹನಗಳನ್ನು ಪರಿಶೀಲಿಸಲಾಗುತ್ತಿದೆ.

ABOUT THE AUTHOR

...view details