ನವದೆಹಲಿ: ಮಂಗಳವಾರ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ಏಕದಿನ ಅಂತಾರಾಷ್ಟ್ರೀಯ (ODI) ಪಂದ್ಯದ ದೃಷ್ಟಿಯಿಂದ ದೆಹಲಿ ಮೆಟ್ರೋ ತನ್ನ ಕೊನೆಯ ರೈಲು ಸಮಯ ವಿಸ್ತರಿಸಿದೆ.
ಪಂದ್ಯ ಮುಗಿದ ನಂತರ ಈ ಹತ್ತಿರದ ಮೆಟ್ರೋ ನಿಲ್ದಾಣಗಳಲ್ಲಿ ಹಠಾತ್ ರಷ್ ನಿರೀಕ್ಷಿಸಲಾಗಿದೆ. ದೆಹಲಿ ಮೆಟ್ರೋ ತನ್ನ ಎಲ್ಲ ಮಾರ್ಗಗಳಲ್ಲಿ ಸುಮಾರು 30-45 ನಿಮಿಷಗಳವರೆಗೆ ತನ್ನ ಕೊನೆಯ ರೈಲು ಸಮಯವನ್ನು ವಿಸ್ತರಿಸುವ ಮೂಲಕ ಹೆಚ್ಚುವರಿ ರೈಲು ಪ್ರಯಾಣಗಳನ್ನು (ಸುಮಾರು 48) ನಿರ್ವಹಿಸುತ್ತದೆ. ಪ್ರೇಕ್ಷಕರು ಹಾಗೂ ಜನರು ಮೆಟ್ರೋವನ್ನು ಬಳಸುವ ಮೂಲಕ ತಮ್ಮ ಗಮ್ಯಸ್ಥಾನಗಳನ್ನು ಸರಾಗವಾಗಿ ತಲುಪಲು ಅನುವು ಮಾಡಿಕೊಡುತ್ತದೆ ಎಂದು ದೆಹಲಿ ಮೆಟ್ರೋ ರೈಲು ನಿಗಮ (ಡಿಎಂಆರ್‌ಸಿ) ಹೇಳಿಕೆಯಲ್ಲಿ ತಿಳಿಸಿದೆ.
ಮಂಗಳವಾರದ ಪರಿಷ್ಕೃತ ರೈಲು ವೇಳಾಪಟ್ಟಿ:ಇದೇ ವೇಳೆ ದೆಹಲಿ ಸಂಚಾರ ಪೊಲೀಸರು ಕೆಲವು ಸಲಹೆಯನ್ನು ನೀಡಿದ್ದಾರೆ. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಹಳೇ ದೆಹಲಿ ಮತ್ತು ನಿಜಾಮುದ್ದೀನ್ ರೈಲು ನಿಲ್ದಾಣಗಳಿಗೆ ಹೋಗುವ ಪ್ರಯಾಣಿಕರು ಹಾಗೂ ಐಎಸ್‌ಬಿಟಿ ವಿಳಂಬವನ್ನು ತಪ್ಪಿಸಲು ಬೇಗ ಹೊರಡುವಂತೆ ಪೊಲೀಸರು ಸೂಚಿಸಿದ್ದಾರೆ.